»   » ರಾಮ್ ಚಿತ್ರದ ಬೆಡಗಿ ಪ್ರಿಯಾಮಣಿ ಮದ್ವೆಯಂತೆ

ರಾಮ್ ಚಿತ್ರದ ಬೆಡಗಿ ಪ್ರಿಯಾಮಣಿ ಮದ್ವೆಯಂತೆ

Posted By:
Subscribe to Filmibeat Kannada

ಪ್ರಿಯಾ ವಾಸುದೇವ ಮಣಿ ಅಯ್ಯರ್ ಅಂದ್ರೆ ಯಾರಿಗೆ ತಾನೆ ಅರ್ಥ ಆಗುತ್ತೆ! ಅದೇ ಶಾರ್ಟ್ ಅಂಡ್ ಸ್ವೀಟಾಗಿ ಪ್ರಿಯಾಮಣಿ ಅಂದ್ರೆ ಓ ಗೊತ್ತಾಯ್ತು ಬಿಡಿ 'ರಾಮ್' ಚಿತ್ರದ ನಾಯಕಿ ಅಲ್ವಾ ಅಂತಾರೆ. ಹೌದು ಇಷ್ಟಕ್ಕೂ ಆಕೆಗೇನಾಗಿದೆ ಅಂತೀರಾ? ಗಾಬರಿ ಬೀಳುವಂತಹದ್ದೇನು ಇಲ್ಲ, ಶೀಘ್ರದಲ್ಲೆ ಆಕೆ ಮದುವೆಯಾಗಲಿದ್ದಾರೆ ಎಂಬುದು ಸುದ್ದಿ.

ಓಹ್ ಅಷ್ಟೇನಾ ಎಂದು ಹಗುರವಾಗಿ ತಗೋಬೇಡಿ. ಹಾಗಂತ ಏನು ಸೀರಿಯಸ್ಸಾಗೂ ಯೋಚನೆ ಮಾಡುವ ಅಗತ್ಯವಿಲ್ಲ.ಕ್ಯಾಶುಯಲ್ ಆಗಿ ತಗೊಂಡರಷ್ಟೆ ಸಾಕು. ಯಾಕಂದ್ರೆ ಆಕೆ ಮದುವೆಯಾಗುತ್ತಿರುವುದು ಕನ್ನಡದ ಹುಡುಗನನ್ನೇನು ಅಲ್ಲ. ತೆಲುಗಿನ ಉದಯೋನ್ಮುಖ ನಟ ತರುಣ್ ರನ್ನು ಕೈಹಿಡಿಯಲಿದ್ದಾರೆ.

ಸದ್ಯಕ್ಕೆ ಪ್ರಿಯಾಮಣಿ ಒಪ್ಪಿಕೊಂಡಿರುವ ಚಿತ್ರಗಳಲ್ಲೆಲ್ಲಾ ಮುಗೀಬೇಕಂತೆ. ಆನಂತರವಷ್ಟೆ ಗಟ್ಟಿಮೇಳ ಎನ್ನುತ್ತವೆ ಮೂಲಗಳು. 2007ರಲ್ಲಿ ಇವರಿಬ್ಬರೂ 'ನವವಸಂತಂ' ಎಂಬ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಆಗಾಗ ಇವರುಗಳ ಹೆಸರು ಗಾಸಿಪ್ ಕಾಲಂಗಳಲ್ಲಿ ಸುಳಿದಾಡಿದ್ದೂ ಉಂಟು. ಬಳಿಕ ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್ ಅಂತ ಹೇಳಿ ದಿಕ್ಕುತಪ್ಪಿಸುವ ಪ್ರಯತ್ನವನ್ನು ಮಾಡಿದ್ದರು.

ಇದೀಗ ಅವರಿಬ್ಬರ ನಡುವಿನ ಸ್ನೇಹ ಸಂಬಂಧ ಪ್ರೀತಿ ಪ್ರೇಮ ಪ್ರಣಯವಾಗಿ ಮಾರ್ಪಟ್ಟು ಮದುವೆಯಲ್ಲಿ ಮುಕ್ತಾಯವಾಗುವ ಹಂತಕ್ಕೆ ತಲುಪಿದೆ. ಆದರೆ ತರುಣ್ ತೆಲುಗು ಚಿತ್ರರಂಗದ ಮತ್ತೊಬ್ಬ ನಟಿ ಆರ್ತಿ ಅಗರ್ವಾಲ್ ರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿಯೂ ಇದೆ. ಆದರೆ ತರುಣ್ ರ ತಾಯಿ ಇದನ್ನು ಸುತಾರಾಂ ಒಪ್ಪುವುದಿಲ್ಲ. ಆರ್ತಿಯನ್ನು ಕಂಡರೆ ನನ್ನ ಮಗನಿಗೆ ಅಷ್ಟಕ್ಕಷ್ಟೆ ಎನ್ನುತ್ತಾರೆ.

ಇತ್ತ ಪ್ರಿಯಾಮಣಿ ಹೆಸರು ಹಲವಾರು ನಟರ ಜೊತೆ ಕೇಳಿಬರುತ್ತಿದೆ. ನಟರಾದ ವಿಶಾಲ್, ರಾಜಾ,ಪೃಥ್ವಿರಾಜ್, ಜಗಪತಿ ಬಾಬು ಹೀಗೆ ಪಟ್ಟಿ ಬೆಳೆಯುತ್ತದೆ. ಆದರೆ ಪ್ರಿಯಾಮಣಿ ಯಾರನ್ನು ಮದುವೆಯಾಲಿದ್ದಾರೆ ಎಂಬ ಕುತೂಹಲ ಮಾತ್ರ ಆಕೆಯ ಅಭಿಮಾನಿಗಳಿಗೆ ಇದ್ದೇ ಇದೆ. ಸದ್ಯಕ್ಕೆ ಪ್ರಿಯಾಮಣಿ, ಗೋಲ್ಡನ್ ಸ್ಟಾರ್ ಗಣೇಶ್ ಜೊತೆ 'ಏನೋ ಒಂಥರಾ' ಈ ಪ್ರೀತಿಯು ಈ ರೀತಿ ಶುರುವಾದ ಆನಂತರ ಅಂತಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada