»   »  ಯೋಗರಾಜ ಭಟ್ಟರ ಮನಸಾರೆ ಸೆಟ್ಟೇರಿದೆ

ಯೋಗರಾಜ ಭಟ್ಟರ ಮನಸಾರೆ ಸೆಟ್ಟೇರಿದೆ

Posted By:
Subscribe to Filmibeat Kannada

*ಜಯಂತಿ

Yogaraj Bhat starts new movie Manasare
ನಿರ್ದೇಶಕ ಯೋಗರಾಜ ಭಟ್ಟರ 'ಮನಸಾರೆ' ಚಿತ್ರ ಸೆಟ್ಟೇರಿದೆ. ಇದು ವಿಶೇಷವಲ್ಲ. ಚಿತ್ರದ ನಾಯಕ ಧ್ಯಾನ್. ಇದರಲ್ಲಿ ಕೊಂಚ ಅಚ್ಚರಿಯಿದೆ. ಮನಸಾರೆಯ ಮೊದಲ ಆಯ್ಕೆ ದಿಗಂತ್. ಅವರ ಸ್ಥಾನದಲ್ಲಿ ಧ್ಯಾನ್ ಕಾಣಿಸಿಕೊಂಡಿರುವುದು ಅಚ್ಚರಿ. ಇನ್ನು ನಾಯಕಿ ವಿಷಯ. ಅಂದ್ರಿತಾ ರೇ , ಧ್ಯಾನ್‌ಗೆ ಜೋಡಿ. ಜಂಗ್ಲಿಯ ನಂತರ ಆಕೆಗೆ ದಿಢೀರ್ ಬೇಡಿಕೆ.

ಮನಸಾರೆ ನಿರ್ಮಾಪಕರು ರಾಕ್‌ಲೈನ್ ವೆಂಕಟೇಶ್. ಇದುಕೂಡ ವಿಶೇಷವಲ್ಲ. ಭಟ್ಟರು ಹಾಗೂ ರಾಕ್‌ಲೈನ್ ಕಮಿಟ್‌ಮೆಂಟ್ ಹಳೆಯದು. ಎಲ್ಲ ಸರಿಯೋಗಿದ್ದರೆ ಇಬ್ಬರೂ ಲಗೋರಿ ಆಡಬೇಕಿತ್ತು. ಆದರೆ ಸದಾಶಿವನಗರ ಕ್ಯಾಂಪ್‌ನಿಂದ ಹಸಿರು ನಿಶಾನೆ ಬರಲಿಲ್ಲ. ರಾಕ್ ಕೂಡ ಲಗೋರಿಯಲ್ಲಿ ಆಸಕ್ತಿ ಕಳಕೊಂಡಿದ್ದರು.ಈಗ ವಿಷಯಕ್ಕೆ ಬರೋಣ. ಮನಸಾರೆಯ ವಿಶೇಷಕ್ಕೆ. ಕಳೆದ ವಾರ ಮನಸಾರೆ ಮುಹೂರ್ತ ನಡೆಯಿತು. ಮುಹೂರ್ತ ಎಂದಮೇಲೆ ಪತ್ರಕರ್ತರು ಇರಬೇಕಲ್ಲ. ಆದರೆ ಅಲ್ಲೆಲ್ಲೂ ಪತ್ರಕರ್ತರ ಮುಖಗಳೇ ಕಾಣಲಿಲ್ಲ. ಹೇಗೆ ಕಾಣಿಸಿಯಾವು ಆಹ್ವಾನವೇ ಇಲ್ಲವೆಂದ ಮೇಲೆ!

ಭಟ್ಟರಿಗೆ ಪತ್ರಕರ್ತರ ಮೇಲೆ ವಿಪರೀತ ಪ್ರೀತಿ. ಅಂಥವರ ಸಿನಿಮಾಕ್ಕೆ ಪತ್ರಕರ್ತರಿಗೆ ಆಹ್ವಾನ ಇಲ್ಲ ಎಂದರೇನು ಅರ್ಥ? ಉಹುಂ, ಮುಖ ತಿರುಗಿಸಿರುವುದು ಭಟ್ಟರಲ್ಲ ರಾಕ್‌ಲೈನ್! ಪತ್ರಕರ್ತರ ಜೊತೆ ಅವರು ಟೂ ಬಿಟ್ಟಿದ್ದಾರೆ. ನನಗೆ ಪತ್ರಕರ್ತರನ್ನು ಕರೆಯಬೇಕೆಂದು ಆಸೆಯಿತ್ತು. ನಿರ್ಮಾಪಕರು ಬೇಡವೆಂದರೆ ಏನು ಮಾಡೋದು? ಎಂದು ಕೆಲವು ಆಪ್ತ ಪತ್ರಕರ್ತರ ಬಳಿ ಭಟ್ಟರು ದೂರವಾಣಿಯಲ್ಲಿ ಅಲವತ್ತುಕೊಂಡಿದ್ದಾರೆ.

ಮೊನ್ನೆ, ಸೂರಿ ನಿರ್ದೇಶನದ ಜಂಗ್ಲಿ ಚಿತ್ರದ ವೀಕ್ಷಣೆಗೂ ಪತ್ರಕರ್ತರಿಗೆ ಆಹ್ವಾನವಿರಲಿಲ್ಲ. ಆ ಚಿತ್ರದ ನಿರ್ಮಾಪಕರು ಇದೇ ರಾಕ್‌ಲೈನ್. ಆಯಪ್ಪ ಕರೀದಿದ್ರೆ ಕತ್ತೆಬಾಲ. ವಿಮರ್ಶೆ ಬರೆಯೋದು ನಮ್ಮ ಹಕ್ಕು ಮತ್ತು ಕರ್ತವ್ಯ ಎಂದು ಭಾವಿಸಿದ ಕೆಲವು ಪತ್ರಕರ್ತರು ಟಿಕೇಟ್ ಖರೀದಿಸಿ ಸಿನಿಮಾ ನೋಡಿದರು, ವಿಮರ್ಶೆ ಬರೆದರು. ಅಂದಹಾಗೆ, ರಾಕ್‌ಲೈನ್‌ಗೆ ಪತ್ರಕರ್ತರ ಮೇಲೆ ಯಾಕೆ ಸಿಟ್ಟು? ಕಾರಣಗಳನ್ನು ಪಟ್ಟಿ ಮಾಡಲಾಗುತ್ತಿದೆ...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada