»   » ಐಂದ್ರಿತಾ, ನಾಗತಿಹಳ್ಳಿ 'ನೂರು ಜನ್ಮಕೂ' ಸಿದ್ಧ

ಐಂದ್ರಿತಾ, ನಾಗತಿಹಳ್ಳಿ 'ನೂರು ಜನ್ಮಕೂ' ಸಿದ್ಧ

Posted By:
Subscribe to Filmibeat Kannada

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ನೂರು ಜನ್ಮಕು' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.ಈ ಚಿತ್ರದ ಶೇ.40ರಷ್ಟು ಚಿತ್ರೀಕರಣ ವಿದೇಶದಲ್ಲಿ ನಡೆದಿರುವುದು ವಿಶೇಷ. ಹಾಂಕಾಂಗ್ ನಸ್ಟಾರ್ ಕ್ರೂಸ್ ಹಡಗಿನಲ್ಲಿ ಹಾಗೂ ಸುಂದರ ತಾಣಗಳಲ್ಲಿ 'ನೂರು ಜನ್ಮಕು' ಚಿತ್ರೀಕರಣ ನಡೆದಿದೆ.

ಐಂದ್ರಿತಾ ರೇ ಮತ್ತು ಸಂತೋಷ್ ಚಿತ್ರದ ಮುಖ್ಯ ಪಾತ್ರಧಾರಿಗಳು. ಚಿತ್ರೀಕರಣದ ವೇಳೆ ಐಂದ್ರಿತಾ ರೇಗೆ ನಾಗತಿಹಳ್ಳಿ ಕಪಾಳ ಮೋಕ್ಷ ಮಾಡಿದ ಘಟನೆ ರಾಜ್ಯಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಈ ಘಟನೆ ನಾಗತಿಹಳ್ಳಿ ವ್ಯಕ್ತಿತ್ವಕ್ಕೆ ಒಂದು ರೀತಿ ಕಪ್ಪುಚುಕ್ಕೆಯಾಗಿ ಪರಿಣಮಿಸಿತ್ತು. ಬಳಿಕ ಫಿಲಂ ಚೇಂಬರ್ ಮಧ್ಯೆ ಪ್ರವೇಶಿಸಿ ಕಪಾಳ ಮೋಕ್ಷ ಪ್ರಕರಣಕ್ಕೆ ಅಂತ್ಯಹಾಡಿತ್ತು.

ಚಿತ್ರಕ್ಕಾಗಿ ಶಶಿಧರ ಅಡಪ ಅವರು ಬಳಸಿರುವ ಸೆಟ್ ಗಳು ಕುತೂಹಲ ಮೂಡಿಸಿವೆ. ಮನೋಮೂರ್ತಿ ಅವರು ಸಂಗೀತ ಸಂಯೋಜನೆ ಚಿತ್ರಕ್ಕಿದ್ದು ಚೈತ್ರಾ, ಎಂಡಿ ಪಲ್ಲವಿ, ಸೋನು ನಿಗಂ ಹಾಗೂ ಶ್ರೇಯಾ ಘೋಷಾಲ್ ಅವರ ಕಂಠಸಿರಿಯಲ್ಲಿ ಹಾಡುಗಳು ಮೂಡಿಬಂದಿವೆ. ಸಂತೋಷ್ ರೈ ಪತಾಜೆ ಅವರ ಛಾಯಾಗ್ರಹಣ ಹಾಗೂ ಬಸವರಾಜು ಅವರ ಸಂಕಲನ ಚಿತ್ರಕ್ಕಿದೆ.

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶಿಸಿದ್ದ 'ಒಲವೇ ಜೀವನ ಲೆಕ್ಕಾಚಾರ' ಚಿತ್ರದ ಬಳಿಕ ಬಿಡುಗಡೆಯಾಗುತ್ತಿರುವ ಚಿತ್ರ ಇದಾಗಿದೆ. ಬರುವ ಏಪ್ರಿಲ್ ನಲ್ಲಿ 'ನೂರು ಜನ್ಮಕು' ಬಿಡುಗಡೆಯಾಗುವ ನಿರೀಕ್ಷೆಯಿದೆ. ಲೆಕ್ಕಾಚಾರ ಚಿತ್ರದಲ್ಲಿ ದಕ್ಕದ ಗೆಲುವು 'ನೂರು ಜನ್ಮಕು' ಚಿತ್ರದಲ್ಲಿ ಸಿಗುತ್ತದೋ ಕಾದು ನೋಡಬೇಕು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada