»   »  ರಜನಿ ಪುತ್ರಿಯ ಗಮನ ಸೆಳೆದ ದಯಾಳ್ ಸರ್ಕಸ್

ರಜನಿ ಪುತ್ರಿಯ ಗಮನ ಸೆಳೆದ ದಯಾಳ್ ಸರ್ಕಸ್

Subscribe to Filmibeat Kannada
ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಅರ್ಚನಾ ಗುಪ್ತ ಅಭಿನಯದ ಸರ್ಕಸ್ ಚಿತ್ರ ತಮಿಳು ಮತ್ತು ತೆಲುಗು ಚಿತ್ರೊದ್ಯಮದ ಗಮನಸೆಳೆದಿದೆ. ಆ ಭಾಷೆಗಳಿಗೆ ರೀಮೇಕ್ ಆಗುವ ಸಿದ್ಧತೆಯಲ್ಲೂ ಇದೆ. ಚಿತ್ರದ ರೀಮೇಕ್ ಹಕ್ಕುಗಳನ್ನು ಪಡೆಯಲು ಸೂಪರ್ ಸ್ಟಾರ್ ರಜನಿಕಾಂತ್ ಅವರ ಪುತ್ರಿ ಸೌಂದರ್ಯ ಉತ್ಸುಕರಾಗಿದ್ದಾರಂತೆ. ಜ.12ರ ರಾತ್ರಿ ಚೆನ್ನೈನಲ್ಲಿ ಸರ್ಕಸ್ ವೀಕ್ಷಿಸಿ ಆನಂತರ ತಮ್ಮ ನಿರ್ಧಾವನ್ನು ಕೈಗಳ್ಳಲಿದ್ದಾರೆ ಎನ್ನುತ್ತ್ತಾರೆ ಸರ್ಕಸ್ ಚಿತ್ರದ ನಿರ್ದೇಶಕ, ನಿರ್ಮಾಪಕ ದಯಾಳ್ ಪದ್ಮನಾಭನ್.

ಸೌಂದರ್ಯ ಅವರು ಈಗಾಗಲೇ ತಮಿಳಿನ ಟಾಪ್ ಸ್ಟಾರ್ ಗಳಾದ ವಿಜಯ್ ಮತ್ತು ಧನುಷ್ ಅವರ ಡೇಟ್ಸ್ ನ್ನು ಪಡೆದುಕೊಂಡಿದ್ದಾರೆ. ಅಂದುಕೊಂಡಂತೆ ಎಲ್ಲವೂ ಸರಿಹೊಂದಿದರೆ ಇಬ್ಬ್ಬರಲ್ಲಿ ಒಬ್ಬರು ಸರ್ಕಸ್ ಗೆ ಆಯ್ಕೆಯಾಗುತ್ತಾರೆ. ಆದರೆ ಸರ್ಕಸ್ ಚಿತ್ರದ ರೀಮೇಕ್ ಹಕ್ಕುಗಳನ್ನು ಮಾರುತ್ತಾರೆಯೇ ಇಲ್ಲವೆ ಎಂಬುದು ದಯಾಳ್ ಇನ್ನೂ ನಿರ್ಧಾರಿಸಿಲ್ಲ. ಈ ಚಿತ್ರವನ್ನು ಪರಭಾಷೆಯಲ್ಲೂ ಅವರೇ ನಿರ್ದೆಶಿಸುವ, ನಿರ್ಮಿಸುವ ಯೋಜನೆ ಇದೆ. ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಗಬೇಕಾದರೆ ಸ್ವಲ್ಪ ದಿನ ಕಾಯಲೇ ಬೇಕು.

ಸಂಕ್ರಾಂತಿ ಹಬ್ಬಕ್ಕೆ (ಜ.15) ಸರ್ಕಸ್ ಚಿತ್ರ ರಾಜ್ಯದಾದ್ಯಂತ 75 ಕೇಂದ್ರಗಳಲ್ಲಿ ಬಿಡುಗಡೆಯಾಗಲಿದೆ. ಬೆಂಗಳೂರಿನಲ್ಲಿ ಇಪ್ಪತ್ತಕ್ಕೂ ಹೆಚ್ಚು ಚಿತ್ರಮಂದಿರಗಳು, ಐದು ಮಲ್ಟಿಫ್ಲೆಕ್ಸ್ ಗಳಿಗೆ ಸರ್ಕಸ್ ಲಗ್ಗೆ ಹಾಕಲಿದೆ. ಸರ್ಕಸ್ ರಾಜ್ಯದಲ್ಲಷ್ಟೇ ಬಿಡುಗಡೆಯಾಗುತ್ತಿದ್ದು ಹೊರ ರಾಜ್ಯಗಳಲ್ಲೆಲ್ಲೂ ಬಿಡುಗಡೆಯಾಗುತ್ತಿಲ್ಲ.ಸೆನ್ಸಾರ್ ಮಂಡಳಿಯಿಂದ ಈ ಚಿತ್ರಕ್ಕೆ 'ಯು' ಪ್ರಮಾಣ ಪತ್ರ ಸಿಕ್ಕಿದೆ. ಚಿತ್ರಕಥೆಗೆ ಸಂಬಂಧಿಸಿದಂತೆ ದಯಾಳ್ ಮತ್ತು ಎಸ್.ಮಹೇಂದರ್ ನಡುವಿನ ಮನಸ್ತಾಪವೂ ಈಗ ತಣ್ಣಗಾಗಿದೆ. ಎಸ್.ಮಹೇಂದರ್ 'ನನ್ನದೇನು ಅಭ್ಯಂತರವಿಲ್ಲ" ಎಂದು ಪತ್ರ ಬರೆದುಕೊಟ್ಟಿರುವ ಕಾರಣ ದಯಾಳ್ ಖುಷಿ ಇಮ್ಮಡಿಸಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)
ಸಂಕ್ರಾಂತಿಗೆ ಸರ್ಕಸ್; ಈಗ ಗೀತಸಂಭ್ರಮ
ಸಕ್ಸಸ್ ಗಾಗಿ ಪದ್ಮನಾಭನ್ ದಯಾಳ್ ಸರ್ಕಸ್

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada