ಕಂಠೀರವ ಸಮೀಪ ಅಣ್ಣಾವ್ರ 6ನೇ ಪುಣ್ಯ ಸ್ಮರಣೆ

ಕಳೆದ ವರ್ಷ ಸುಮಾರು ಹತ್ತು ಸಾವಿರ ಜನ ಸೇರಿದ್ದರಿಂದ ಸಹಜವಾಗಿಯೇ ಸಕಲ ಸಿದ್ಧತೆಗಳನ್ನು ಈ ವರ್ಷ ನಡೆಸಿದ್ದರು. ಡಾ ರಾಜ್ ಸಮಾಧಿಯಲ್ಲಿರುವ ಪ್ರತಿಮೆಗೆ ಅವರ ಕುಟುಂದವರು ಹಾಗೂ ಅಭಿಮಾನಿಗಳು ಪೂಜೆ ಸಲ್ಲಿಸಿದರು. ಸಾಕಷ್ಟು ಜನರು ಪುಷ್ಪ ನಮನ ಸಲ್ಲಿಸಿದರು. ಬಂದವರಿಗೆಲ್ಲಾ ಕಂಠೀರವ ಸ್ಟುಡಿಯೋ ವತಿಯಿಂದ ಭೋಜನ ವ್ಯವಸ್ಥೆ ನಡೆಸಲಾಯಿತು.
ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಬಂದೇ ಬರುತ್ತಾರೆ ಎಂಬುದು ಖಾತ್ರಯಿರುವುದರಿಂದ ನೂಕು-ನುಗ್ಗಲು ಸಂಭವಿಸದಂತೆ ಮೊದಲೇ ಬ್ಯಾರಿಕೇಡ್ ಗಳನ್ನು ಅಳವಡಿಸಿ ಸೂಕ್ತ ಬಂದೋಬಸ್ತ್ ಕೂಡ ಮಾಡಲಾಗಿದೆ. ಒಟ್ಟಿನಲ್ಲಿ ಡಾ ರಾಜ್ 6 ನೇ ಪುಣ್ಯತಿಥಿ ಯನ್ನು ಅದ್ದೂರಿಯಾಗಿ ನಡೆಸಲಾಗಿದೆ. ಮುಂದಿನ ಪುಟ ನೋಡಿ...
More from Filmibeat
English summary
Today (April 12th 2012), Dr Rajkumar's 6th Memory celebrated by his Family and Fans near Kateerava Studio, Bangalore.


Click it and Unblock the Notifications











