twitter
    For Quick Alerts
    ALLOW NOTIFICATIONS  
    For Daily Alerts

    ಎಸ್ಸೆಸ್ಸೆಲ್ಸಿ ಡಿಸ್ಟಿಂಕ್ಷನ್‌ನಲ್ಲಿ ಪಾಸಾದ ಮಾಸ್ಟರ್ ಕಿಶನ್

    By Rajendra
    |

    ಬಾಲ ನಟ ಹಾಗೂ ನಿರ್ದೇಶಕ ಮಾಸ್ಟರ್ ಕಿಶನ್(15) ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಡಿಸ್ಟಿಂಕ್ಷನ್‌ನಲ್ಲಿ ಪಾಸು ಮಾಡಿದ್ದಾನೆ. ಭಾರತದ ಅತ್ಯಂತ ಕಿರಿಯ ನಿರ್ದೇಶಕ (ಒಂಭತ್ತನೆ ವರ್ಷಕ್ಕೆ ಆಕ್ಷನ್, ಕಟ್ ಹೇಳಿದ ಪೋರ) ಕಿಶನ್ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.93 ಅಂಕಗಳನ್ನು ಗಳಿಸುವ ಮೂಲಕ ಬೆಂಗಳೂರಿನ ಕಾರ್ಮೆಲ್ ಇಂಗ್ಲಿಷ್ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿ ಅನ್ನಿಸಿಕೊಂಡಿದ್ದಾನೆ.

    ಬಹುಮುಖ ಪ್ರತಿಭಾಶಾಲಿಯಾದ ಕಿಶನ್ ಅವರ ಸಾಧನೆಯನ್ನು ಗಮನಿಸಿದ ರಾಜ್ಯ ಸರಕಾರ ಅವರಿಗೆ ವಿಶೇಷ ಅವಕಾಶವನ್ನು ಕಲ್ಪಿಸಲು ಮುಂದಾಗಿದೆ. ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (KSOU)ಕ್ಕೆ ನೇರವಾಗಿ ಎಂಎ ಪ್ರವೇಶವಕ್ಕೆ ಅವಕಾಶ ಕಲ್ಪಿಸಲು ಮುಂದಾಗಿದೆ. ಈ ಸಂಬಂಧ ರಾಜ್ಯ ಸರಕಾರ ವಿಶ್ವವಿದ್ಯಾಲಯದಉಪಕುಲಪತಿ ಕೆ ಎಸ್ ರಂಗಪ್ಪ ಅವರಿಗೆ ಮಲ್ಟಿಮೀಡಿಯಾ ಅಂಡ್ ಅನಿಮೇಷನ್, ಎಂಎ ಪ್ರವೇಶ ಕಲ್ಪಿಸಲು ಪತ್ರ ಬರೆದಿದೆ.

    ಸದ್ಯಕ್ಕೆ ಕಿಶನ್ ಹದಿಹರೆಯ ಪ್ರೇಮಕತೆಯೊಂದನ್ನು ಕೈಗೆತ್ತಿಕೊಂಡಿದ್ದಾರೆ. ಚಿತ್ರದ ಹೆಸರು '15'. ಆದರೆ ಈ ಚಿತ್ರವನ್ನು ಕಿಶನ್ ನಿರ್ದೇಶಿಸುತ್ತಿಲ್ಲ. ಅವರ ತಂದೆ ಶ್ರೀಕಾಂತ್ ಆಕ್ಷನ್, ಕಟ್ ಹೇಳುತ್ತಿರುವ ಚಿತ್ರದಲ್ಲಿ ಕಿಶನ್ ಮುಖ್ಯಪಾತ್ರವನ್ನು ಪೋಷಿಸಲಿದ್ದಾರೆ. ಆಲ್ ದಿ ಬೆಸ್ಟ್ ಕಿಶನ್, ಕೀಪ್ ಇಟ್ ಅಪ್! (ದಟ್ಸ್‌ಕನ್ನಡ ಸಿನಿವಾರ್ತೆ)

    English summary
    Youngest Director of India Master Kishan (15) passed Karnataka SSLC exam with distinction. He has studying in Carmel English School and got 93% in SSLC. Care Of Footpath , Gnanajyothi Sri Siddaganga, 15 are his some of films.
    Friday, May 13, 2011, 9:17
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X