»   » ಮಣಿಪಾಲಕ್ಕೆ ಪಾದ ಬೆಳೆಸಿದ ಪುನೀತ್ ' ಪರಮಾತ್ಮ'

ಮಣಿಪಾಲಕ್ಕೆ ಪಾದ ಬೆಳೆಸಿದ ಪುನೀತ್ ' ಪರಮಾತ್ಮ'

Posted By:
Subscribe to Filmibeat Kannada

ಸಕಲೇಶಪುರದಲಿ ಸದ್ದಿಲ್ಲದಂತೆ ಸೆಟ್ಟೇರಿದ ಪರಮಾತ್ಮ ಚಿತ್ರ ಈಗ ಮಣಿಪಾಲಕ್ಕೆ ಸ್ಥಳಾಂತರವಾಗಿದೆ. ಸಕಲೇಶಪುರದಲ್ಲಿ ಎರಡು ದಿನಗಳ ಕಾಲ ಚಿತ್ರೀಕರಣ ಮುಗಿಸಿಕೊಂಡು ಪುನೀತ್ ರಾಜ್ ಕುಮಾರ್ ಅವರು ಅಲ್ಲು ಅರ್ಜುನ್ ಮದುವೆಗೆ ಹೈದರಾಬಾದ್‌ಗೆ ಹಾರಿದ್ದರು. ಮಾರ್ಚ್ 6ರಂದು ಅಲ್ಲು ಅರ್ಜುನ್ ಮದುವೆ ನೆರವೇರಿದೆ.

ಬಳಿಕ ಅವರು ಅಲ್ಲಿಂದ ನೇರವಾಗಿ ಮಣಿಪಾಲ ತಲುಪಿದ್ದಾರೆ. ಚಿತ್ರದ ನಾಯಕಿ ದೀಪಾ ಸನ್ನಿದ್ಧಿ ಹಾಗೂ ಪುನೀತ್ ನಡುವಿನ ಕೆಲವು ಸನ್ನಿವೇಶಗಳನ್ನು ನಿರ್ದೇಶಕ ಯೋಗರಾಜ್ ಭಟ್ ಆಕ್ಷನ್, ಕಟ್‌‍ನಲ್ಲಿ ಚಿತ್ರೀಕರಿಸಿಕೊಂಡರು. ಭಟ್ಟರ ಆಪ್ತಮಿತ್ರ ದುನಿಯಾ ಸೂರಿ ಕೂಡ ಚಿತ್ರೀಕರಣ ಸ್ಥಳದಲ್ಲಿದರು. ಬೆಳಗಾವಿಯಲ್ಲಿ ವಿಶ್ವಕನ್ನಡ ಸಮ್ಮೇಳನ ನಡೆಯುತ್ತಿರುವ ಕಾರಣ ಚಿತ್ರೀಕರಣಕ್ಕೆ ರಜೆ ಘೋಷಿಸಲಾಗಿದೆ.

ಪರಮಾತ್ಮ ಚಿತ್ರಕ್ಕೆ ಸಂತೋಷ್ ರೈ ಪಾತಾಜೆ ಅವರ ಛಾಯಾಗ್ರಹಣ ಹಾಗೂ ವಿ ಹರಿಕೃಷ್ಣ ಅವರ ಸಂಗೀತವಿದೆ. ಚಿತ್ರದ ತಾರಾಬಳಗದಲ್ಲಿ ಭಟ್ಟರ ಫೇವರೇಟ್ ತಾರೆಗಳಾದ ರಂಗಾಯಣ ರಘು, ಅನಂತನಾಗ್ ಇದ್ದಾರೆ. ಯೋಗರಾಜ್ ಭಟ್ ಹಾಗೂ ಜಯಂತ್ ಕಾಯ್ಕಿಣಿ ಸಾಹಿತ್ಯ ಚಿತ್ರಕ್ಕಿದೆ.

English summary
Power Star Puneeth Rajkumar lead film Paramathma directed by Yogaraj Bhat has now been shifted to Manipal.The film Paramathma launched with Puneet Rajkumar as hero in Sakleshpur recently. Deepa Sannidhi, Aindrita and Ramya Barna play important roles while Rangayana Raghu and Anant Nag are also in the cast of the film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada