»   »  ಸೆನ್ಸಾರ್ ಮಂಡಳಿ ಅಧ್ಯಕ್ಷ ಚಂದ್ರಶೇಖರ್ ನಿವೃತ್ತಿ

ಸೆನ್ಸಾರ್ ಮಂಡಳಿ ಅಧ್ಯಕ್ಷ ಚಂದ್ರಶೇಖರ್ ನಿವೃತ್ತಿ

Posted By:
Subscribe to Filmibeat Kannada

ಪ್ರಾದೇಶಿಕ ಸೆನ್ಸಾರ್ ಮಂಡಳಿ ಅಧ್ಯಕ್ಷ ಚಂದ್ರಶೇಖರ್ ಅವರ ಐದು ವರ್ಷಗಳ ಕಾಲಾವಧಿ ಜೂನ್.9, 2009ಕ್ಕೆ ಮುಗಿಯುತ್ತದೆ. ಹೊಸ ಅಧಿಕಾರಿ ನೇಮಕವಾಗುವವರೆಗೂ ಚಂದ್ರಶೇಖರ್ ಆ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. ಜೂನ್ ತಿಂಗಳ ಅಂತ್ಯದವರೆಗೂ ಅವರು ಮುಂದುವರೆಯುವುದಾಗಿ ತಿಳಿಸಿದ್ದಾರೆ.

ಲಾಂಗು, ಮಚ್ಚಿನ ಚಿತ್ರಗಳನಿರ್ಮಾಪಕರಿಗೆ ಚಂದ್ರಶೇಖರ್ ಸಿಂಹಸ್ವಪ್ನರಾಗಿದ್ದರು. ಕನ್ನಡ ಚಿತ್ರ ನಿರ್ಮಾಪಕ ಮತ್ತು ನಿರ್ದೇಶಕರು ಮಚ್ಚು, ಲಾಂಗುಗಳಿಗಿಂತ ಭಿನ್ನವಾಗಿ ಆಲೋಚಿಸುವಂತೆ ಚಂದ್ರಶೇಖರ್ ಮಾಡಿದ್ದರು. ಪ್ರತಿಭಾವಂತರೆನಿಸಿಕೊಂಡಿರುವ ಅವರು ಭಾರತೀಯ ನಾಗರೀಕ ಸೇವೆಗೆ ಆಯ್ಕೆಯಾಗಿ ನಂತರ ಸೆನ್ಸಾರ್ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು.

ಪ್ರಾದೇಶಿಕ ಸೆನ್ಸಾರ್ ಮಂಡಳಿ ಅಧ್ಯಕ್ಷರಾದ ನಂತರ ಅವರು ಬೆಂಗಳೂರಿನಲ್ಲೇ ನೆಲೆಸಿದರು. ಐದು ವರ್ಷಗಳ ಹಿಂದೆ ತಮ್ಮ ಮುದ್ದಿನ ಮಗಳೊಂದಿಗೆ ಕನ್ನಡಚಿತ್ರವೊಂದನ್ನು ವೀಕ್ಷಿಸಿ ಮುಜುಗರ ಅನುಭವಿಸಿದ್ದರು. ಚಿತ್ರ ನಿರ್ಮಾಪಕರಿಗೆ ಕೆಲವೊಂದು ಮಾನದಂಡಗಳನ್ನು ಹಾಕಿಕೊಟ್ಟರು. ತಮ್ಮ ಅಧಿಕಾರದ ಅವಧಿಯಲ್ಲಿ ಅವರು ಎಂದೂ ಭ್ರಷ್ಟರಾಗಿದೆ ಸಭ್ಯ ಅಧಿಕಾರಿ ಎನ್ನಿಸಿಕೊಂಡಿದ್ದರು ಚಂದ್ರಶೇಖರ್.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada