»   » ಭಟ್ಟರಿಗೆ ಕುರಿ ಮರಿ ಥರದ ಹುಡುಗರು ಬೇಕಂತೆ!

ಭಟ್ಟರಿಗೆ ಕುರಿ ಮರಿ ಥರದ ಹುಡುಗರು ಬೇಕಂತೆ!

Posted By:
Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ ದಾಖಲೆಯ 'ಮುಂಗಾರು ಮಳೆ' ಸುರಿಸಿದ ಯೋಗಾರಾಜ್‌ಭಟ್ ನಿರ್ದೇಶನದ 'ಪಂಚರಂಗಿ' ಚಿತ್ರದ ಹಾಡುಗಳ ಚಿತ್ರೀಕರಣ ಸಿಲಿಕಾನ್‌ಸಿಟಿಯಲ್ಲಿ ನಡೆದಿದೆ. ನಿರ್ದೇಶಕರೇ ಬರೆದಿರುವ 'ಹುಡುಗರು ಬೇಕು ಕುರಿಯ ಮರಿ ಥರ ಹುಡುಗರು ಬೇಕು - ನಾವು ರೆಡಿ ನಾವು ರೆಡಿ...' ಎಂಬ ಗೀತೆಯ ಚಿತ್ರೀಕರಣ ಅಬ್ಬಾಯಿನಾಯ್ಡು ಸ್ಟುಡಿಯೋದಲ್ಲಿ ಶಶಿಧರ್ ಅಡಪ ರವರು ನಿರ್ಮಿಸಿದ ಭವ್ಯವಾದ ಸೆಟ್‌ನಲ್ಲಿ ನಡೆಯಿತು.

ದಿಗಂತ್, ನಿಧಿಸುಬ್ಬಯ್ಯ ಹಾಗೂ 24 ಜನ ನೃತ್ಯಗಾರರು ಶಂಕರ್ ನೃತ್ಯ ಸಂಯೋಜಿಸಿದ ಈ ಹಾಡಿನ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.ದಿಗಂತ್ ಹಾಗೂ ಸಹ ಕಲಾವಿದರ ಅಭಿನಯದಲ್ಲಿ ಚಿತ್ರದ 'ಪಂಚರಂಗಿ ಹಾಡುಗಳು ಪಂಚರಂಗಿ ಟೈರುಗಳು ಏಳೋ ಎಂಟೋ ಸ್ವರಗಳು ಎಲ್ಲಾ ಬಿಟ್ಟಿ ಪದಗಳು' ಎಂಬ ಚಿತ್ರದ ಮತ್ತೊಂದು ಗೀತೆ ಎಚ್.ಎಸ್.ಆರ್ ಲೇಔಟ್‌ನ ನ್ಯಾಷನಲ್ ಇನ್ಸ್‌ಟ್ಯೂಟ್ ಆಫ್ಟೆಕ್ನಾಲಜಿಯಲ್ಲಿ ಚಿತ್ರೀಕರಣಗೊಂಡಿದೆ. ಈ ಗೀತೆಗೂ ಶಂಕರ್ ಅವರೇ ನೃತ್ಯ ನಿರ್ದೇಶನ ಮಾಡಿದ್ದಾರೆ.

ಯೋಗರಾಜ್ ಮೂವೀಸ್ ಎಂಬ ಚಲನಚಿತ್ರ ನಿರ್ಮಾಣ ಸಂಸ್ಥೆಯನ್ನು ಹುಟ್ಟು ಹಾಕಿರುವ ಯೋಗರಾಜ್‌ಭಟ್ ಸಂಸ್ಥೆಯ ಪ್ರಥಮ ಪ್ರಯತ್ನವಾಗಿ 'ಪಂಚರಂಗಿ' ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಎಂ.ಕೆ.ಸುಬ್ರಹ್ಮಣ್ಯ ಅವರು ನಿರ್ಮಾಣದಲ್ಲಿ ಭಾಗಿಯಾಗಿದ್ದಾರೆ. ಪವನ್‌ಕುಮಾರ್ ಅವರೊಂದಿಗೆ ಕಥೆ, ಚಿತ್ರಕಥೆ ಬರೆದಿರುವ ನಿರ್ದೆಶಕರು ಸ್ವತಃ ಸಂಭಾಷಣೆ ಬರೆದಿದ್ದಾರೆ.

ಮನೋಮೂರ್ತಿ ಸಂಗೀತ, ತ್ಯಾಗರಾಜನ್ ಛಾಯಾಗ್ರಹಣ, ಜೋನಿಹರ್ಷ ಸಂಕಲನ, ಶಶಿಧರ್ ಅಡಪ ಕಲಾನಿರ್ದೇಶನ ಮತ್ತು ಹರ್ಷ ನೃತ್ಯನಿರ್ದೇಶನವಿರುವ ಚಿತ್ರದ ತಾರಾಬಳಗದಲ್ಲಿ ದಿಗಂತ್, ನಿಧಿಸುಬ್ಬಯ್ಯ, ಅನಂತನಾಗ್, ರಾಜುತಾಳಿಕೋಟೆ, ಪವನ್‌ಕುಮಾರ್, ಸುಂದರ್‌ರಾಜ್, ಪದ್ಮಜಾರಾವ್, ಸುಧಾಬೆಳವಾಡಿ, ರಮ್ಯಾಬರ್ನಾ, ನಾಗೇಂದ್ರ ಶಾ, ಸತೀಶ್, ಸೌಮ್ಯ, ನಾಗರಾಜ್ ಅರಸು, ಸುಧಾಕರ್(ರಾಕ್‌ಲೈನ್ ಪ್ರೊಡಕ್ಷನ್ಸ್) ಮುಂತಾದವರಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada