»   »  ತಿರುಮಲ ತಿರುಪತಿಯಲ್ಲಿ ನಟಿ ಮೀನಾ ಮದುವೆ

ತಿರುಮಲ ತಿರುಪತಿಯಲ್ಲಿ ನಟಿ ಮೀನಾ ಮದುವೆ

Subscribe to Filmibeat Kannada

ದಕ್ಷಿಣ ಭಾರತದ ಖ್ಯಾತ ತಾರೆ ಮೀನಾ(33) ಭಾನುವಾರ ತಿರುಮಲ ತಿರುಪತಿಯಲ್ಲಿ ದಾಂಪತ್ಯ ಜೀವನಕ್ಕೆ ಅಡಿಯಿಟ್ಟರು. ಬೆಂಗಳೂರಿನ ಐಟಿ ಉದ್ಯೋಗಿ ವಿದ್ಯಾಸಾಗರ್ ಮತ್ತು ಮೀನಾ ಅವರ ಮದುವೆ ಸಪ್ತಗಿರಿಯಲ್ಲಿ ನೆರವೇರಿತು. ಮದುವೆ ನಂತರ ನವ ವಧುವರರು ವೆಂಕಟೇಶ್ವರನಿಗೆ ಪೂಜೆ ಸಲ್ಲಿಸಿ ಚೆನ್ನೈಗೆ ಹಿಂತಿರುಗಿದರು.

ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿರಿಸಿದ ಮೀನಾ, ದಕ್ಷಿಣ ಭಾರತದ ಖ್ಯಾತ ತಾರೆಗಳಾದ ರಜನೀಕಾಂತ್, ಕಮಲ ಹಾಸನ್, ಮಮ್ಮುಟ್ಟಿ ಮತ್ತ್ತು ಮೋಹನ್ ಲಾಲ್ ಜತೆ ನಟಿಸಿದ್ದಾರೆ. ಮೀನಾ ಅಭಿನಯದ ಮುತ್ತು, ವೀರ, ಯಜಮಾನ್ ಮತ್ತು ಅವ್ವೈ ಷಣ್ಮುಗಿ ಚಿತ್ರಗಳು ಹೆಚ್ಚು ಜನಪ್ರಿಯವಾಗಿದ್ದವು.

ತೆಲುಗಿನ ಸಂತ ಕವಯಿತ್ರಿ ತಾರಿಗೊಂಡ ವೆಂಗಮಂಬಾರ ಬದುಕನ್ನು ಆಧರಿಸಿದ ಚಿತ್ರ ಜುಲೈ 17ರಂದು ತೆರೆಕಾಣಲಿದೆ. ಮೀನಾ ಅವರು ಕನ್ನಡ, ತೆಲುಗು ಮತ್ತು ತಮಿಳಿನ 175 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರ ಕುಚೇಲನ್ ಮತ್ತು ವಿಜಯ್ ಅವರ ಜತೆ ನಟಿಸಿದ ಮರ್ಯಾದೈ ಚಿತ್ರಗಳು ಆಕೆಯನ್ನು ಖ್ಯಾತಿಯ ಉತ್ತುಂಗಕ್ಕೇರಿಸಿದ್ದವು.

ಸುದೀಪ್ ಜತೆಗೆ ಸ್ವಾತಿಮುತ್ತು ಮತ್ತು ಮೈ ಆಟೋ ಗ್ರಾಫ್ ಹಾಗೂ ರವಿಚಂದ್ರನ್ ಜತೆ ಪುಟ್ನಂಜ ಕನ್ನಡ ಚಿತ್ರಗಳಲ್ಲಿ ಮೀನಾ ಅಭಿನಯಿಸಿದ್ದಾರೆ.ಈಗ ತಮಿಳು ಕಿರುತೆರೆಯಲ್ಲೂ ಮಿನುಗುತ್ತಿದ್ದಾರೆ ನಟಿ ಮೀನಾ. ಜುಲೈ 14ರಂದು ಅದ್ದೂರಿ ಆರತಕ್ಷತೆ ಕಾರ್ಯಕ್ರಮವನ್ನು ಚೆನ್ನೈನಲ್ಲಿ ಹಮ್ಮಿಕೊಂಡಿದ್ದಾರೆ ಎಂದು ಮೀನಾ ಕುಟುಂಬ ಮೂಲಗಳು ತಿಳಿಸಿವೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada