»   »  ಅನಂತನಾಗ್ ಮೆಚ್ಚಿದ ಕ್ರೇಜಿ ಕುಟುಂಬ

ಅನಂತನಾಗ್ ಮೆಚ್ಚಿದ ಕ್ರೇಜಿ ಕುಟುಂಬ

Subscribe to Filmibeat Kannada

ತಮ್ಮ ಮುಗುಳುನಗೆ, ಮನೋಜ್ಞ ಅಭಿನಯದಿಂದ ಕನ್ನಡ ಚಿತ್ರರಸಿಕರ ಮನಸೂರೆಗೊಂಡಿರುವ ನಟ ಅನಂತನಾಗ್. ಈಗ ಅವರು ಅಭಿನಯಿಸುತ್ತಿರುವ ಚಿತ್ರ 'ಕ್ರೇಜಿ ಕುಟುಂಬ." ಮನೋರಂಜನೆಯೇ ಪ್ರಧಾನವಾಗಿರುವ ಈ ಚಿತ್ರ ಅನಂತನಾಗ್ ಅವರಿಗೆ ಮೆಚ್ಚುಗೆಯಾಗಿದೆಯಂತೆ.

'ನಾನು ಸೂಟು-ಬೂಟು ಧರಿಸಿ ಅಭಿನಯಿಸುವ ಚಿತ್ರಗಳು ಹೆಚ್ಚಾಗಿ ಬರುತ್ತಿದೆ. ಆದರೆ ಈ ಚಿತ್ರದಲ್ಲಿ ನನ್ನದು ಹಳ್ಳಿಯವನ ಪಾತ್ರ. ಪಂಚೆ ಉಟ್ಟು ಸಹಜ ಉಡುಗೆಯಲ್ಲಿ ಅಭಿನಯಿಸುತ್ತಿದ್ದೇನೆ. ನನ್ನ ಪಾತ್ರ ಹಾಗೂ ಚಿತ್ರ ಕನ್ನಡಿಗರಿಗೆ ಹಿಡಿಸುತ್ತದೆ ಎಂದು ಅವರು ತಿಳಿಸಿದ್ದಾರೆ.ರಮೇಶ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರಕ್ಕೆ ಅಭಿಮಾನ್ ಸ್ಟೂಡಿಯೋ ಸೇರಿದಂತೆ ಮುಂತಾದ ಕಡೆ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ.

ಲವ್‌ಕುಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಲೀನಾಜೋಶಿ ನಿರ್ಮಿಸುತ್ತಿರುವ ಈ ಚಿತ್ರವನ್ನು ಬಿ.ರಾಮಮೂರ್ತಿ ಅವರು ನಿರ್ದೇಶಿಸುತ್ತಿದ್ದಾರೆ. ಮರಾಠಿ ಮೂಲದ 'ದೇ ದಕ್ಕ ಚಿತ್ರ 'ಕ್ರೇಜಿ ಕುಟುಂಬಕ್ಕೆ ಸ್ಪೂರ್ತಿ. ರಿಕ್ಕಿಕೇಜ್ ಸಂಗೀತ. ಮಲ್ಲಿಕಾರ್ಜುನ್ ಛಾಯಾಗ್ರಹಣ, ನರಹಳ್ಳಿ ಜ್ಞಾನೇಶ್ ಸಂಕಲನ, ಮುರಳಿ-ರಾಮು ನೃತ್ಯ, ಶ್ರೀನಿವಾಸ್ ಕಲೆ, ಪ್ರಸಾದ್ ಸಹ ನಿರ್ದೇಶನ ಹಾಗೂ ಗಂಡಸಿರಾಜು ನಿರ್ಮಾಣ ನಿರ್ವಹಣೆಯಿದೆ. ರಮೇಶ್, ಅನಂತನಾಗ್, ಎಂ.ಎಸ್.ಉಮೇಶ್, ರಜನಿಕಾಂತ್, ವಿನಯ್‌ರಾಂಪ್ರಸಾದ್, ಸೋಮಶೇಖರ್, ಚಿಕ್ಕಮಗಳೂರು ಮಧು 'ಕ್ರೇಜಿ ಕುಟುಂಬ"ದ ತಾರಾಬಳಗದಲ್ಲಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada