»   »  ಯುಗಾದಿಗೆ ಸಜ್ಜಾಗಿವೆ ದೊಡ್ಡ ಬ್ಯಾನರ್ ಚಿತ್ರಗಳು

ಯುಗಾದಿಗೆ ಸಜ್ಜಾಗಿವೆ ದೊಡ್ಡ ಬ್ಯಾನರ್ ಚಿತ್ರಗಳು

Posted By:
Subscribe to Filmibeat Kannada
Bhimoos Bang Bang Kids
ನಿರೀಕ್ಷೆಯಂತೆ ಯುಗಾದಿ ಹಬ್ಬಕ್ಕೆ ಎರಡು ದೊಡ್ಡ ಬ್ಯಾನರ್ ನ ಚಿತ್ರಗಳು ಬಿಡುಗಡೆಯಾಗುತ್ತಿವೆ. ಅವುಗಳಲ್ಲಿ ಒಂದು ರಾಮು ನಿರ್ಮಾಣದ 'ಕನ್ನ್ನಡದ ಕಿರಣ್ ಬೇಡಿ', ಮತ್ತೊಂದು ಉಪೇಂದ್ರ ಅಭಿನಯದ 'ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್'.

ಮಾಲಾಶ್ರೀ ಅಭಿನಯದ ಅದ್ದೂರಿ ಚಿತ್ರಪ್ರೇಕ್ಷಕರನ್ನು ಸೆಳೆಯುತ್ತದೆ ಎಂಬ ಉತ್ಸಾಹದಲ್ಲಿ ನಿರ್ಮಾಪಕ ರಾಮು ಇದ್ದಾರೆ. ಗುಲಾಮ ಚಿತ್ರದ ಸೋಲಿನಿಂದ ಕಂಗೆಟ್ಟಿರುವ ಅವರು ಈ ಚಿತ್ರ ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸದಲ್ಲಿದ್ದಾರೆ. ಮಕ್ಕಳನ್ನು ರಂಜಿಸುವ ವಿಭಿನ್ನ ಅವತಾರಗಳಲ್ಲಿ ಭೀಮೂಸ್ ಚಿತ್ರದ ಮೂಲಕ ಉಪೇಂದ್ರ ಬರುತ್ತಿದ್ದಾರೆ. ಇನ್ನೂ ಗ್ರಾಫಿಕ್ಸ್ ಕೆಲಸಗಳು ಬಾಕಿ ಇರುವ ಕಾರಣ ಮಾ.27ರಂದು ಭೀಮೂಸ್ ಬಿಡುಗಡೆಯಾಗುವ ಬಗ್ಗೆ ಅನುಮಾನಗಳಿವೆ.

ಸುದೀಪ್ ಅಭಿನಯದ 'ಈ ಶತಮಾನದ ವೀರ ಮದಕರಿ' ಹಾಗೂ ಎನ್ ಎಂ ಸುರೇಶ್ ಅವರ 'ಕಾರಂಜಿ' ಸಹ ಬಿಡುಗಡೆಗೆ ಕಾದಿವೆ. ಇವುಗಳ ಜೊತೆಗೆ ರಮೇಶ್ ಯಾದವ್ ರ 'ಕೆಂಚ' ಮತ್ತು ಉಪೇಂದ್ರ ಅವರ ಮತ್ತೊಂದು ಚಿತ್ರ 'ದುಬೈ ಬಾಬು' ಸಹ ಬಿಡುಗಡೆ ಪಟ್ಟಿಯಲ್ಲಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಉಪೇಂದ್ರ ಭೀಮೂಸ್... ವೆಬ್ ಸೈಟ್ ಗೆ ಚಾಲನೆ
ರಮ್ಯಾ ಮತ್ತು ಬಾಬು ನಡುವೆ ಬ್ಯಾಂಗ್ ಬ್ಯಾಂಗ್!
ಯುಗಾದಿಗೆ ಬರುತ್ತಿದ್ದಾರೆ ಕನ್ನಡದ ಕಿರಣ್ ಬೇಡಿ
ಸುದೀಪ್ ವೀರ ಮದಕರಿ ಚಿತ್ರಕ್ಕೆ ಮರು ನಾಮಕರಣ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada