»   »  ಬೆಂಗಳೂರು ಚಿತ್ರೋತ್ಸವದಲ್ಲಿ ಕನ್ನಡ ಚಿತ್ರಗಳ ಸುಗ್ಗಿ

ಬೆಂಗಳೂರು ಚಿತ್ರೋತ್ಸವದಲ್ಲಿ ಕನ್ನಡ ಚಿತ್ರಗಳ ಸುಗ್ಗಿ

Posted By:
Subscribe to Filmibeat Kannada
ಸಂಕ್ರಾಂತಿ ಹಬ್ಬದ ಸಂಭ್ರಮಕ್ಕೆ ಮೂರನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಜೊತೆಯಾಗಿದೆ. ಬೆಂಗಳೂರಿಗರಿಗೆ, ಕನ್ನಡ ಚಿತ್ರಪ್ರೇಮಿಗಳಿಗೆ ಒಂದು ವಾರ ಕಾಲ ಹಬ್ಬವೋ ಹಬ್ಬ. ಜ.16ರಿಂದ ಜ.22ರವರೆಗೆ ಚಿತ್ರೋತ್ಸವದಲ್ಲಿ ಎರಡು ಡಜನ್ ಕನ್ನಡ ಚಿತ್ರಗಳು ಪ್ರದರ್ಶನ ಕಾಣಲಿವೆ. ಎರಡು ಕನಸು,ಸೊಸೆ ತಂದ ಸೌಭಾಗ್ಯ, ತಬರನ ಕಥೆ, ಭೂಮಿಗೀತ, ಬೆಳದಿಂಗಳ ಬಾಲೆ... ಚಿತ್ರಗಳು ಚಿತೋತ್ಸವದಲ್ಲಿ ಪ್ರಧಾನ ಆಕರ್ಷಣೆಯಾಗಲಿವೆ. ಒಟ್ಟು 24 ಕನ್ನಡ ಚಿತ್ರಗಳನ್ನು ಪುನರಾವಲೋಕನ ವಿಭಾಗದಲ್ಲಿ ಪ್ರದರ್ಶಿಸಲಾಗುತ್ತಿದೆ.

ಈ ಸಿನಿಮಾಗಳನ್ನು ವಿಷನ್ ಸಿನಿಮಾಸ್ ಕಾಂಪ್ಲೆಕ್ಸ್, ಕೆಂಗಲ್ ಹನುಮಂತಯ್ಯ ರಸ್ತೆಯ ಕೆ.ಎಚ್.ಪಾಟೀಲ್ ಸಭಾಂಗಣ, ಎನ್ ಆರ್ ವೃತ್ತದ ಬಾದಾಮಿ ಹೌಸ್ ಮತ್ತು ಬನಶಂಕರಿ 2ನೇ ಹಂತದಲ್ಲಿರುವ ಸುಚಿತ್ರಾ ಸಭಾಂಗಣದಲ್ಲಿ ಪ್ರದರ್ಶಿಸಲಾಗುತ್ತದೆ. ಚಿತ್ರೋತ್ಸವ ಪ್ರವೇಶಕ್ಕೆ ಪ್ರತಿನಿಧಿ ಪಾಸ್ 500 ರು.ಗಳಾಗಿದ್ದು ಚಲನಚಿತ್ರ ಸಂಸ್ಥೆಗಳ ಸದಸ್ಯರು, ಚಲನಚಿತ್ರ ತರಬೇತಿ ಸಂಸ್ಥೆಗಳ ವಿದ್ಯಾರ್ಥಿಗಳು, ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದ ವಿದ್ಯಾರ್ಥಿಗಳು 300 ರು.ಗಳಿಗೆ ಪಾಸ್ ಖರೀದಿಸಬಹುದು.

ಚಿತ್ರೋತ್ಸವಲ್ಲಿ ಪ್ರದರ್ಶನಗೊಳ್ಳಲಿರುವ ಚಿತ್ರಗಳು:

ಚಲನಚಿತ್ರ  ನಿರ್ದೇಶಕರು
 ಕರುಣೆಯೇ ಕುಟುಂಬದ ಕಣ್ಣು  ಸಿಂಗ್ ಠಾಕೂರ್
 ನವಜೀವನ  ವಾದಿರಾಜ್ ಚಿತ್ರ (ಸಿ.ಎಸ್.ಮೂರ್ತಿ)
 ಸೊಸೆ ತಂದ ಸೌಭಾಗ್ಯ  ಎ.ವಿ.ಶೇಷಗಿರಿ ರಾವ್
 ಹಂಸಗೀತೆ   ಜಿ.ವಿ.ಅಯ್ಯರ್
 ಕಥಾ ಸಂಗಮ   ಪುಟ್ಟಣ್ಣ ಕಣಗಾಲ್
 ಎರಡು ಕನಸು  ದೊರೆ ಭಗವಾನ್
 ಸಿಂಗಾಪುರದಲ್ಲಿ ರಾಜಾಕುಳ್ಳ  ದ್ವಾರಕೀಶ್(ಸಿ.ವಿ.ರಾಜೇಂದ್ರನ್)
 ಆಕ್ಸಿಡೆಂಟ್  ಶಂಕರನಾಗ್
 ತಬರನ ಕಥೆ/ತಾಯಿ ಸಾಹೇಬ  ಗಿರೀಶ್ ಕಾಸರವಳ್ಳಿ
 ಮಿಥಿಲೆಯ ಸೀತೆಯರು  ಕೆ.ಎಸ್.ಎಲ್.ಸ್ವಾಮಿ
 ನಂಜುಂಡಿ ಕಲ್ಯಾಣ  ಎಂ.ಎಸ್.ರಾಜಶೇಖರ್
 ಮುತ್ತಿನ ಹಾರ  ಎಸ್.ವಿ.ರಾಜೇಂದ್ರ ಸಿಂಗ್ ಬಾಬು
 ಬೆಳದಿಂಗಳ ಬಾಲೆ  ಸುನಿಲ್ ಕುಮಾರ್ ದೇಸಾಯಿ
 ಗಾನಯೋಗಿ ಪಂಚಾಕ್ಷರ ಗವಾಯಿ  ಚಿಂದೋಡಿ ಬಂಗಾರೇಶ್
 ಭೂಮಿಗೀತ  ಕೇಸರಿ ಹರವೂ
 ಯಾರಿಗೂ ಹೇಳ್ಬೇಡಿ  ಕೋಡ್ಲು ರಾಮಕೃಷ್ಣ
 ಹುಲಿಯಾ  ಕೆ.ವಿ.ರಾಜು
 ಜೋಡಿ ಹಕ್ಕಿ  ಡಿ.ರಾಜೇಂದ್ರ ಬಾಬು
 ದೇವೀರಿ  ಕವಿತಾ ಲಂಕೇಶ್
 ಏಕಾಂಗಿ   ರವಿಚಂದ್ರನ್
 ಗಟ್ಟಿಮೇಳ  ಎಸ್.ಮಹೇಂದರ್
 ಗೌರಿ ಗಣೇಶ  ಫಣಿ ರಾಮಚಂದ್ರ
 ಮುಂಗಾರು ಮಳೆ  ಯೋಗರಾಜ್ ಭಟ್
 ಮಿಲನ  ಪ್ರಕಾಶ್


ಆಸಕ್ತರು ಹೆಚ್ಚಿನ ಮಾಹಿತಿಗೆ
: ದೂರವಾಣಿ-2671 1785 ಅಥವಾ ಇ-ಮೇಲ್: suchitrafilmsociety@gmail.com ಸಂಪರ್ಕಿಸಬಹುದು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಚಿತ್ರೋತ್ಸವ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada