ಮಲ್ಲಿಕಾ ಶೆರಾವತ್ ಕೊಲೆಗೆ ಸಂಚು ರೂಪಿಸಿದ್ದವನ ಬಂಧನ

By Rajendra

ಬಾಲಿವುಡ್ ಬೆಡಗಿ ಮಲ್ಲಿಕಾ ಶೆರಾವತ್ ಮೇಲೆ ಗುಂಡಿನ ದಾಳಿ ಮಾಡಲು ಸಂಚು ರೂಪಿಸಿದ್ದ ಇಬ್ಬರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಬಂಧಿತರು 13 ಅಪರಾಧ ಪ್ರಕರಣಗಳಲ್ಲಿ ಶಾಮೀಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ರಾಜೇಶ್ ದಲಾಲ್ (35) ಹಾಗೂ ರಾಜೀವ್ (28) ಬಂಧಿತ ಆರೋಪಿಗಳಿಂದ 9 ಎಂಎಂ ಪಿಸ್ತೂಲನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿ ದಲಾಲ್ ಪದವೀಧರನಾಗಿದ್ದು ಈತನ ತಂದೆ ವಕೀಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. "ಇವನು ವಿವೇಕ್ ವಿಹಾರ್ ಪ್ರದೇಶದಲ್ಲಿರುವುದಾಗಿ ದೊರೆತ ಖಚಿತ ಮಾಹಿತಿ ಮೇರೆಗೆ ಈತನನ್ನು ಬಂಧಿಸಲಾಯಿತು. ಅಕ್ಟೋಬರ್ 2006ರಲ್ಲಿ ಮಲ್ಲಿಕಾ ಶೆರಾವತ್ ಅವರು ಜಾಟ್ ಸಮುದಾಯದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ದಲಾಲ್ ಆಕೆಯ ಮೇಲೆ ಸೇಡು ತೀರಿಸಿಕೊಳ್ಳಲು ಪ್ಲಾನ್ ಮಾಡಿದ್ದ " ಎಂಬ ಅಂಶಗಳು ವಿಚಾರಣೆ ವೇಳೆ ಬಯಾಲಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮುಂಬೈನ ಬಾಂದ್ರಾ ಬಳಿಯ ಮಲ್ಲಿಕಾರ ಫ್ಲಾಟ್‌ನಲ್ಲಿ ದಾಳಿ ಮಾಡಲು ಸಂಚು ರೂಪಿಸಿದ್ದ. ಆದರೆ ನವೆಂಬರ್ 2006ರಲ್ಲಿ ಮುಂಬೈ ಪೊಲೀಸರಿಗೆ ಕೊಲ್ಲಾಪುರದಲ್ಲಿ ಸಿಕ್ಕಿಬೀಳುವ ಮೂಲಕ ಈತನ ಪ್ಲಾನ್‌ಗಳೆಲ್ಲವೂ ಉಲ್ಟಾ ಆಗಿದ್ದವು. ಈತನ ಮೇಲಿದ್ದ 13 ಅಪರಾಧ ಪ್ರಕರಣ ವಿಚಾರಣೆಗಾಗಿ ದೆಹಲಿ ಪೊಲೀಸರ ವಶಕ್ಕೆ ಒಪ್ಪಿಸಲಾಯಿತು. ಮೂರು ವರ್ಷ ತಿಹಾರ್ ಜೈಲೂಟ ತಿಂದ ದಲಾಲ್ ಬಳಿಕ ಪೆರೋಲ್ ಮೇಲೆ ಹೊರಬಂದು ಪೊಲೀಸರ ಕಣ್ಣಿಗೆ ಮಣ್ಣೆರಚಿ ತಪ್ಪಿಸಿಕೊಂಡು ಅಲೆಯುತ್ತಿದ್ದ.ಈಗ ಮತ್ತೆ ಪೊಲೀಸರ ಅತಿಥಿಯಾಗಿದ್ದಾನೆ. ಮಲ್ಲಿಕಾ ಶೆರಾವತ್ ಕೂಡ ನಿಟ್ಟುಸಿರು ಬಿಟ್ಟಿದ್ದಾರೆ.

More from Filmibeat

English summary
Cops arrest man who wanted to kill Mallika Sherawat. In October 2006, Mallika Sherawat is said to have uttered some derogatory words against the Jat community and a young man aged 35 then decided to revenge on her by killing her.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X