»   »  ಗಿಲ್ಲಿ ಚಿತ್ರಕ್ಕೆ ದಿಲ್ಲಿ ಮಾಡೆಲ್ ರಾಕುಲ್ ಸಿಂಗ್

ಗಿಲ್ಲಿ ಚಿತ್ರಕ್ಕೆ ದಿಲ್ಲಿ ಮಾಡೆಲ್ ರಾಕುಲ್ ಸಿಂಗ್

Subscribe to Filmibeat Kannada
Delhi model Rakul in Kannada Gilli
ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಮಾಡೆಲ್ ಬೆಡಗಿ ದಾಪುಗಾಲು ಹಾಕಿದ್ದಾರೆ. ಆಕೆಯ ಹೆಸರು ರಾಕುಲ್ ಪ್ರೀತಂ ಸಿಂಗ್, ದೆಹಲಿ ಮೂಲದ ರೂಪದರ್ಶಿ. ಅಲ್ಲಿ ಇಲ್ಲಿ ಯಾಕೆ ನಟಿಸಬೇಕು ಎಂದು ಸೀದಾ ಕನ್ನಡದ ಗಿಲ್ಲಿ ಚಿತ್ರಕ್ಕೆ ಎಂಟ್ರಿ ಹೊಡೆದಿದ್ದಾರೆ.

ಮಾರ್ಜಾಲ ನಡಿಗೆಯ ಬೆಡಗಿಯರು ಕನ್ನಡ ಕ್ಕೆ ಬರುತ್ತಿರುವುದು ಇದೇ ಹೊಸತಲ್ಲ. ಕೊಲ್ಕತ್ತಾದ ನಿಕೋಲೆಟ್ ಬರ್ಡ್, ಪುಣೆಯ ನಿಕಿತಾ, ಚಂಡಿಗಡದ ಯಾಮಿ ಗೌತಮ್ ಉದಾಹರಿಸಬಹುದು. ಗಾಂಧಿನಗರ ಕೆಂಪು ಹಾಸಿನ ಮೂಲಕ ಮಾಡೆಲ್ ಬೆಡಗಿಯರನ್ನು ಸ್ವಾಗತಿಸುತ್ತಿದೆ.

ನವರಸ ನಾಯಕ ಜಗ್ಗೇಶ್ ಪುತ್ರ ಗುರುರಾಜ್ ನಟಿಸುತ್ತಿರುವ ಗಿಲ್ಲಿ ಚಿತ್ರಕ್ಕೆ ದೆಹಲಿಯ ರಾಕುಲ್ ಬಂದಿಳಿದಿದ್ದಾರೆ. ಅಣಜಿ ನಾಗರಾಜ್, ಜಯಣ್ಣ ಮತ್ತು ವಿಜಯ್ ಪ್ರತಾಪ್ ನಿರ್ಮಿಸುತ್ತಿರುವ ಚಿತ್ರಕ್ಕೆ ರಾಘವ ಲೋಕಿ ನಿರ್ದೇಶಕ.

(ದಟ್ಸ್ ಕನ್ನಡ ಚಿತ್ರವಾರ್ತೆ)
ಗಿಲ್ಲಿ ಚಿತ್ರಕ್ಕೆ ನಾಯಕನಾಗಿ ಜಗ್ಗೇಶ್ ಪುತ್ರರತ್ನ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada