»   »  ಗುಂಡ್ರಗೋವಿಗೆ ಡಬ್ಬಿಂಗ್, ರೀರೆಕಾರ್ಡಿಂಗ್ ಓಕೆ

ಗುಂಡ್ರಗೋವಿಗೆ ಡಬ್ಬಿಂಗ್, ರೀರೆಕಾರ್ಡಿಂಗ್ ಓಕೆ

Subscribe to Filmibeat Kannada

ಶ್ರೀ ಸುದರ್ಶನ ಕ್ರಿಯೇಷನ್ಸ್ ಲಾಂಛನದಲ್ಲಿ ಗೋಪಾಲಕೃಷ್ಣ ಹಾಗೂ ಮಹೇಶ್ ನಿರ್ಮಿಸುತ್ತಿರುವ ಗುಂಡ್ರಗೋವಿ ಚಿತ್ರದ ಚಿತ್ರೀಕರಣ ಡಬ್ಬಿಂಗ್ ಅಲ್ಲದೇ, ರೀ ರೆಕಾರ್ಡಿಂಗ್ ಕೂಡ ಮುಗಿದಿದೆ. ಈಗಾಗಲೇ ಚಿತ್ರಕ್ಕೆ ಡಿ.ಟಿ.ಎಸ್. ಅಳವಡಿಸುವ ಕಾರ್ಯ ಪ್ರಾರಂಭವಾಗಿದೆ.

ಆದಿನಗಳು, ಸ್ಲಂಬಾಲ ಚಿತ್ರದಲ್ಲಿ ಗಮನಸೆಳೆಯುವ ಪಾತ್ರದಲ್ಲಿಮಿಂಚಿದ್ದ ಸತ್ಯ ಈ ಚಿತ್ರದ ನಾಯಕ. ಸಂಪೂರ್ಣವಾಗಿ ಗ್ರಾಮೀಣ ಪ್ರದೇಶದಲ್ಲಿ ನಡೆಯುವಂತಹ ಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ ನಾಯಕ ಕೆಲಸವಿಲ್ಲದೆ ಪೋಲಿಯಾಗಿ ಅಲೆಯುವ ಯುವಕ, ಅವಿದ್ಯಾವಂತ. ಆದರೂ, ಆತನಲ್ಲಿ ಒಂದು ವಿಶೇಷತೆ ಇರುತ್ತದೆ. ಅದನ್ನು ತೆರೆಯಮೇಲೆ ನೋಡಿದರೆ ಚೆನ್ನ ಎನ್ನುತ್ತಾರೆ ನಿರ್ದೇಶಕ ತಾರೇಶ್ ರಾಜು.

ಬಾಲಿವುಡ್‌ನಲ್ಲಿ ಹಲವಾರು ಚಿತ್ರಗಳಿಗೆ ಕೆಲಸ ಮಾಡಿದ ರಮೇಶ್ ಅಲ್ಬೆ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ಎ.ಆರ್. ರೆಹಮಾನ್‌ಬಳಿ ಸಂಗೀತಾಭ್ಯಾಸ ಮಾಡಿದ ಫೀನಿಕ್ಸ್ ರಾಜು ಈ ಚಿತ್ರದ ೪ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ನಾಯಕಿ ನವ್ಯಶ್ರೀ ಈಗಾಗಲೇ ಐಡ್ಯಾ ಮಾಡ್ಯಾರ ಎಂಬ ಹಾಸ್ಯ ಚಿತ್ರದಲ್ಲಿ ಅಭಿನಯಿಸಿದ್ದು, ಶರತ್ ಲೋಹಿತಾಶ್ವ, ನೀನಾಸಂ ಅಶ್ವತ್, ಆಶಾಲತಾ ಪ್ರಮುಖ ತಾರಾಗಣದಲ್ಲಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada