»   »  ಸಿಂಪೋನಿಯಲ್ಲಿ ದುಬಯ್ ಬಾಬು

ಸಿಂಪೋನಿಯಲ್ಲಿ ದುಬಯ್ ಬಾಬು

Subscribe to Filmibeat Kannada

ಶೈಲೇಂದ್ರ ಪ್ರೊಡಕ್ಷನ್ಸ್ ಲಾಂಛನದಲ್ಲಿ ಖ್ಯಾತ ನಿರ್ಮಾಪಕ ಶೈಲೇಂದ್ರ ಬಾಬು ನಿರ್ಮಿಸುತ್ತಿರುವ 'ದುಬಯ್ ಬಾಬು' ಚಿತ್ರಕ್ಕೆ ಸಂಗೀತ ನಿರ್ದೇಶಕ ವಿ.ಶ್ರೀಧರ್ ಸಾರಥ್ಯದಲ್ಲಿ ಹಿನ್ನಲೆ ಸಂಗೀತ ಪ್ರಕ್ರಿಯೆ ನಗರದ ಸಿಂಪೋನಿ ಸ್ಟುಡಿಯೋದಲ್ಲಿ ನಡೆಯುತ್ತಿದೆ.

ಕಳೆದ ವಾರ ಹೈದರಾಬಾದ್‌ನ ಪ್ರಸಿದ್ಧ ಆಡಿಯೋ ಸಂಸ್ಥೆ ಆದಿತ್ಯ ಮ್ಯೂಸಿಕ್ ಹೊರತಂದ ಚಿತ್ರದ ಧ್ವನಿಸುರುಳಿಗಳು ಮಾರುಕಟ್ಟೆಯಲ್ಲಿ ಭರದಿಂದ ಮಾರಾಟವಾಗುತ್ತಿದೆ. ಖರ್ಚಿನಲ್ಲಿ ಎಲ್ಲರಿಂದ ದುಬಾರಿ ಬಾಬು ಎಂದು ಕರೆಯಲ್ಪಡುತ್ತಿರುವ ಈ ದುಬಯ್ ಬಾಬು ಗುಣಮಟ್ಟದಲ್ಲೂ ಸಿರಿವಂತ.

ನಾಯಕ ಉಪೇಂದ್ರ ಈ ಚಿತ್ರದಲ್ಲಿ 16ಬಗೆಯ ಪಾತ್ರಗಳಲ್ಲಿ ಕಾಣಿಸಿಕೊಂಡಿರುವುದು ಚಿತ್ರದ ವಿಶೇಷವಾದರೆ, ನಿರ್ಮಾಪಕ ಶೈಲೇಂದ್ರ ಬಾಬು, ನಿರ್ದೇಶಕ ನಾಗಣ್ಣ ಹಾಗೂ ನಾಯಕ ಉಪೇಂದ್ರ ಸಂಗಮದ ಮೂರನೇ ಚಿತ್ರ ಯಶಸ್ಸು ಕಾಣುವುದೇ ಎಂಬ ಕಾತುರ ಎಲ್ಲರಲ್ಲೂ ಮನೆ ಮಾಡಿದೆ. ಹಿಂದೆ ಈ ತ್ರಿವಳಿಗಳ 'ಗೌರಮ್ಮ, 'ಕುಟುಂಬ ಚಿತ್ರಗಳು ಭರ್ಜರಿ ಯಶಸ್ಸು ಕಂಡಿದ್ದು ಗಮನಾರ್ಹ ಸಂಗತಿ.

ಉಪೇಂದ್ರ, ನಿಖಿತಾ, ಸಲೋನಿ, ಕುಮಾರ್ ಗೋವಿಂದ್, ಆರ್ಯನ್ ವೈದ್, ಸುಂದರರಾಜ್, ರಾಜೇಶ್, ದ್ವಾರಕೀಶ್, ಸೂರ್ಯ ಪಲ್ಲಕ್ಕಿ, ಎಂ.ಎಸ್.ಉಮೇಶ್ ಚಿತ್ರದ ತಾರಾಗಣದಲ್ಲಿದ್ದಾರೆ. ನಾಗಣ್ಣ ಚಿತ್ರಕತೆ ಬರೆದು ನಿರ್ದೇಶಿಸುತ್ತಿರುವ 'ದುಬಯ್ ಬಾಬು ಚಿತ್ರಕ್ಕೆ ಮುಂಬೈನ ಅನಿಲ್ ಜವೇರಿ ಅವರ ಛಾಯಾಗ್ರಹಣವಿದೆ. 'ಮುಸ್ಸಂಜೆ ಮಾತು ಖ್ಯಾತಿಯ ವಿ.ಶ್ರೀಧರ್ ಅವರ ಸಂಗೀತ, ಗೋವರ್ದನ್ ಸಂಕಲನ, ಥ್ರಿಲ್ಲರ್ ಮಂಜು ಸಾಹಸ, ಅಣ್ಣಯ್ಯ ಕಲೆ, ಕೇಶವಾದಿತ್ಯ ಸಂಭಾಷಣೆ, ತ್ರಿಭುವನ್ ನೃತ್ಯ, ಪ್ರಶಾಂತ್ ಸಹ ನಿರ್ದೇಶನ, ಮುರುಳಿ ನಿರ್ಮಾಣ ನಿರ್ವಹಣೆಯಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ದುಬಯ್ ಬಾಬು ಚಿತ್ರದ ಹಾಡುಗಳು ಹೇಗಿವೆ?
ಹದಿನೇಳರ ಗೆಟಪ್ಪಿನಲ್ಲಿ ಸೂಪರ್ ಸ್ಟಾರ್ ಉಪೇಂದ್ರ
ಕರ್ನಾಟಕಕ್ಕೆ ಕಾಲಿಟ್ಟ ಆಂಧ್ರ ಆಡಿಯೋ ಕಂಪನಿ
ದುಬೈ ಬಾಬುನಲ್ಲಿ ಒಂದಾದ ಉಪೇಂದ್ರ,ಗೋವಿಂದ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada