For Quick Alerts
  ALLOW NOTIFICATIONS  
  For Daily Alerts

  ಪ್ರೇಕ್ಷಕರ ಮನ ಕದ್ದು ಗೆದ್ದಿದ್ದಾನೆ ಕಳ್ ಮಂಜ

  By Rajendra
  |

  ಕೋಮಲ್ ಕುಮಾರ್ ಮತ್ತೊಮ್ಮೆ ಪ್ರೇಕ್ಷಕರ ಮನ ಕದ್ದಿದ್ದಾರೆ 'ಕಳ್ ಮಂಜ'ನ ರೂಪದಲ್ಲಿ. ಜೊತೆಗೆ 'ಕಳ್ ಮಂಜ' ಬಾಕ್ಸಾಫೀಸನ್ನು ಕೊಳ್ಳೆಹೊಡೆದಿದ್ದಾನೆ. ಚಿತ್ರದ ನಿರ್ಮಾಪಕಿ ಹಾಗೂ ಕೋಮಲ್ ಅವರ ಪತ್ನಿ ಅನಸೂಯ ಅವರ ದುಡ್ಡು ಬಡ್ಡಿ ಸಮೇತ ವಾಪಸ್ಸಾಗಿದೆ.

  'ಕಳ್ ಮಂಜ' ಶರವೇಗದಲ್ಲಿ ಗೆಲ್ಲಲು ಕಾರಣರಾದವರಲ್ಲಿ ವಿತರಕ, ಪ್ರದರ್ಶಕ ಹಾಗೂ ನಿರ್ಮಾಪಕ ಎನ್ ಕುಮಾರ್ ಅವರು ಒಬ್ಬರು ಎಂದಿದ್ದಾರೆ ಕೋಮಲ್. ಎಪ್ಪತ್ತೈದಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 'ಕಳ್ ಮಂಜ' ಪ್ರೇಕ್ಷಕರನ್ನು ನಕ್ಕು ನಲಿಸುತ್ತಿದ್ದಾನೆ. ಈ ಸಂತಸವನ್ನು ಕೋಮಲ್ ಇತ್ತೀಚೆಗೆ ಮಾಧ್ಯಮ ಪ್ರತಿಧಿಗಳೊಂದಿಗೆ ಹಂಚಿಕೊಂಡರು.

  ಕೋಮಲ್ ಅವರ ಪತ್ನಿ ಅನಸೂಯಾ ಅವರು ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್. "ತಮ್ಮ ಪತಿಯ ಹಾರ್ಡ್ ವರ್ಕ್ ಚಿತ್ರವನ್ನು ಗೆಲ್ಲಿಸಿದೆ. ಚಿತ್ರವನ್ನು ನೋಡಿ ನಮ್ಮನ್ನು ಆಶೀರ್ವದಿಸಿದ್ದಕ್ಕೆ ಪ್ರೇಕ್ಷಕರಿಗೆ ಧನ್ಯವಾದಗಳು" ಎಂದಿದ್ದಾರೆ. ನಿರ್ದೇಶಕ ಪ್ರಭಕರನ್, ನಟಿ ಐಶ್ವರ್ಯ ನಾಗ್, ಸಂಗೀತ ನಿರ್ದೇಶಕ ಎಮಿಲ್ ಉಪಸ್ಥಿತರಿದ್ದರು. ಒಟ್ಟಿನಲ್ಲಿ ಕೋಮಲ್‌ರಿಂದ ಮತ್ತಷ್ಟು ಹಾಸ್ಯ ಚಿತ್ರಗಳನ್ನು ಪ್ರೇಕ್ಷಕರು ನಿರೀಕ್ಷಿಸಬಹುದು.

  English summary
  Actor Komal Kumar comedy film Kal Manja success in Box office. The producer Anasooya, distributor N Kumar shares their happiness at Solitaire Hotel, Bangalore recently. Komalkumar wife Anasooya, a software engineer was the first person to feel happy it seems because her very hard working husband has got the good response.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X