»   »  ಚಲನಚಿತ್ರ ಪ್ರಶಸ್ತಿ ವಿರುದ್ಧ ಮಂಜು ಪತ್ರಿಕಾಗೋಷ್ಠಿ

ಚಲನಚಿತ್ರ ಪ್ರಶಸ್ತಿ ವಿರುದ್ಧ ಮಂಜು ಪತ್ರಿಕಾಗೋಷ್ಠಿ

Subscribe to Filmibeat Kannada

2207-08ನೇ ಸಾಲಿನ ರಾಜ್ಯ ಚಲನ ಚಿತ್ರ ಪ್ರಶಸ್ತಿ ತೀರ್ಪಿನ ವಿರುದ್ಧ ಪ್ರತಿಭಟನೆ ಮತ್ತು ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಲು ನಿರ್ಮಾಪಕ ಕೆ.ಮಂಜು ಪತ್ರಿಕಾಗೋಷ್ಠಿ ಕರೆದಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ 'ಮಾತಾಡ್ ಮಾತಾಡ್ ಮಲ್ಲಿಗೆ' ಚಿತ್ರತಂಡ ಹಾಗೂ ಚಿತ್ರೋದ್ಯಮದ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಬೆಂಗಳೂರಿನ ಪ್ರೆಸ್ ಕ್ಲಬ್ ಆವರಣದಲ್ಲಿ ಮಂಗಳವಾರ (ಜ.13) ಮಧ್ಯಾಹ್ನ 2.30ಕ್ಕೆ ಪತ್ರಿಕಾಗೋಷ್ಠಿಯನ್ನು ಆಯೋಜಿಸಲಾಗಿದೆ. ಆ ದಿನಗಳು ಚಿತ್ರದಅಗ್ನಿ ಶ್ರೀಧರ್, ಮಾತಾಡ್ ಮಾತಾಡ್ ಮಲ್ಲಿಗೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಮತ್ತು ನಟ ವಿಷ್ಣುವರ್ಧನ್ ಪತ್ರಿಕಾಗೋಷ್ಠಿಗೆ ಆಗಮಿಸುವ ನಿರೀಕ್ಷೆ ಇದೆ.

ಕೆ.ಮಂಜು ನಿರ್ಮಾಣದ ಮಾತಾಡ್ ಮಾತಾಡ್ ಚಿತ್ರಕ್ಕೆ ಮೂರನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ನೀಡಲಾಗಿದೆ. ಹಾಗೆಯೇ ಆ ದಿನಗಳು ಚಿತ್ರಕ್ಕೆ ಮೂರು ಪ್ರಶಸ್ತಿಗಳನ್ನು (ಅತ್ಯುತ್ತಮ ಸಂಭಾಷಣೆ, ಛಾಯಾಗ್ರಹಣ, ಕಂಠದಾನ) ನೀಡಲಾಗಿದೆ. ಮೊದಲನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದ ಚಿತ್ರಕ್ಕಿಂತಲೂ ತಮ್ಮ ಚಿತ್ರಗಳು ಉತ್ತಮವಾಗಿದ್ದರೂ ಪ್ರಶಸ್ತಿ ನೀಡದಿರುವ ಬಗ್ಗೆ ಅಗ್ನಿ ಶ್ರೀಧರ್ ಮತ್ತು ಕೆ.ಮಂಜು ಅವರು ಆಯ್ಕೆ ಸಮಿತಿ ವಿರುದ್ಧ ಕಿಡಿಕಾರಿ ಪ್ರಶಸ್ತಿಗಳನ್ನು ನಿರಾಕರಿಸಿದ್ದಾರೆ. ಈ ಕಾರಣಕ್ಕೆ ಇಂದು ಕರೆದಿರುವ ಪತ್ರಿಕಾಗೋಷ್ಠಿ ಬಹಳಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)
ಅಗ್ನಿ ಶ್ರೀಧರ್ ಮತ್ತು ಮಂಜುರಿಂದ ಪ್ರಶಸ್ತಿ ತಿರಸ್ಕಾರ
ಗುಲಾಬಿ ಟಾಕೀಸ್ ಶ್ರೇಷ್ಠ ಚಿತ್ರ; ಪುನೀತ್ ಶ್ರೇಷ್ಠ ನಟ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada