»   » ರೇಡಿಯೋ ಮಿರ್ಚಿ ಸ್ಪರ್ಧೆಗೆ ರಮ್ಯಾ ಚಾಲನೆ

ರೇಡಿಯೋ ಮಿರ್ಚಿ ಸ್ಪರ್ಧೆಗೆ ರಮ್ಯಾ ಚಾಲನೆ

Posted By:
Subscribe to Filmibeat Kannada

ಬೆಂಗಳೂರಿನ ಜನಪ್ರಿಯ ರೇಡಿಯೋ ಸ್ಟೇಷನ್ 98.3 ತನ್ನ ಶ್ರೋತೃಗಳಿಗೆ ಯುಗಾದಿ ಹಬ್ಬದ ಪ್ರಯುಕ್ತ ಸಖತ್ ಹಾಟ್ ಕಾರ್ಯಕ್ರಮ 'ಮಿರ್ಚಿ ಸ್ಟಾಕ್ ಎಕ್ಸ್ ಚೇಂಜ್' ಆರಂಭಿಸಿದೆ. ಕನ್ನಡ ಚಿತ್ರರಂಗದ ಲಕ್ಕಿ ಸ್ಟಾರ್ ರಮ್ಯಾ ಶುಕ್ರವಾರ(ಮಾ.12) ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮಕ್ಕೆ ಸೀರೆಯುಟ್ಟು ಬಂದಿದ್ದ ರಮ್ಯಾ ಸ್ಪರ್ಧೆಗೆ ಇಡಲಾಗಿದ್ದ ಬೈಕ್ ಪಕ್ಕನಿಂತು ನೋಡಿದ್ದೆ ತಡ ಕ್ಯಾಮೆರಾ ಕಣ್ಣುಗಳು ಪಳಗುಟ್ಟಿದವು!

'ಮಿರ್ಚಿ ಸ್ಟಾಕ್ ಎಕ್ಸ್ ಚೇಂಜ್' ಸ್ಪರ್ಧೆಯಲ್ಲಿ ಭಾಗವಹಿಸುವ ಕೇಳುಗರಿಗೆ ಬೈಕ್ , ಲ್ಯಾಪ್ ಟಾಪ್, ಐಪಾಡ್, ಟಿವಿ,ಮೊಬೈಲ್ ಫೋನ್, ರೆಫ್ರಿಜರೇಟರ್, ವಾಷಿಂಗ್ ಮೆಷಿನ್, ಡೈನಿಂಗ್ ಟೇಬಲ್ ಹೀಗೆ ಹಲವಾರು ದಿನಬಳಕೆ ವಸ್ತುಗಳು ದೊರೆಯಲಿವೆ. ಈ ಕಾರ್ಯಕ್ರಮ ಮಾರ್ಚ್12ರಿಂದ ಮಾರ್ಚ್ 16, 2010ರವರೆಗೂ ರೇಡಿಯೋ ಮಿರ್ಚಿ ಕೇಳುಗರಿಗೆ ಲಭ್ಯವಾಗಲಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಕೇಳುಗರು 58888 ಸಂಖ್ಯೆಗೆ ಎಸ್ಸೆಂಎಸ್ ಮಾಡಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದು.

ಶ್ರೋತೃಗಳ ಜೊತೆ ಹರಟೆ ಹೊಡೆಯುತ್ತಾ ಮಿರ್ಚಿ ಸ್ಟಾಕ್ ಎಕ್ಸ್ ಚೇಂಜ್ ಸ್ಪರ್ಧೆಗೆ ನಟಿ ರಮ್ಯಾ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ರಮ್ಯಾ ಮಾತನಾಡುತ್ತಾ, ಯುಗಾದಿ ನನಗೆ ಇಷ್ಟವಾದ ಹಬ್ಬಗಳಲ್ಲಿ ಒಂದು, ಯಾಕೆಂದರೆ ಸಿಕ್ಕಾಪಟ್ಟೆ ಶಾಪಿಂಗ್ ಮಾಡಬಹುದು. ಬೆಂಗಳೂರಿಗರಿಗೆ ಮುಂಗಡವಾಗಿ ಯುಗಾದಿ ಹಬ್ಬದ ಶುಭಾಶಯಗಳು ಎಂದರು.

ಮಿರ್ಚಿ ಸ್ಟಾಕ್ ಎಕ್ಸ್ ಚೇಂಜ್ ಒಂದು ರೀತಿ ತಮಾಷೆಯಿಂದ ಕೂಡಿದ ಸ್ಪರ್ಧೆ. ರೇಡಿಯೋ ಮಿರ್ಚಿ ನನಗೂ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಕೊಟ್ಟರೆ ನನ್ನ ಹಳೆಯ ಲ್ಯಾಪ್ ಟಾಪನ್ನು ಕೊಟ್ಟು ಆಫೆಲ್ ಕಂಪನಿಯ ಹೊಸ ಮಾಡೆಲನ್ನು ತೆಗೆದುಕೊಳ್ಳುತ್ತಿದ್ದೆ ಎಂದು ನಕ್ಕರು.

ಹೊಸ ವಸ್ತುಗಳನ್ನು ಖರೀದಿಸಲು ಯುಗಾದಿ ಸೂಕ್ತವಾದ ಹಬ್ಬ. ರೇಡಿಯೋ ಮಿರ್ಚಿಯ ಮಿರ್ಚಿ ಸ್ಟಾಕ್ ಎಕ್ಸ್ ಚೇಂಜ್ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಕೇಳುಗರು ಹಳೆ ವಸ್ತುಗಳನ್ನು ಕೊಟ್ಟು ಹೊಸ ವಸ್ತುಗಳನ್ನು ಪಡೆಯಬಹುದು ಎಂದು ರೇಡಿಯೋ ಮಿರ್ಚಿಯ ಕರ್ನಾಟಕ ಮತ್ತು ಕೇರಳ ಮುಖ್ಯಸ್ಥ ರಾಹುಲ್ ಬಾಲ್ಯನ್ ತಿಳಿಸಿದರು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada