»   »  ಸುದೀಪ್, ರಮ್ಯಾ ಜೋಡಿಯ ಕಿಚ್ಚ ಹುಚ್ಚ್ಚ ಆರಂಭ

ಸುದೀಪ್, ರಮ್ಯಾ ಜೋಡಿಯ ಕಿಚ್ಚ ಹುಚ್ಚ್ಚ ಆರಂಭ

Posted By:
Subscribe to Filmibeat Kannada
Kichcha Huchcha launched
ಸುದೀಪ್ ಮತ್ತು ರಮ್ಯಾ ಮುಖ್ಯ ಭೂಮಿಕೆಯಲ್ಲಿರುವ 'ಕಿಚ್ಚ ಹುಚ್ಚ' ಚಿತ್ರ ಸೆಟ್ಟೇರಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತವರ ಬಾಳ ಸಂಗಾತಿ ಅಶ್ವಿನಿ ಅವರು ಚಿತ್ರೀಕರಣಕ್ಕೆ ಚಾಲನೆ ನೀಡಿ ಕಿಚ್ಚ ಹುಚ್ಚ ಯಶಸ್ವಿಯಾಗಲಿ ಎಂದು ಹಾರೈಸಿದರು.

ತಮಿಳಿನ'ಚಿತ್ರಂ ಪೆಸುತ್ತಾಡಿ'ಚಿತ್ರದ ರೀಮೇಕ್ ಇದಾಗಿದ್ದು ಖಳ ನಟನ ಪಾತ್ರದಲ್ಲಿ ಇದೇ ಮೊದಲ ಬಾರಿಗೆ ಖ್ಯಾತ ನಿರ್ಮಾಪಕ ಕೆ ಮಂಜು ನಟಿಸುತ್ತಿದ್ದಾರೆ. 'ಹುಚ್ಚ್ಚ' ಚಿತ್ರದ ನಟನೆಯನ್ನು ಮೆಚ್ಚಿ ಕಿಚ್ಚ ಎಂಬ ಬಿರುದನ್ನು ಸುದೀಪ್ ಅಭಿಮಾನಿಗಳು ನೀಡಿದ್ದರು. ಇವೆರಡು ಹೆಸರುಗಳನ್ನು ಒಂದು ಮಾಡಿ ಚಿತ್ರಕ್ಕೆ 'ಕಿಚ್ಚ ಹುಚ್ಚ' ಎಂದು ಹೆಸರಿಡಲಾಗಿದೆ. ಈಗಾಗಲೇ ಕಿಚ್ಚ ಮತ್ತು ಹುಚ್ಚ ಎಂಬ ಎರಡು ಹೆಸರುಗಳು ಜನಪ್ರಿಯವಾಗಿವೆ. ಹಾಗಾಗಿ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದೇ ಬರುತ್ತಾರೆ ಎಂಬ ವಿಶ್ವಾಸ ಚಿತ್ರತಂಡದ್ದು.

ಚಿತ್ರದ ನಾಯಕಿಯಾಗಿ ಸುದೀಪ್ ಗೆ ಜತೆಯಾಗಿ ರಮ್ಯಾ ನಟಿಸುತ್ತಿದ್ದಾರೆ. ಶಾಸಕನಾಗಿ ಪ್ರಣಯರಾಜ ಶ್ರೀನಾಥ್ ಈ ಚಿತ್ರದಲ್ಲಿ ಕಾಣಿಸಲಿದ್ದಾರೆ. ಸುದೀಪ್ ಜತೆ ರಮ್ಯಾ ನಟಿಸುತ್ತಿರುವ ಮೂರನೇ ಚಿತ್ರ ಇದಾಗಿದ್ದು, ಈ ಹಿಂದೆ 'ರಂಗ ಎಸ್ಸೆಸ್ಸೆಲ್ಸಿ' ಮತ್ತು 'ಮುಸ್ಸಂಜೆ ಮಾತು' ಚಿತ್ರಗಳಲ್ಲಿ ನಟಿಸಿದ್ದರು.

ಕನ್ನಡಕ್ಕ್ಕೆ ತಕ್ಕಂತೆ ಕತೆ, ಚಿತ್ರಕತೆಯನ್ನು ಅಲ್ಪ ಸ್ವಲ್ಪ ಬದಲಾವಣೆ ಮಾಡಿಕೊಳ್ಳಲಾಗಿದೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ಗುರುದತ್. ಹತ್ತು ದಿನಗಳ ಕಾಲ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಿ ಉಳಿದ ಭಾಗವನ್ನು ಮೈಸೂರಿನಲ್ಲಿ ಚಿತ್ರೀಕರಿಸುವುದಾಗಿ ಅವರು ತಿಳಿಸಿದರು. ಕಿಚ್ಚ ಹುಚ್ಚ ಚಿತ್ರವನ್ನು ಬಾಲಾಜಿ ನಿರ್ಮಿಸುತ್ತಿದ್ದು, ಚಿತ್ರದ ಶೀಷಿಕೆಯೇ ಸಾಕಷ್ಟು ಆಕರ್ಷಕವಾಗಿದೆ. ಚಿತ್ರದ ಪಾತ್ರಗಳು ಸಹ ಅಷ್ಟೇ ಚೆನ್ನಾಗಿವೆ ಎನ್ನುತ್ತಾರೆ ಅವರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಸುದೀಪ್, ರಮ್ಯಾ ಚಿತ್ರದಲ್ಲಿ ಖಳನಟನಾಗಿ ಕೆ.ಮಂಜು!
ಮರುಕಳುಹಿಸಿದ ಮಿನುಗು ತಾರೆ ಕಲ್ಪನಾ ನೆನಪು
ಶತಕ ಬಾರಿಸಿದ ಅಂಬಾರಿ; ರು.5 ಕೋಟಿ ಲಾಭ!

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X