»   » 'ಸ್ವತಂತ್ರ ಪಾಳ್ಯ' ಸಹನಟನ ಬರ್ಭರ ಕೊಲೆ

'ಸ್ವತಂತ್ರ ಪಾಳ್ಯ' ಸಹನಟನ ಬರ್ಭರ ಕೊಲೆ

Posted By:
Subscribe to Filmibeat Kannada

ಇತ್ತೇಚೆಗೆ ಬಿಡುಗಡೆ ಗೊಂಡಿದ್ದ 'ಸ್ವತಂತ್ರ ಪಾಳ್ಯ' ಚಿತ್ರದಲ್ಲಿ ನಾಯಕ ನಟನಿಗೆ ಸ್ನೇಹಿತನಾಗಿ ಮತ್ತು ಹಲವು ಧಾರಾವಾಹಿಗಳಲ್ಲಿ ನಟಿಸಿದ್ದ ಶಂಕರ್ ಎನ್ನುವ ಸಹನಟ ಮಡಿಕೇರಿ ಸಮೀಪದ ಮೇಕೇರಿ ಬಳಿಯ ಹೋಂಸ್ಟೇ ಒಂದರಲ್ಲಿ ಬರ್ಭರವಾಗಿ ಹತ್ಯೆಗಿಡಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

27 ವರ್ಷದ ಶಂಕರ್ ಹೋಂ ಸ್ಟೇ ಒಂದನ್ನು ಬಾಡಿಗೆಗೆ ಪಡೆದುಕೊಂಡು ತಾನೇ ನಡೆಸುತ್ತಿದ್ದ. ಮಂಡ್ಯದಿಂದ ಬಂದಿರ ಬಹುದೆಂದು ಶಂಕಿಸಲಾಗಿರುವ ನಾಲ್ಕು ಜನ ದುಷ್ಕರ್ಮಿಗಳು ಸೋಮವಾರ ( ಜ .11) ರಾತ್ರಿ ಹತ್ತು ಗಂಟೆಯ ಸುಮಾರಿಗೆ ಕೊಲೆಗೈದು ಪರಾರಿಯಾಗಿದ್ದಾರೆ.

ಸುಮಾರು ಎರಡು ತಿಂಗಳಿನಿಂದ ಶಂಕರ್ ಇಲ್ಲಿ ಹೋಂಸ್ಟೇ ನಡೆಸುತ್ತಿದ್ದ. ಎರಡು ದಿನಗಳ ಹಿಂದೆ ಮಂಡ್ಯ ದಿಂದ ಬಂದಿರಬಹುದೆಂದು ಶಂಕಿಸಲಾಗಿರುವ ನಾಲ್ಕು ಜನ ಬಾಡಿಗೆ ಕೊಠಡಿ ನೀಡುವಂತೆ ಕೇಳಿಕೊಂಡು ಬಂದಿದ್ದರು. ಆ ದಿನ ರಾತ್ರಿ ಶಂಕರ್ ಮತ್ತು ಆತನ ಸಹಾಯಕ ಇಬ್ಬರೂ ಹೋಂಸ್ಟೇ ನಲ್ಲೇ ಇದ್ದರು. ಈತನ ಸಹಾಯಕ ಹೋಂಸ್ಟೇ ಹಿಂಭಾಗದಲ್ಲಿ ಪಾತ್ರೆ ತೊಳೆಯುತ್ತಿದ್ದಾಗ ಶಂಕರ್ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ. ಆ ಸಮಯದಲ್ಲಿ ದುಷ್ಕರ್ಮಿಗಳು ಆತನ ತಲೆ, ಹೊಟ್ಟೆ ಮತ್ತು ಕುತ್ತಿಗೆಗೆ ಮಾರಕಾಸ್ತ್ರಗಳಿಂದ ಹೊಡೆದು ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಕೊಡಗಿನಲ್ಲಿ ಶಂಕರ್ ಗೆ ಯಾರೂ ದ್ವೇಷಿಗಳಿರಲಿಲ್ಲ ಮತ್ತು ಹೋಂ ಸ್ಟೇ ನಡೆಸುವುದಕ್ಕೂ ಯಾರಿಂದಲೂ ವಿರೋಧವಿರಲಿಲ್ಲ. ಹಳೆ ವೈಷಮ್ಯ ಅಥವಾ ಬೇರಾವುದೋ ಕಾರಣಗಳಿಂದ ಹೊರಗಿನಿಂದ ಬಂದ ಆರೋಪಿಗಳು ಶಂಕರ್ ನನ್ನು ಕೊಲೆ ಮಾಡಿರಬಹುದೆಂದು ಪೊಲೀಸರು ಸಂಶಯ ವ್ಯಕ್ತ ಪಡಿಸಿದ್ದಾರೆ.

ಸ್ವತಂತ್ರ ಪಾಳ್ಯ ಚಿತ್ರ ವಿಮರ್ಶೆ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada