»   » ರಾಮನಗರದಲ್ಲಿ 'ಟೋಪಿ' ಹಾಕಿದ ರಿಯಲ್ ಸ್ಟಾರ್

ರಾಮನಗರದಲ್ಲಿ 'ಟೋಪಿ' ಹಾಕಿದ ರಿಯಲ್ ಸ್ಟಾರ್

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಈಗ 'ಟೋಪಿವಾಲಾ' ಆಗಿ ಬರುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ಚಿತ್ರದ ಮುಹೂರ್ತ ಇತ್ತೀಚೆಗೆ ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದಲ್ಲಿ ನೆರವೇರಿತು. ಅಲ್ಲಿಂದ ಸೀದಾ ಚಿತ್ರತಂಡ ರಾಮನಗರಕ್ಕೆ ಬಂದು ಚಿತ್ರೀಕರಣದಲ್ಲಿ ಪಾಲ್ಗೊಂಡಿದೆ.

ಒಂದು ವಾರ ಕಾಲ ರಾಮನಗರದಲ್ಲಿ 'ಟೋಪಿವಾಲಾ' ಚಿತ್ರೀಕರಣ ನಡೆಯಲಿದೆ. ನಟರಾದ ರವಿಶಂಕರ್, ರಂಗಾಯಣ ರಘು ಸೇರಿದಂತೆ ಹಲವರು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಆರ್ ಜೆ ಶ್ರೀನಿ ನಿರ್ದೇಶಿಸುತ್ತಿರುವ ಈ ಚಿತ್ರವನ್ನು ಕನಕಪುರ ಶ್ರೀನಿವಾಸ್ ಹಾಗೂ ಕೆಪಿ ಶ್ರೀಕಾಂತ್ ನಿರ್ಮಿಸುತ್ತಿದ್ದಾರೆ. ಚಿತ್ರದ ನಾಯಕಿ ಭಾವನಾ.

ಗುರುವಾರದಿಂದ (ಮಾ.15) ಚಿತ್ರದ ನಾಯಕ ಉಪೇಂದ್ರ ಹಾಗೂ ನಾಯಕಿ ಭಾವನಾ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತವಿದೆ. ಏತನ್ಮಧ್ಯೆ ಉಪ್ಪಿಯ 'ಗಾಡ್ ಫಾದರ್' ಹಾಗೂ 'ಕಠಾರಿವೀರ ಸುರ ಸುಂದರಾಂಗಿ' ಚಿತ್ರಗಳ ಶೂಟಿಂಗ್ ಮುಗಿದಿದೆ. (ಏಜೆನ್ಸೀಸ್)

English summary
Real Star Upendra and Bhavana lead Kannada movie Topiwala launched at the mountainous stretch near Ramnagar. Now the shooting is caned at Ramanagar. Actors Ravishankar and Rangayana Raghu and others had participated in the shooting sequence.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X