»   » ಕನ್ನಡ ಚಿತ್ರನಟ ಇಂದೂಧರ್ ದಂಪತಿ ಆತ್ಮಹತ್ಯೆ

ಕನ್ನಡ ಚಿತ್ರನಟ ಇಂದೂಧರ್ ದಂಪತಿ ಆತ್ಮಹತ್ಯೆ

Posted By:
Subscribe to Filmibeat Kannada
Actor Indudhar Hemavathi couple commit suicide
ಕನ್ನಡ ಚಿತ್ರರಂಗದ ನಟ, ಕಿರುತೆರೆ ಕಲಾವಿದ ಇಂದೂಧರ್(49) ಹಾಗೂ ಅವರು ಪತ್ನಿ ಹೇಮಾವತಿ(38) ಅವರು ಬುಧವಾರ(ಜು.14)ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರು ಜಯನಗರದ ಅವರ ನಿವಾಸದಲ್ಲಿ ನೇಣು ಬಿಗಿದುಕೊಂಡು ಇಂದೂಧರ್ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇಂದಧರ್ ಕನ್ನಡದ ಶ್ರುತಿ, ಅಣ್ಣಯ್ಯ, ನಿಷ್ಕರ್ಷ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಉದಯ ವಾಹಿನಿಯ 'ಕುಂಕುಮ ಭಾಗ್ಯ' ಧಾರಾವಾಹಿಯಲ್ಲೂ ಅವರು ಅಭಿನಯಿಸುತ್ತಿದ್ದರು. ಆತ್ಮಹತ್ಯೆಗೆ ಆರ್ಥಿಕ ದುಃಸ್ಥಿತಿಯೇ ಕಾರಣ ಎನ್ನಲಾಗಿದೆ.

ಇಂದುಧರ್ ಅವರ ಆತ್ಮಹತ್ಯೆಯಿಂದ ಕನ್ನಡ ಚಿತ್ರರಂಗ ಆಘಾತಕ್ಕೊಳಗಾಗಿದೆ. ಇಂದುಧರ್ ಅವರ ಪತ್ನಿ ಹೇಮಾವತಿ ಅವರು 'ಗಂಡುಗಲಿ ಕುಮಾರರಾಮ' ಸೇರಿದಂತೆ ಹಲವಾರು ಕನ್ನಡ ಚಿತ್ರಗಳಿಗೆ ಸಹಾಯಕರಾಗಿ ಕೆಲಸ ಮಾಡಿದ್ದರು. ಸ್ವತಃ ಚಿತ್ರವೊಂದನ್ನು ನಿರ್ಮಿಸುವ ಇರಾದೆಯೂ ಅವರಿಗಿತ್ತು.

ಆತ್ಮಹತ್ಯೆಗೆ ತಕ್ಷಣ ಕಾರಣ ತಿಳಿದುಬಂದಿಲ್ಲ. ಸಾಕಷ್ಟು ಸಾಲವನ್ನು ಮಾಡಿಕೊಂಡಿದ್ದೆ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ. ಹೇಮಾವತಿ ಅವರ ಮೃತದೇಹ ಜಯನಗರದ ಅವರ ಮನೆಯಲ್ಲಿ ಮಂಚದ ಮೇಲೆ ಪತ್ತೆಯಾಗಿದೆ. ಮೊದಲು ಅವರನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿ ಬಳಿಕ ಇಂದುಧರ್ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ.

ಇಂದುಧರ್ ಅವರು ಕ್ರೇಜಿಸ್ಟಾರ್ ರವಿಚಂದ್ರನ್, ಸುನಿಲ್ ಹಾಗೂ ಮಾಲಾಶ್ರೀ ಅವರ ಜೊತೆ ನಟಿಸಿದ್ದರು. ಕನ್ನಡ ಚಿತ್ರರಂಗದಲ್ಲಿ ಸ್ನೇಹಪರವಾಗಿದ್ದರು. ಅವರು ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ಜಗ್ಗೇಶ್, ಶಿವಧ್ವಜ್, ತಾರಾ, ಹೊನ್ನವಳ್ಳಿ ಕೃಷ್ಣ ಸೇರಿದಂತೆ ಕನ್ನಡ ಚಿತ್ರರಂಗದ ಹಲವು ಕಲಾವಿದರು ಖೇದ ವ್ಯಕ್ತಪಡಿಸಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada