»   »  ಬಾಲಿವುಡ್ ನಟ ಆರ್ಯನ್ ವೈದ್ ಕನ್ನಡ ಪ್ರೇಮ

ಬಾಲಿವುಡ್ ನಟ ಆರ್ಯನ್ ವೈದ್ ಕನ್ನಡ ಪ್ರೇಮ

Posted By: Super Admin
Subscribe to Filmibeat Kannada

ಕನ್ನಡ ನೆಲದಲ್ಲಿ ಹುಟ್ಟಿ ಬೆಳೆದ ಕನ್ನಡಿಗನೇ ಕನ್ನಡ ಮಾತನಾಡಲು ಹಿಂದೆ ಮುಂದೆ ನೋಡುವ ಈ ಪರಿಸ್ಥಿತಿಯಲ್ಲಿ ಬಾಲಿವುಡ್ ಕಲಾವಿದರೊಬ್ಬರು ಕನ್ನಡದ ಚಿತ್ರಕ್ಕೆ ಡಬ್ಬಿಂಗ್ ಮಾಡಿರುವುದು ಅಭಿನಂದನಾರ್ಹ. ನಿರ್ಮಾಪಕ ಶೈಲೇಂದ್ರ ಬಾಬು ನಿರ್ಮಾಣದ 'ದುಬೈ ಬಾಬು ಚಿತ್ರದಲ್ಲಿ ಖಳನಟನ ಪಾತ್ರ ನಿರ್ವಹಿಸಿರುವ ಬಾಲಿವುಡ್ ನಟ ಆರ್ಯನ್ ವೈದ್ ಕನ್ನಡ ತಿಳಿಯದ ವ್ಯಕ್ತಿ. ಆದರೆ ಈ ಚಿತ್ರದಲ್ಲಿನ ಪಾತ್ರ ಆರ್ಯನ್ ಅವರಿಗೆ ಅತೀ ಪ್ರಿಯವಂತೆ. ನನ್ನ ಪಾತ್ರಕ್ಕೆ ನಾನೇ ಮಾತನಾಡುವುದ್ದಾಗಿ ತಿಳಿಸಿದ ಅವರು ಅಲ್ಪಾವಧಿಯಲ್ಲಿ ಕನ್ನಡ ಕಲಿತು ಆಕಾಶ್ ರೆಕಾರ್ಡಿಂಗ್ ಸ್ಟೂಡಿಯೋದಲ್ಲಿ ಡಬ್ಬಿಂಗ್ ಪೂರ್ಣಗೊಳ್ಳಿಸಿದ್ದಾರೆ ಎಂದು ನಿರ್ದೇಶಕ ನಾಗಣ್ಣ ತಿಳಿಸಿದ್ದಾರೆ.

ಅಪಾರವೆಚ್ಚದಲ್ಲಿ ಮೂಡಿಬಂದಿರುವ 'ದುಬೈ ಬಾಬು ಚಿತ್ರ ದುಬಾರಿಬಾಬು ಎಂದು ಕರೆಯಲ್ಪಡುತ್ತಿದೆ. ಸೂಪರ್‌ಸ್ಟಾರ್ ಉಪೇಂದ್ರ ನಾಯಕನಾಗಿ ಅಭಿನಯಿಸಿರುವ ಈ ಚಿತ್ರದಲ್ಲಿ ನಿಖಿತಾ ಹಾಗೂ ಸಲೋನಿ ಎಂಬ ಬೆಡಗಿಯರು ನಾಯಕಿಯರಾಗಿದ್ದಾರೆ. ಹಲವು ವರ್ಷಗಳ ಕಾಲ ನಟನೆಯಿಂದ ದೂರ ಉಳಿದಿದ್ದ ನಟ ಕುಮಾರ್‌ಗೋವಿಂದ್ 'ದುಬೈಬಾಬು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮರಳಿ ಬಂದಿದ್ದಾರೆ.

ವಿದೇಶದಲ್ಲಲ್ಲದೆ ಸ್ವದೇಶದ ಮುಂಬೈನಲ್ಲೂ ಬಹುತೇಕ ಚಿತ್ರೀಕರಣ ಪೂರೈಸಿರುವ ಈ ಚಿತ್ರಕ್ಕೆ ನಾಗಣ್ಣ ಅವರ ಚಿತ್ರಕತೆ, ನಿರ್ದೇಶನವಿದೆ. ಮುಂಬೈನ ಅನಿಲ್‌ಜವೇರಿ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಮುಸ್ಸಂಜೆಮಾತು ಖ್ಯಾತಿಯ ವಿ.ಶ್ರೀಧರ್ ಅವರ ಸಂಗೀತವಿದೆ. ಗೋವರ್ಧನ್ ಸಂಕಲನ, ಥ್ರಿಲ್ಲರ್‌ಮಂಜು ಸಾಹಸ, ಅಣ್ಣಯ್ಯ ಕಲೆ, ಕೇಶವಾದಿತ್ಯ ಸಂಭಾಷಣೆ, ತ್ರಿಭುವನ್ ನೃತ್ಯ, ಪ್ರಶಾಂತ್ ಸಹನಿರ್ದೇಶನ, ಮುರುಳಿ ನಿರ್ಮಾಣನಿರ್ವಹಣೆಯಿದೆ.ಉಪೇಂದ್ರ, ನಿಖಿತಾ, ಸಲೋನಿ, ಕುಮಾರ್ ಗೋವಿಂದ್, ಆರ್ಯನ್ ವೈದ್, ಸುಂದರರಾಜ್, ರಾಜೇಶ್, ದ್ವಾರಕೀಶ್, ಸೂರ್ಯಪಲ್ಲಕ್ಕಿ, ಎಂ.ಎಸ್.ಉಮೇಶ್ ಚಿತ್ರದ ತಾರಾಬಳಗದಲ್ಲಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಬುದ್ಧಿವಂತ ಯಶಸ್ಸು ದುಬೈ ಬಾಬುಗೆ ಲಾಭ
ದುಬೈ ಬಾಬುನಲ್ಲಿ ಒಂದಾದ ಉಪೇಂದ್ರ,ಗೋವಿಂದ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada