For Quick Alerts
  ALLOW NOTIFICATIONS  
  For Daily Alerts

  ವರನಟ ಡಾ.ರಾಜ್ ಹುಟ್ಟುಹಬ್ಬಕ್ಕೆ ಭರ್ಜರಿ ತಯಾರಿ

  By Rajendra
  |

  ವರನಟ, ಗಾನ ಗಂಧರ್ವ, ನಟ ಸಾರ್ವಭೌಮ, ಕನ್ನಡಿಗರ ಕಣ್ಮಣಿ ಡಾ.ರಾಜ್ ಕುಮಾರ್ ಅವರ 84ನೇ ಹುಟ್ಟುಹಬ್ಬಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ. ಏ.24ರಂದು ರಾಜ್ ಸಮಾಧಿ ಬಳಿ ವಿವಿಧ ಕಾರ್ಯಕ್ರಮಳನ್ನು ಅಖಿಲ ಕರ್ನಾಟಕ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘ ಹಮ್ಮಿಕೊಂಡಿದೆ.

  ಈ ಬಗ್ಗೆ ವಿವರ ನೀಡಿರುವ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು, ಏ.24ರಂದು ಬೆಳಗ್ಗೆ 8ರಿಂದ ಸಂಜೆ 5 ಗಂಟೆಯ ತನಕ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದರು. ಅಂದು ಬೆಳಗ್ಗೆ 10ಕ್ಕೆ ಸಾಹಿತಿಗಳು, ಚಿಂತಕರಿಂದ ರಾಜ್ ಕುಮಾರ್ ಕುರಿತು ಚಿಂತನಗೋಷ್ಠಿ ನಡೆಯಲಿದೆ.

  ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಸೇರಿದಂತೆ ಹಲವು ಗಣ್ಯರು ಭಾಗಿಯಾಗಲಿದ್ದಾರೆ. ರಾಜ್ ಕುಮಾರ್ ಅವರ ಸಮಕಾಲೀನ ಕಲಾವಿದರಿಗೆ ಸನ್ಮಾನ ಮಾಡಲಾಗುತ್ತದೆ. ರಕ್ತದಾನ ಶಿಬಿರಗಳನ್ನೂ ಏರ್ಪಡಿಸಲಾಗಿದೆ ಎಂದು ಸಾ.ರಾ.ಗೋವಿಂದು ತಿಳಿಸಿದರು. (ಒನ್‌ಇಂಡಿಯಾ ಕನ್ನಡ)

  English summary
  Akhila Karnataka Dr.Rajkumar fans association plans to celebrate Kannada matinee idol Dr. Rajkumar's 84th birthday in grand style said the association chief Sa.Ra. Govindu.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X