»   » ಬೆಳ್ಳಿಹೆಜ್ಜೆಯಲ್ಲಿ ಬಬ್ರುವಾಹನ ಖ್ಯಾತಿಯ ಕೆಸಿಎನ್ ಗೌಡ

ಬೆಳ್ಳಿಹೆಜ್ಜೆಯಲ್ಲಿ ಬಬ್ರುವಾಹನ ಖ್ಯಾತಿಯ ಕೆಸಿಎನ್ ಗೌಡ

Posted By:
Subscribe to Filmibeat Kannada
KCN Gowda
ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಕೆಸಿಎನ್ ಗೌಡ. ಸದಭಿರುಚಿಯ ಚಿತ್ರಗಳಿಗೆ ಹೆಸರಾದ ನಿರ್ಮಾಪಕರು ಅವರು. ಕರ್ನಾಟಕ ಚಲನಚಿತ್ರ ಅಕಾಡೆಮಿ ನಡೆಸಿಕೊಡುವ 'ಬೆಳ್ಳಿ ಹೆಜ್ಜೆ' ಕಾರ್ಯಕ್ರಮದಲ್ಲಿ ಶನಿವಾರ(ಮೇ.15) ಕೆಸಿಎನ್ ಗೌಡ ಅವರೊಂದಿಗೆ ಚರ್ಚಿಸಬಹುದು. ಬೆಂಗಳೂರಿನ ಬಾದಾಮಿ ಹೌಸ್ ನಲ್ಲಿ ಕಾರ್ಯಕ್ರಮ ನಡೆಯಲಿದೆ.

ಕೆಸಿಎನ್ ಗೌಡ ಅವರು ಕನ್ನಡ ಚಿತ್ರೋದ್ಯಮದೊಂದಿಗಿನ ತಮ್ಮ ಅನುಭವಗಳನ್ನು ಸಹೃದಯರೊಂದಿಗೆ ಹಂಚಿಕೊಳ್ಳಲಿದ್ದಾರೆ. ಒಂದು ಗಂಟೆ ಕಾಲ ಕೆಸಿಎನ್ ಗೌಡ ಅವರೊಂದಿಗೆ ಹರಟಬಹುದು. ವೃತ್ತಿಯಿಂದ ರೇಷ್ಮೆ ವ್ಯಾಪಾರಿಗಳಾದ ಕೆಸಿಎನ್ ಅವರದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ದಬಳ್ಳಾಪುರ ತಾಲೂಕು.

ಅವರು ನಿರ್ಮಿಸಿದ ಚಿತ್ರಗಳಲ್ಲಿ ಬಬ್ರುವಾಹನ, ಹುಲಿಯ ಹಾಲಿನ ಮೇವು, ಸತ್ಯ ಹರಿಶ್ಚಂದ್ರ ಮುಖ್ಯವಾದವು. ಬೆಂಗಳೂರಿನ ನವರಂಗ್ ಹಾಗೂ ಊರ್ವಶಿ ಚಿತ್ರಮಂದಿರಗಳ ಮಾಲೀಕರು ಕೂಡ. ಕೆಸಿಎನ್ ಗೌಡ ಅವರ ಮಕ್ಕಳಾದ ಕೆಸಿಎನ್ ಚಂದ್ರಶೇಖರ್ ಹಾಗೂ ಕೆಸಿಎನ್ ಮೋಹನ್ ಸಹ ಚಿತ್ರನಿರ್ಮಾಣದಲ್ಲಿ ತೊಡಗಿಕೊಂಡಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada