For Quick Alerts
  ALLOW NOTIFICATIONS  
  For Daily Alerts

  ರಿಯಾಲಿಟಿ ಶೋಗಳತ್ತ ಚಿತ್ತ ಹರಿಸಿದ ಕಿರಣ್ ರಾವ್

  By Rajendra
  |

  ಈಗಾಗಲೆ 'ಧೋಬಿ ಘಾಟ್' ಎಂಬ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸುವ ಮೂಲಕ ಸುದ್ದಿ ಮಾಡಿರುವ ಅಮೀರ್ ಖಾನ್ ಪತ್ನಿ ಕಿರಣ್ ರಾವ್ ಈಗ ಏಕಾಏಕಿ ರಿಯಾಲಿಟಿ ಶೋಗಳ ಕಡೆಗೆ ಚಿತ್ತ ಹರಿಸಿದ್ದಾರೆ. ಹಾಗಂತ ಅವರು ಯಾವುದೇ ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಿಲ್ಲ. ರಿಯಾಲಿಟಿ ಶೋಗಳ ಹಿಂದಿನ ಮರ್ಮವನ್ನು ತೆರೆಗೆ ತರುವ ಸಿದ್ಧತೆಯಲ್ಲಿದ್ದಾರೆ.

  ಅವರ ಈ ಹೊಸ ಚಿತ್ರಕ್ಕೆ ಸ್ಫೂರ್ತಿಯಾದವರು ರಿಯಾಲಿಟಿ ಶೋಗಳ ರಾಣಿ ರಾಖಿ ಸಾವಂತ್! 'ರಾಖಿ ಕಾ ಇನ್ಸಾಫ್' ರಿಯಾಲಿಟಿ ಶೋನಲ್ಲಿ ರಾಖಿ ಸಾವಂತ್ ಸ್ಪರ್ಧಿಯೊಬ್ಬನಿಗೆ ನಾಮರ್ದ ಎಂದು ಜರಿದ ಕಾರಣ ಆತ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದ. ಈ ಘಟನೆಯೇ ಚಿತ್ರವೊಂದನ್ನು ಮಾಡಲು ಪ್ರೇರೇಪಿಸಿತು ಎಂದಿದ್ದಾರೆ ಕಿರಣ್.

  ಮಾನವೀಯ ಸಂಬಂಧಗಳು, ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಸ್ಪರ್ಧಿಗಳ ಮನಸ್ಥಿತಿ, ಅವರ ಭಾವನಾತ್ಮಕ ಸಂಬಂಧಗಳನ್ನು ತೆರೆಗೆ ತರುವ ಪ್ರಯತ್ನವನ್ನು ಅವರು ಮಾಡಲಿದ್ದಾರೆ. ಅಂದಹಾಗೆ 'ಧೋಬಿ ಘಾಟ್' ಚಿತ್ರ ಫೆಬ್ರವರಿ 11ಕ್ಕೆ ತೆರೆಕಾಣುತ್ತಿದೆ. ಆ ಚಿತ್ರ ತೆರೆಕಂಡ ಬಳಿಕ ರಿಯಾಲಿಟಿ ಶೋಗಳ ಕುರಿತ ಚಿತ್ರದ ಕಡೆಗೆ ಕಿರಣ್ ರಾವ್ ಚಿತ್ತ ಹರಿಯಲಿದೆ.

  English summary
  Aamir Khan wife Kiran Rao to make a film on Indian reality shows. She has explore the world of Indian reality shows. The film to show the interpersonal relationships between the participants on these shows.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X