»   » ಚಲನಚಿತ್ರ ನಿರ್ದೇಶಕರ ಸಂಘಕ್ಕೆ ಹೊಸ ಮುಖಗಳು

ಚಲನಚಿತ್ರ ನಿರ್ದೇಶಕರ ಸಂಘಕ್ಕೆ ಹೊಸ ಮುಖಗಳು

Posted By:
Subscribe to Filmibeat Kannada

ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘಕ್ಕೆ ಹೊಸ ನೀರು ಹರಿದುಬಂದಿದೆ. ಭಾನುವಾರ ನಡೆದ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ವಾರ್ಷಿಕ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎಂ ಎಸ್ ರಮೇಶ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಂಭಾಷಣೆಕಾರ ಹಾಗೂ ಚಿತ್ರ ನಿರ್ದೇಶಕರಾಗಿ ಎಂ ಎಸ್ ರಮೇಶ್ ಜನಪ್ರಿಯರಾಗಿದ್ದಾರೆ. ನಿರ್ದೇಶಕರ ಸಂಘಕ್ಕೆ ಆಯ್ಕೆಯಾಗುತ್ತಿರುವ ಅತಿಕಿರಿಯ ವಯಸ್ಸಿನ ಅಧ್ಯಕ್ಷ ಎಂಬ ಕೀರ್ತಿಗೆ ರಮೇಶ್ ಪಾತ್ರರಾಗಿದ್ದಾರೆ. ಹೊಸ ತಲೆಮಾರಿನ ಯುವ ನಿರ್ದೇಶಕರ ಮುಂದೆ ಹಿರಿಯ ತಲೆಗಳು ಪಕ್ಕಕ್ಕೆ ಸರಿದಂತಾಗಿದೆ.

ನೂತನ ಅಧ್ಯಕ್ಷರ ಜೊತೆಗೆ ಉಪಾಧ್ಯಕ್ಷರಾಗಿ ಹ್ಯಾಟ್ರಿಕ್ ನಿರ್ದೇಶಕ ಪ್ರೇಮ್ ಮತ್ತು ಎಸ್ ಮಹೇಂದರ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಗಳಾಗಿ ನಾಗೇಂದ್ರ ಪ್ರಸಾದ್ ಮತ್ತು ಕೇಸರಿ ಹರವು ಹಾಗೂ ಖಜಾಂಚಿಯಾಗಿ ಯೋಗೀಶ್ ಹುಣಸೂರು ಆಯ್ಕೆಯಾಗಿದ್ದಾರೆ. ಒಟ್ಟಿನಲ್ಲಿ ನಿರ್ದೇಶಕರ ಸಂಘಕ್ಕೆ ಹೊಸ ಕಳೆ ಬಂದಂತಾಗಿದೆ.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X