Don't Miss!
- Sports
ಗೆದ್ದ ಜಯ್ ಶಾ ಹಠ, ಪಾಕ್ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಏ.30ಕ್ಕೆ ಎಂ ಎಸ್ ಸತ್ಯು 'ಇಜ್ಜೋಡು' ತೆರೆಗೆ
ಸುದೀರ್ಘ ಸಮಯದ ಬಳಿಕ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಎಂ ಎಸ್ ಸತ್ಯು ನಿರ್ದೇಶನದ 'ಇಜ್ಜೋಡು' ಚಿತ್ರ ಏಪ್ರಿಲ್ 30ರಂದು ತೆರೆಕಾಣಲಿದೆ. ರಿಲಯನ್ಸ್ ಬಿಗ್ ಫಿಕ್ಚರ್ಚ್ ನಿರ್ಮಾಣದಲ್ಲಿ ಬಂದ ಚೊಚ್ಚಲ ಕನ್ನಡ ಚಿತ್ರವಿದು. ಈಗಾಗಲೆ ದೇಶದ ನಾಲ್ಕು ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ 'ಇಜ್ಜೋಡು' ಪ್ರದರ್ಶನ ಕಂಡಿದೆ.
ಸಮಾಜದಲ್ಲಿನ ಕಠೋರ ಆಚಾರ ವಿಚಾರಗಳನ್ನು ಆಧರಿಸಿದ ಕತೆಗಳನ್ನು ನಿರ್ವಹಿಸುವಲ್ಲಿ ಎಂ ಎಸ್ ಸತ್ಯು ಸಿದ್ಧಹಸ್ತರು. ಅವರಲ್ಲಿನ ಸೂಕ್ಷ್ಮ ಸಂವೇದನೆ 'ಇಜ್ಜೋಡು' ಚಿತ್ರದಲ್ಲಿ ಮರುಕಳುಹಿಸಿದೆ.ಕರ್ನಾಟಕದಲ್ಲಿ ಆಚರಣೆಯಲ್ಲಿರುವ 'ಬಸವಿ'(ದೇವದಾಸಿ) ಪದ್ದ್ಧತಿಯಲ್ಲಿ ಬಸವಿಯರು ಅಪಮೌಲ್ಯಕ್ಕೊಳಗಾಗಿ ವೇಶ್ಯೆಯರಾಗಿ ಬದಲಾಗುತ್ತಿರುವ ಕಥಾಹಂದರವನ್ನು 'ಇಜ್ಜೋಡು' ಚಿತ್ರ ಹೊಂದಿದೆ.
ಬಳ್ಳಾರಿ ಜಿಲ್ಲೆಯೊಂದರಲ್ಲಿ 1000 ಬಸವಿಯರನ್ನು ಬಲವಂತವಾಗಿ ವೇಶ್ಯೆಯರನ್ನಾಗಿಸುತ್ತಿರುವ ಅಂಶ ಎರಡು ವರ್ಷಗಳ ಹಿಂದೆ ಬೆಳಕು ಕಂಡಿತು. ಸರ್ಕಾರೇತರ ಸಂಸ್ಥೆಯೊಂದು ನಿರ್ವಹಿಸಿದ ಸಮೀಕ್ಷೆಯಲ್ಲಿ ಈ ಅಂಶ ಬಹಿರಂಗಗೊಂಡಿತು. ನನಗೆ ದೊರೆತ ಈ ಮಾಹಿತಿ 'ಇಜ್ಜೋಡು' ಚಿತ್ರವನ್ನು ನಿರ್ದೇಶಿಸುವಂತೆ ಮಾಡಿತು ಎಂದು ಚಿತ್ರ ಪ್ರದರ್ಶನದ ಬಳಿಕ ಸತ್ಯ್ಯು ತಿಳಿಸಿದ್ದಾರೆ.
ಈ ಚಿತ್ರದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಮೀರಾ ಜಾಸ್ಮಿನ್ ಹಾಗೂ ಅನಿರುದ್ಧ ಮುಖ್ಯ ಪಾತ್ರಗಳಲ್ಲಿದ್ದಾರೆ. 'ಚೆನ್ನಿ'ಯಾಗಿ ಮೀರಾ ಜಾಸ್ಮಿನ್ ಕಾಣಿಸಲಿದ್ದಾರೆ. ಮಣಿಕಾಂತ್ ಕದ್ರಿ ಅವರ ಸಂಗೀತ, ಎಂ ಎಸ್ ಸತ್ಯು ಜೊತೆಗೂಡಿ ಜಿ ಎಸ್ ಭಾಸ್ಕರ್ ಅವರು ಇಜ್ಜೋಡಿಗೆ ಕ್ಯಾಮೆರಾ ಹಿಡಿದ್ದಾರೆ.
ಚಿತ್ರದ ತಾರಾಗಣದಲ್ಲಿ ಮೀರಾ ಜಾಸ್ಮಿನ್, ಅನಿರುದ್ಧ್, ಶ್ರೀವತ್ಸ, ನಾಗಕಿರಣ್, ಅರುಂಧತಿ ಸಹ ನಟಿಸಿದ್ದಾರೆ. ಬಸವಿ ಪದ್ಧತಿ ಬಗ್ಗೆ ನೇರವಾಗಿ ಪ್ರಸ್ತಾಪಿಸದೆ ನಂಬಿಕೆ ಮತ್ತು ಅಪನಂಬಿಕೆ ಕುರಿತ ಚರ್ಚೆಗೆ ಕಲಾತ್ಮಕ ರೀತಿಯಲ್ಲಿ ಕತೆಗೆ ತಿರುವು ನೀಡಿದ್ದಾರೆ ಸತ್ಯು.