»   » ಹ್ಯಾಟ್ರಿಕ್ ಹೀರೋ ಶಿವಣ್ಣನಿಗೆ ಭರ್ಜರಿ ಸಂಭಾವನೆ

ಹ್ಯಾಟ್ರಿಕ್ ಹೀರೋ ಶಿವಣ್ಣನಿಗೆ ಭರ್ಜರಿ ಸಂಭಾವನೆ

Posted By:
Subscribe to Filmibeat Kannada

ಮೈಲಾರಿ ಚಿತ್ರದ ಪಾತ್ರಕ್ಕಾಗಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಭರ್ಜರಿ ಸಂಭಾವನೆ ಸಿಕ್ಕಿದೆ. ಮೂಲಗಳ ಪ್ರಕಾರ ಶಿವಣ್ಣನಿಗೆ ನಿರ್ದೇಶಕ ಆರ್ ಚಂದ್ರು ರು.91 ಲಕ್ಷಗಳ ಬರೋಬ್ಬರಿ ಸಂಭಾವನೆ ಕೊಟ್ಟಿದ್ದಾರೆ. 1 ಮತ್ತು 9 ಸಂಖ್ಯೆಗಳು ಶಿವಣ್ಣನ ಲಕ್ಕಿ ನಂಬರ್ ಸಹ ಹೌದಂತೆ. ಅದಕ್ಕಾಗಿ ಶಿವಣ್ಣ 91 ಲಕ್ಷ ಕೊಡುವಂತೆ ನಿರ್ಮಾಪಕರಲ್ಲಿ ಬೇಡಿಕೆಯಿಟ್ಟಿದ್ದರಂತೆ.

ಈ ಹಿಂದೆ ಶಿವಣ್ಣನ ಜೊತೆ ಯುವರಾಜ, ಸಂತ ಮತ್ತು ಶ್ರೀರಾಮ್ ಚಿತ್ರಗಳನ್ನು ನಿರ್ಮಾಪಕರಾದ ಕನಕಪುರ ಶ್ರೀನಿವಾಸ್ ಹಾಗೂ ಕೆ ಪಿ ಶ್ರೀಕಾಂತ್ ನಿರ್ಮಿಸಿದ್ದರು. ಇದೀಗ ಇವರಿಬ್ಬರೂ ಮೈಲಾರಿ ಚಿತ್ರವನ್ನು ನಿರ್ಮಿಸುತ್ತಿರುವುದು ಗೊತ್ತೆ ಇದೆ. ಸಂಭಾವನೆ ವಿಚಾರ ನಿಜವೇ ಎಂದು ನಿರ್ಮಾಪಕ ಶ್ರೀಕಾಂತ್ ಅವರನ್ನು ಪ್ರಶ್ನಿಸಿದರೆ....ಎಲ್ಲಾದರೂ ಉಂಟಾ ಗುರು ಎಂದು ಪ್ಲೇಟು ಬದಲಾಯಿಸುತ್ತಾರೆ.

ಶಿವಣ್ಣನ ಬೆಲೆ ಏನು ಅಂತಾ ಅವರಿಗೆ ಗೊತ್ತಿಲ್ಲವೆ? ಅವರು ಯಾವತ್ತೂ ದುಡ್ಡಿನ ಹಿಂದೆ ಬಿದ್ದವರಲ್ಲ.ಇದೆಲ್ಲಾ ಸುಮ್ಮನೆ ಯಾರೋ ಕಿವಿಯಲ್ಲಿ ಹೂ ಇಡುವ ಪ್ರಯತ್ನ ಮಾಡಿದ್ದಾರೆ. ಇದೆಲ್ಲಾ ಕಟ್ಟುಕತೆ ಅಷ್ಟೆಯಾ ಎಂದು ರಾಗ ಎಳೆಯುತ್ತಾರೆ ಹೆಸರು ಹೇಳಲು ಇಚ್ಛಿಸದ ಗಾಂಧಿನಗರದ ಪಂಡಿತರೊಬ್ಬರು.

''ನನ್ನ ಹಾಗೂ ನಮ್ಮ ಕುಟುಂಬದವರ ಅದೃಷ್ಟ ಸಂಖ್ಯೆ 9, ನನ್ನ ಹುಟ್ಟುಹಬ್ಬದ ಸಂಖ್ಯೆಗಳನ್ನು ಕೂಡಿದರೆ ಸಂಖ್ಯೆ 1 ಬರುತ್ತದೆ. ಆದರೆ ಈ ಸಂಖ್ಯೆಗಳಿಗೂ ನನ್ನ ಸಂಭಾವನೆಗೂ ತಾಳೆ ಹಾಕುವುದು ಸರಿಯಲ್ಲ. ಇದೊಂದು ಕೇವಲ ವದಂತಿ ಅಷ್ಟೆ ಎಂದು ಶಿವಣ್ಣ ಸ್ಪಷ್ಟಪಡಿಸಿದ್ದಾರೆ.

ಚಿತ್ರೋದ್ಯಮದಲ್ಲಿ ಶಿವಣ್ಣ ತನ್ನದೇ ಆದ ಶಿಸ್ತನ್ನು ರೂಢಿಸಿಕೊಂಡ ನಟ. ವಿವಾದಗಳಲ್ಲಿ ಸಿಕ್ಕಿಕೊಂಡವರಲ್ಲ. ಸಂಭಾವನೆ ಇಷ್ಟೇ ಕೊಡಬೇಕು ಎಂದು ಹಠಹಿಡಿದು ಕೂತವರಲ್ಲ. ಚಿತ್ರೀಕರಣಕ್ಕೆ ತಡವಾಗಿ ಬರುವ ಜಾಯಮಾನ ಅವರದಲ್ಲ. ಶಿವಣ್ಣ ರು.91 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದಾರೆ ಎಂದರೆ ಯಾರಾದರೂ ನಗ್ತಾರೆ ಅಷ್ಟೆ! ಎನ್ನುತ್ತದೆ ಗಾಂಧಿನಗರ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada