»   »  ವಿಜಯ್ 'ದೇವ್ರು' ಇದು ಯಾವ ಚಿತ್ರದ ರೀಮೇಕ್?

ವಿಜಯ್ 'ದೇವ್ರು' ಇದು ಯಾವ ಚಿತ್ರದ ರೀಮೇಕ್?

Subscribe to Filmibeat Kannada
Thalainagaram to be remade as devru in Kannada
ವಿಜಯ್ ನಾಯಕ ನಟನಾಗಿ ಅಭಿನಯಿಸುತ್ತಿರುವ ಹೊಸ ಚಿತ್ರ'ದೇವ್ರು'. ರಾಕ್ ಲೈನ್ ಸ್ಟುಡಿಯೋದಲ್ಲಿ ದೇವ್ರು ಚಿತ್ರದ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಈ ಚಿತ್ರವೂ ರೀಮೇಕಾ ಎಂದು ಕೇಳಿದರೆ ಚಿತ್ರದ ನಿರ್ದೇಶಕ ಸಾಧುಕೋಕಿಲ ಹೇಳಿದ್ದಿಷ್ಟು.

''ಇದನ್ನು ತಮಿಳಿನ 'ಥಾಲೈನಗರಂ' ಚಿತ್ರದ ರೀಮೇಕ್ ಅಂತಾನೇ ಕೈಗೆತ್ತಿಕೊಂಡೆವು. ಆ ಚಿತ್ರದಲ್ಲಿನ ಕೆಲ ದೃಶ್ಯಗಳು ಬಹುತೇಕ ಚಿತ್ರಗಳಲ್ಲಿ ಈಗಾಗಲೇ ಬಂದಿವೆ. ಮತ್ತೆ ಅದೇ ದೃಶ್ಯಗಳನ್ನು ತೆರೆಗೆ ತಂದರೆ ಚೆನ್ನಾಗಿರಲ್ಲ ಎಂದು ಕತೆಯನ್ನು ಕೊಂಚ ಬದಲಾಯಿಸಿದ್ದೇವೆ. ಚಿತ್ರದ ಮೊದಲರ್ಧದಲ್ಲಿ ಮೂಲ ಕತೆಯನ್ನು ಉಳಿಸಿಕೊಂಡಿದ್ದೇವೆ. ಇನ್ನರ್ಧ ಕತೆಯನ್ನು ನಾವೇ ಹೆಣೆದಿದ್ದೇವೆ'' ಎನ್ನುತ್ತಾರೆ ದೇವ್ರು ನಿರ್ದೇಶಕ ಸಾಧುಕೋಕಿಲ.

''ಮುವ್ವತ್ತೆದು ದಿನಗಳ ಚಿತ್ರೀಕರಣ ಬಹುತೇಕ ಮುಗಿದಿದೆ. ಚಿತ್ರ ಆಗಸ್ಟ್ ನಲ್ಲಿ ತೆರೆಗೆ ತರಲು ಉದ್ದೇಶಿಸಲಾಗಿದೆ. ನಮ್ಮ ದೇವ್ರು ಜನರ ಮನಸ್ಸು ಗೆದ್ದೇ ಗೆಲ್ಲುತ್ತಾನೆ. ಇದು ನಮ್ಮ ಬ್ಯಾನರ್ ನ 24 ನೇ ಚಿತ್ರ. ವಿಜಯ್ ಕಾಂಬಿನೇಷನಲ್ಲಿ ಎರಡನೇ ಚಿತ್ರ. ಇದರಲ್ಲಿ ನಾನೂ ಸಹ ಸಣ್ಣ ಪಾತ್ರವೊಂದನ್ನು ನಿರ್ವಹಿಸಿದ್ದೇನೆ'' ಎನ್ನುತ್ತಾರೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್.

(ದಟ್ಸ್ ಕನ್ನಡ ಚಿತ್ರವಾರ್ತೆ)

ವಿಜಯ್ ಮತ್ತು ಶುಭಾ ನಡುವಿನ ಗಾಸಿಪ್ ನಿಜವೇ?
ಕೈದಿಗಳ ಹೃದಯ ಕದ್ದ ದುನಿಯಾ ವಿಜಯ್
ಯೋಗೀಶನಿಗೆ ವಿಜಯ್ ಗೂಸಾ ಫ್ಯಾಶ್ ಬ್ಲಾಕ್
ಏನಿಲ್ಲ ಏನಿಲ್ಲ..ನನ್ನ ವಿಜಿ ನಡುವೆ ಅಂಥದ್ದೇನಿಲ್ಲ : ಶುಭಾ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada