»   » ಪ್ರೀತಿಯಲ್ಲಿ ಅತ್ಯಂತ ಮಹತ್ವವಾದ್ದು ತಾಯಿಯ ಪ್ರೀತಿ,

ಪ್ರೀತಿಯಲ್ಲಿ ಅತ್ಯಂತ ಮಹತ್ವವಾದ್ದು ತಾಯಿಯ ಪ್ರೀತಿ,

Posted By: Super
Subscribe to Filmibeat Kannada

ಗೊತ್ತು ಗುರಿ ಎಂಬುದೇ ತಮಗಿಲ್ಲ ಎಂದೂ, ಈವರೆಗೆ ಏನೆಲ್ಲಾ ಆಗಿದೆಯೋ ಅದೆಲ್ಲಾ ತಮ್ಮ ಪುರೋಭಿವೃದ್ಧಿಯ ಮುಂದಿನ ಮೆಟ್ಟಿಲು... ಇತ್ಯಾದಿ...ಇತ್ಯಾದಿ.... ಫಿಲಾಸಫಿಯ ಮಾತನಾಡಿದ ಉಪ್ಪಿ ಈಗ 100 ಪರ್ಸೆಂಟ್‌ ತತ್ವಜ್ಞಾನಿ ಆಗಿಹೋಗಿದ್ದಾರೆ.

ಅವರು ಇತ್ತೀಚೆಗೆ ಆಡುತ್ತಿರುವ ಮಾತುಗಳು, ಉಪ್ಪಿ ತತ್ವಜ್ಞಾನದ ಹಾದಿ ತುಳಿಯುತ್ತಿದ್ದಾರೆ ಎಂಬುದಕ್ಕೆ ಸಾಕಷ್ಟು ಪುರಾವೆ ಒದಗಿಸುತ್ತದೆ. ಪ್ರಿತ್ಸೇ...ಪ್ರಿತ್ಸೇ...ಪ್ರಿತ್ಸೇ.... ಕಣ್ಣು ಮುಚ್ಚಿ ಪ್ರಿತ್ಸೆ.... ಪ್ರೇಮಿಗಾಗಿ ಪ್ರಿತ್ಸೇ.... ನನಗಾಗಿ ಪ್ರೀತ್ಸೆ..... ಮನಸು ಬಿಚ್ಚಿ ಪ್ರೀತ್ಸೆ.... ಕಿರಣಾ ಕಿರಣಾ...ನನ್ನ ಬಾಳ ಕಿರಣಾ..... ಎಂದು ಕೇಳುಗರ ಕರ್ಣ ಕಿತ್ತು ಹೋಗುವಂತೆ ಅರುಚಿದ ಉಪ್ಪಿ ಈಗ ಪ್ರೀತಿಯ ನಿಜವಾದ ಅರ್ಥ ಅರಿತಿದ್ದಾರೆ.

ಪ್ರೀತಿಯಲ್ಲಿ ಅತ್ಯಂತ ಮಹತ್ವವಾದ್ದು ತಾಯಿಯ ಪ್ರೀತಿ, ಆದರೆ ತಾಯಿ ತನ್ನ ಮಗನನ್ನು ಮಾತ್ರ ಪ್ರೀತಿಸುತ್ತಾಳೆ. ಆದರೆ ಮನುಷ್ಯ ಮನುಷ್ಯನ ಪ್ರೀತಿಸುತ್ತಾನೆ. ಆ ಪ್ರೀತಿಯ ಮುಂದೆ ಮತ್ತಾವ ಪ್ರೀತಿಯೂ ಬೇಡ.... ಎಂಬಿತ್ಯಾದಿ ಸ್ಟೇಟ್‌ಮೆಂಟ್‌ ಕೊಡುತ್ತಿದ್ದಾರೆ.

ನನಗಾಗಿ ಪ್ರೀತ್ಸೆ... ನಿನಗಾಗಿ ಪ್ರೀತ್ಸೆ ಎಂದೆಲ್ಲ ಹೇಳಿದ ಉಪ್ಪಿಗೆ ಮನುಷ್ಯ ಮನುಷ್ಯರ ಪ್ರೀತಿ...ತಾಯಿಪ್ರೀತಿಗಿಂತಲೂ ಮಿಗಿಲಾಗಿ ಕಂಡಿದೆ. ತಾಯಿ ಪ್ರೀತಿಯ ಮಹತ್ವದ ಅರಿವೂ ಮೂಡಿದೆ. ಉಪೇಂದ್ರ ಚಿತ್ರದಲ್ಲಿ ಕಾವಿ ತೊಟ್ಟಿದ್ದ ಉಪ್ಪಿ ನಿಜವಾಗಿಯೂ ಕಾವಿ ಧರಿಸಿ, ಕಮಂಡಲ ಹಿಡಿದು ವಾನಪ್ರಸ್ಥಾಶ್ರಮಕ್ಕೆ ಹೋಗುವ ಕಾಲ ದೂರವೇನಿಲ್ಲ ಎನ್ನಿಸುತ್ತದೆ. ನಿಮಗೇನಾದರೂ ಈ ಬಗ್ಗೆ ವಿವರ ಸಿಕ್ಕರೆ ನಮಗೆ ತಿಳಿಸುತ್ತೀರಿ ತಾನೆ?

English summary
upendra : a full time philosopher in the making

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada