»   »  ಎರಡನೇ ಹಂತದ ಚಿತ್ರೀಕರಣಕ್ಕೆ ಸಜ್ಜಾದ ಆಪ್ತರಕ್ಷಕ

ಎರಡನೇ ಹಂತದ ಚಿತ್ರೀಕರಣಕ್ಕೆ ಸಜ್ಜಾದ ಆಪ್ತರಕ್ಷಕ

Subscribe to Filmibeat Kannada
ಸಾಹಸ ಸಿಂಹ ವಿಷ್ಣುವರ್ಧನ್ ಅವರ ಬಹುನಿರೀಕ್ಷಿತ 'ಆಪ್ತರಕ್ಷಕ' ಚಿತ್ರ 22 ದಿನಗಳ ಮೊದಲ ಹಂತದಚಿತ್ರೀಕರಣವನ್ನು ಮುಗಿಸಿಕೊಂಡಿದೆ. ಶೀಘ್ರದಲ್ಲೇ ಎರಡನೇ ಹಂತದ ಚಿತ್ರೀಕರಣ ಆರಂಭವಾಗಲಿದೆ ಎಂದು ಚಿತ್ರದ ನಿರ್ಮಾಪಕ ಕೃಷ್ಣಕುಮಾರ್ ತಿಳಿಸಿದ್ದಾರೆ. 'ಆಪ್ತಮಿತ್ರ' ಮುಂದುವರಿದ ಭಾಗ ಆಪ್ತ ರಕ್ಷಕ ಚಿತ್ರ ಎಂಬುದು ಗೊತ್ತೇ ಇದೆ.

ಡಾ.ವಿಷ್ಣುವರ್ಧನ್, ಸಂಧ್ಯಾ, ಭಾವನಾ, ಲಕ್ಷ್ಮಿ ಗೋಪಾಲ ಸ್ವಾಮಿ, ಶ್ರೀನಿವಾಸ ಮೂರ್ತಿ, ಅವಿನಾಶ್, ರಮೇಶ್ ಭಟ್ ಮುಂತಾದ ನಟರು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ತಮಿಳುನಾಡಿನ ಪಳನಿಯ ದೊಡ್ಡ ಬಂಗಲೆ ಮತ್ತು ಸುತ್ತಮುತ್ತಲ ಸುಂದರ ತಾಣಗಳಲ್ಲಿ ಆಪ್ತರಕ್ಷಕನನ್ನು ಚಿತ್ರೀಕರಿಸಿಕೊಳ್ಳಲಾಗಿದೆ. ಈ ಚಿತ್ರಕ್ಕೆ ಕತೆ, ಚಿತ್ರಕತೆ ಮತ್ತು ನಿರ್ದೇಶನ ಪಿ.ವಾಸು , ಸಂಗೀತ ಗುರುಕಿರಣ್.

ಇನ್ನೂ ಎರಡು ಹಂತಗಳ ಚಿತ್ರೀಕರಣ ಆಪ್ತ ರಕ್ಷನಿಗೆ ಬಾಕಿ ಇದೆ. ಏಪ್ರಿಲ್ 15 ರಿಂದ ಎರಡನೇ ಹಂತದ ಚಿತ್ರೀಕರಣ ಆರಂಭವಾಗಲಿದ್ದು ಮೂರನೇ ಹಂತದ ಚಿತ್ರೀಕರಣ ಜೂನ್ ತಿಂಗಳಿಂದ ಆರಂಭವಾಗಲಿದೆ ಎಂದು ನಿರ್ಮಾಪಕರು ವಿವರ ನೀಡಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಆಪ್ತರಕ್ಷಕದ ಸ್ನೇಹಾ ಸ್ಥಾನಕ್ಕೆ ಭಾವನಾ ಆಗಮನ
ಆಪ್ತರಕ್ಷಕ ವಿಷ್ಣುವರ್ಧನ್ ಗೆ ಜತೆಯಾದ ನಿಖಿತಾ
ನಿಲ್ಲದ ಸಿಂಹ ಘರ್ಜನೆ; 3 ರೀಮೇಕ್ ಗಳಲ್ಲಿ ವಿಷ್ಣು
ವಿಷ್ಣುವರ್ಧನ್ ಅವರ 201ನೇ ಚಿತ್ರ ದೊಡ್ಮನುಷ್ಯ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada