»   »  ಇದು ಸಂಪೂರ್ಣ ಗ್ರಾಮೀಣ ಹಿನ್ನೆಲೆ ಚಿತ್ರ: ಶಿವಣ್ಣ

ಇದು ಸಂಪೂರ್ಣ ಗ್ರಾಮೀಣ ಹಿನ್ನೆಲೆ ಚಿತ್ರ: ಶಿವಣ್ಣ

Subscribe to Filmibeat Kannada

ಇಂದು ಕನ್ನಡದಲ್ಲಿ ಬಿಡುಗಡೆಯಾಗುತ್ತಿರುವ ಬಹಳಷ್ಟು ಚಿತ್ರಗಳು ಭೂಗತ ಜಗತ್ತು, ನಗರ ಜೀವನದ ಕಥಾ ಹಂದರದ್ದಾಗಿವೆ. ಯುವ ನಟರಂತೂ ಹೆಚ್ಚಾಗಿ ಮಚ್ಚು, ಲಾಂಗಿನ ಕತೆಗಳಿಗೆ ಸೀಮಿತವಾಗುತ್ತಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಗ್ರಾಮೀಣ ನೇಪಥ್ಯದ ಕತೆಯೊಂದನ್ನು ಕೈಗೆತ್ತಿಕೊಂಡಿದ್ದೇನೆ ಎನ್ನುತ್ತಾರೆ ನಿರ್ದೇಶಕ ಸಾಯಿ ಪ್ರಕಾಶ್.

ಹೌದು ಅವರು ಮಾತನಾಡುತ್ತಿರುವು ಶಿವರಾಜ್ ಕುಮಾರ್ ನಾಯಕ ನಟನಾಗಿ ಅಭಿನಯಿಸುತ್ತಿರುವ 'ಭಾಗ್ಯದ ಬಳೆಗಾರ' ಚಿತ್ರದ ಬಗ್ಗೆ. ಚಿತ್ರವನ್ನು ಸಂಪೂರ್ಣವಾಗಿ ಹಳ್ಳಿಯಲ್ಲೇ ಚಿತ್ರೀಕರಿಸಲಾಗಿದೆ. ಹಳ್ಳಿಗರ ಸರಳ ಜೀವನ, ಸಂಪದ್ಭರಿತ ಬದುಕನ್ನು ನಮ್ಮ ಚಿತ್ರದ ಜೀವಾಳ ಎನ್ನುತ್ತಾರೆ ಸಾಯಿ ಪ್ರಕಾಶ್. ಬಳೆಗಾರನ ಬಹುತೇಕ ಭಾಗವನ್ನು ಚನ್ನಪಟ್ಟಣದ ಹಳ್ಳಿಯೊಂದರಲ್ಲಿ ಚಿತ್ರೀಕರಸಲಾಗಿದೆ.

ಚಿತ್ರದ ನಾಯಕ ಶಿವರಾಜ್ ಕುಮಾರ್ ಮಾತನಾಡುತ್ತಾ, ನಾನು ಬಹಳಷ್ಟು ಗ್ರಾಮೀಣ ಹಿನ್ನೆಲೆಯುಳ್ಳ ಚಿತ್ರಗಳಲ್ಲಿ ನಟಿಸಿದ್ದೇನೆ.ಆದರೆ ಬಳೆಗಾರ ಒಂದು ವಿಭಿನ್ನ ಚಿತ್ರ. ಎಲ್ಲ ವ್ಯಾಪಾರಿ ನೆಲೆಗಟ್ಟುಗಳನ್ನು ಮೀರಿದ ಚಿತ್ರ. ಬಳೆ ಮಾರುವ ಚನ್ನಯ್ಯನ ಪಾತ್ರದಲ್ಲಿ ಕಾಣಿಸುತ್ತೇನೆ ಎಂದರು. ನವ್ಯಾ ನಾಯರ್ ಮಾತನಾಡುತ್ತಾ, ಸಂಪೂರ್ಣ ಗ್ರಾಮೀಣ ಹಿನ್ನೆಲೆಯ ಚಿತ್ರ ಇದಾಗಿದ್ದು. ನಾನು ಚೆಲುವಿಯಾಗಿ ಚಿತ್ರದಲ್ಲಿ ಕಾಣಿಸುತ್ತೇನೆ. ಚಿತ್ರಕತೆ ಕೇಳಿದ ತಕ್ಷಣ ಹಿಂದೆ ಮುಂದೆ ಆಲೋಚಿಸದೆ ಒಪ್ಪಿಕೊಂಡೆ ಎಂದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಸಕಲ ಕಲಾ ವಲ್ಲಭ ಈ ಭಾಗ್ಯದ ಬಳೆಗಾರ
ಗೆಜ್ಜೆ ಹಾಡಿಗೆ ಹೆಜ್ಜೆ ಹಾಕಿದ ಸುಧಾರಾಣಿ, ಅನು
ಕನ್ನಡಕ್ಕೆ ಶೂರ್ಪನಖಿಯಾದ ಪ್ರಿಯಾಮಣಿ
ಶಿವಣ್ಣನಿಗೆ ಜೋಡಿಯಾಗಿ ನವ್ಯಾ ನಾಯರ್!

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada