»   » ಕ್ರೇಜಿಸ್ಟಾರ್ ರವಿಚಂದ್ರನ್ ಈಗ ಪರಮಶಿವ

ಕ್ರೇಜಿಸ್ಟಾರ್ ರವಿಚಂದ್ರನ್ ಈಗ ಪರಮಶಿವ

Posted By:
Subscribe to Filmibeat Kannada

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮತ್ತೊಂದು ಚಿತ್ರ ಪರಮಶಿವ ಚಿತ್ರೀಕರಣ ಆರಂಭವಾಗಿದೆ. ಅಣಜಿ ನಾಗರಾಜ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಮಹೇಶ್ ಬಾಬು ಆಕ್ಷನ್, ಕಟ್ ಹೇಳುತ್ತಿದ್ದಾರೆ. ಬೆಂಗಳೂರಿನಲ್ಲಿ ಐದುದಿನಗಳ ಕಾಲ ಚಿತ್ರೀಕರಣ ನಡೆದಿದೆ.

ಈ ಚಿತ್ರದಲ್ಲಿ ಕ್ರೇಜಿಸ್ಟಾರ್‌ಗೆ ಇಬ್ಬರು ತಮ್ಮಂದಿರು. ಒಬ್ಬ ತಮ್ಮನಾಗಿ ಯಶಸ್ ಅವರನ್ನು ಆಯ್ಕೆ ಮಾಡಲಾಗಿದೆ. ಮತ್ತೊಬ್ಬ ತಮ್ಮನಿಗಾಗಿ ಹುಡುಕಾಟ ನಡೆದಿದೆ. ಚಿತ್ರದ ನಾಯಕಿಯ ಆಯ್ಕೆ ಇನ್ನಷ್ಟೆ ನಡೆಯಬೇಕು. ಇನ್ನೊಂದು ವಾರದಲ್ಲಿ ನಾಯಕಿ ಆಯ್ಕೆ ನಡೆಯಲಿದೆ ಎಂದು ಅಣಜಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

'ಪರಮಶಿವ' ಚಿತ್ರಕ್ಕೆ ಹರಿಕೃಷ್ಣ ಅವರ ಸಂಗೀತವಿದೆ. ಇದೊಂದು ಮನರಂಜನಾತ್ಮಕ ಮತ್ತು ಸೆಂಟಿಮೆಂಟ್ ಪ್ರಧಾನ ಚಿತ್ರವಾಗಿದೆ. ಚಿತ್ರ ನಿರ್ಮಾಣದ ಜೊತೆ ಛಾಯಾಗ್ರಹಣದ ಜವಾಬ್ದಾರಿಯನ್ನು ಅಣಜಿ ಹೊತ್ತಿದ್ದಾರೆ. ರವಿ ಅವರ ಮಹತ್ವಾಕಾಂಕ್ಷಿ ಚಿತ್ರ ಮಂಜಿನ ಹನಿಗೂ ಮುನ್ನ ಈ ಚಿತ್ರ ಸೆಟ್ಟೇರಿರುವುದು ವಿಶೇಷ. (ದಟ್ಸ್‌ಕನ್ನಡ ಸಿನಿವಾರ್ತೆ)

English summary
Crazy Star Ravichandran lead movie Paramashiva brisk progress in Bangalore. The movie is being produced by Anaji Nagaraj and directed by Mahesh Babu. The heroine has not been finalized yet, but Yashas has been chosen to play the role of Ravichandran’s brother in the film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada