»   » ಆನೆ ಮರಿ ಮಾದೇಶನ ದತ್ತು ಪಡೆದ ದರ್ಶನ್

ಆನೆ ಮರಿ ಮಾದೇಶನ ದತ್ತು ಪಡೆದ ದರ್ಶನ್

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಾಣಿ ಪ್ರಿಯ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಇತ್ತೀಚೆಗೆ ಅವರು ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ಭೇಟಿ ನೀಡಿದ್ದರು. ಪ್ರಾಣಿಗಳನ್ನು ದತ್ತು ಸ್ವೀಕರಿಸುವ ಯೋಜನೆಯಡಿ ಅವರು ಆನೆ ಮರಿಯೊಂದನ್ನು ಒಂದು ವರ್ಷದ ಮಟ್ಟಿಗೆ ದತ್ತು ಪಡೆದಿದ್ದಾರೆ.

ದರ್ಶನ್ ದತ್ತು ಪಡೆದಿರುವ ಆನೆ ಮರಿ ಹೆಸರು ಮಾದೇಶ. ಇದಕ್ಕೆ ಎರಡುವರೆ ವರ್ಷ ವಯಸ್ಸು. ರು.35 ಸಾವಿರ ಪಾವತಿಸಿ ಮಾದೇಶನನ್ನು ದತ್ತು ಸ್ವೀಕರಿಸಿರುವ ದರ್ಶನ್ ಪ್ರಾಣಿಗಳ ಬಗೆಗಿನ ತಮ್ಮ ಮಮಕಾರವನ್ನು ಪ್ರದರ್ಶಿಸಿದ್ದಾರೆ. ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ವಿನೀತ್ ಜೊತೆ ಬಂದಿದ್ದ ದರ್ಶನ್ ಮೃಗಾಲಯದಲ್ಲಿನ ಪ್ರಾಣಿ, ಪಕ್ಷಿಗಳನ್ನು ನೋಡಿ ಸಂಭ್ರಮಿಸಿದರು.

ತಮ್ಮ ಬಿಡುವಿನ ವೇಳೆಯನ್ನು ಪ್ರಾಣಿಗಳೊಂದಿಗೆ ಕಳೆಯುವುದೆಂದರೆ ದರ್ಶನ್ ಗೆ ಎಲ್ಲಿಲ್ಲದ ಖುಷಿ.ಅವರ ತೋಟದ ಮನೆಯಲ್ಲಿ ಮುದ್ದಾದ ನಾಯಿಮರಿಗಳು, ಕುದುರೆಗಳು, ಹಸುಗಳು ಹಾಗೂ ಕೆಲವೊಂದು ಆಕರ್ಷಕವಾಗಿರುವ ಪಕ್ಷಿಗಳನ್ನು ಕಾಣಬಹುದು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada