»   » ಪಾಂಡಿಚೆರಿಯಲ್ಲಿ 'ಸಾರಥಿ' ಸಾಹಸಗಳು

ಪಾಂಡಿಚೆರಿಯಲ್ಲಿ 'ಸಾರಥಿ' ಸಾಹಸಗಳು

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಸಾರಥಿ' ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಇತ್ತೀಚೆಗೆ ಪಾಂಡಿಚೆರಿಯಲ್ಲಿ ಚಿತ್ರದ ಸಾಹಸ ಸನ್ನಿವೇಶವೊಂದನ್ನು ನಿರ್ದೇಶಕ ದಿನಕರ್‌ ತೂಗುದೀಪ ನಾಯಕ ದರ್ಶನ್ ಅವರ ಅಭಿನಯದಲ್ಲಿ ಚಿತ್ರಿಸಿಕೊಂಡರು. ರವಿವರ್ಮ ಅವರು ಸಾಹಸ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದರು.ರಾಜ್‌ಕಮಲ್ ಆರ್ಟ್ಸ್ ಲಾಂಛನದಲ್ಲಿ ಕೆ.ಸಿ.ಎನ್ ಚಂದ್ರಶೇಖರ್ ಅವರು ಸಾರಥಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಪಾಂಡಿಚೆರಿಯಲ್ಲಿ ಚಿತ್ರಕ್ಕೆ 9ದಿನಗಳ ಚಿತ್ರೀಕರಣ ನಡೆಸಲಾಗಿದೆ ಎಂದು ತಿಳಿಸಿದ ದಿನಕರ್‌ತೂಗುದೀಪ್ ಇಲ್ಲಿ ಚಿತ್ರೀಕರಣಗೊಂಡ ಸಾಹಸ ಸನ್ನಿವೇಶ ನೋಡುಗರಿಗೆ ಮುದ ನೀಡಲಿದೆ ಎನ್ನುತ್ತಾರೆ. ನಿರ್ದೇಶಕರೇ ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ವಿ.ಹರಿಕೃಷ್ಣರ ಸಂಗೀತವಿದೆ. ಕೆ.ಕೃಷ್ಣಕುಮಾರ್ ಛಾಯಾಗ್ರಹಣ, ರವಿವರ್ಮ, ಪಳನಿರಾಜ್ ಸಾಹಸ, ಮದನ್ ಹರಿಣಿ, ಹರ್ಷ ಹಾಗೂ ರಾಮು ನೃತ್ಯ ಸಂಯೋಜನೆ ಮಾಡಿದ್ದಾರೆ.

ದಿನಕರ್ ತೂಗುದೀಪ ಮತ್ತು ಚಿಂತನ್ ಕಥೆ ಹಾಗೂ ಮೂರ್ತಿ ಅವರ ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ದರ್ಶನ್, ದೀಪು, ರಂಗಾಯಣರಘು, ಲೋಹಿತಾಶ್ವ, ಅಜಯ್, ಬುಲೆಟ್ ಪ್ರಕಾಶ್, ಸಿತಾರ, ಶರತ್‌ಕುಮಾರ್, ಶರತ್ ಲೋಹಿತಾಶ್ವ, ಮುನಿ, ಕೋಟೆ ಪ್ರಭಾಕರ್ ಮುಂತಾದವರಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada