»   »  ಹರೆ ರಾಮ ಹರೆ ಕೃಷ್ಣ ಚಿತ್ರಕ್ಕೆ ಅಸಲಿ ರೌಡಿಗಳ ಬಳಕೆ

ಹರೆ ರಾಮ ಹರೆ ಕೃಷ್ಣ ಚಿತ್ರಕ್ಕೆ ಅಸಲಿ ರೌಡಿಗಳ ಬಳಕೆ

Posted By:
Subscribe to Filmibeat Kannada

ಇತ್ತೀಚೆಗಷ್ಟೇ ಸೆಟ್ಟೇರಿದ ಮುರಳಿ ಅಭಿನಯದ 'ಹರೆ ರಾಮ ಹರೆ ಕೃಷ್ಣ' ಚಿತ್ರಕ್ಕೆ 30 ಮಂದಿ ಅಸಲಿ ರೌಡಿಗಳನ್ನು ಬಳಸಿಕೊಳ್ಳಲಾಗಿದೆ. ಕೆಲ ವರ್ಷಗಳ ಹಿಂದೆ ನಡೆದಂತಹ ನೈಜ ಘಟನೆ ಆಧಾರವಾಗಿ ಈ ಚಿತ್ರವನ್ನು ತೆರೆಗೆ ತರಲಾಗುತ್ತಿದೆ. ಇದೇ ಮೊದಲ ಬಾರಿಗೆ ಅಶೋಕ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕತೆ, ಚಿತ್ರಕತೆಯ ಜವಾಬ್ದಾರಿ ಸಹ ಅವರ ಹೆಗಲಿಗೆ ಇದೆ.

ನಟಿ ಸುಮಿತ್ರಾ ಅವರ ಮಗಳು ನಕ್ಷತ್ರಾ ಚಿತ್ರದ ನಾಯಕಿ. ಸುನಿಲ್ ಕುಮಾರ್ ದೇಸಾಯಿ ಅವರ 'ಸರಿಗಮಪ'ದ ಮೂಲಕ ನಕ್ಷತ್ರಾ ಬೆಳ್ಳಿತೆರೆಗೆ ಅಡಿಯಿಟ್ಟಿದ್ದರು. ಹರೆ ರಾಮ ಹರೆ ಕೃಷ್ಣ ಚಿತ್ರವನ್ನು ಬಿ ಪಿ ರಾಮೇಗೌಡ ಮತ್ತು ಪಾಲನಹಳ್ಳಿ ರಾಮಕೃಷ್ಣ ನಿರ್ಮಿಸುತ್ತಿದ್ದಾರೆ.

ಆರು ಹಾಡುಗಳನ್ನು ಒಳಗೊಂಡಿರುವ ಚಿತ್ರಕ್ಕೆ ಇಳಯರಾಜ ಸಂಗೀತ ಸಂಯೋಜನೆ ಇದೆ. ಪಿಕೆಎಚ್ ದಾಸ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ನಿರ್ದೇಶಕ ಡಿ.ರಾಜೇಂದ್ರ ಬಾಬು, ರಮೇಶ್ ಭಟ್, ತಾರಾ, ಸುಮಿತ್ರಾ ಮುಂತಾದವರು ಚಿತ್ರದ ಗಮನಾರ್ಹ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವನ್ನು ಅಕ್ಟೋಬರ್ ನಲ್ಲಿ ತೆರೆಗೆ ತರಲು ಸಿದ್ಧತೆ ನಡೆಯುತ್ತಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada