»   »  ಹೊಡಿಮಗ ಅಸಭ್ಯ ದೃಶ್ಯಗಳ ಬಗ್ಗೆ ಶಿವಣ್ಣ ಪಶ್ಚಾತ್ತಾಪ

ಹೊಡಿಮಗ ಅಸಭ್ಯ ದೃಶ್ಯಗಳ ಬಗ್ಗೆ ಶಿವಣ್ಣ ಪಶ್ಚಾತ್ತಾಪ

Subscribe to Filmibeat Kannada
A still from Hattrick Hodimaga
'ಹ್ಯಾಟ್ರಿಕ್ ಹೊಡಿಮಗ' ಚಿತ್ರದ ಬಗ್ಗೆ ಮಾಧ್ಯಮಗಳು ವಹಿಸಿದ ಕಾಳಜಿ ಬಗ್ಗೆ ನಟ ಶಿವರಾಜ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಚಿತ್ರದಲ್ಲಿನ ಎರಡು ಅಸಭ್ಯ ದೃಶ್ಯಗಳಲ್ಲಿ ತಾನು ನಟಿಸಬಾರದಿತ್ತು ಎಂದು ಖೇದ ವ್ಯಕ್ತಪಡಿಸಿದ್ದಾರೆ. ಮುಂದೆಂದೂ ಇಂತಹ ದೃಶ್ಯಗಳಲ್ಲಿ ನಟಿಸುವುದಿಲ್ಲ ಎಂದು ಶಿವಣ್ಣ ಆಣೆ ಮಾಡಿದ್ದಾರೆ.

'ಮುಖದ ಮೇಲೆ ಮೂತ್ರ ಮಾಡುವ ದೃಶ್ಯ' ಮತ್ತು ತಂಗಿಯ 'ಚಿತಾ ಭಸ್ಮ'ವನ್ನು ಕುಡಿಯುವ ಎರಡು ದೃಶ್ಯಗಳನ್ನು ಪ್ರೇಕ್ಷಕರು ಇನ್ನೂ ಅರಗಿಸಿಕೊಂಡಿಲ್ಲ. ಆ ರೀತಿಯ ಕೆಟ್ಟ ದೃಶ್ಯಗಳಲ್ಲಿ ತಾನು ನಟಿಸಬಾರದಿತ್ತು ಎಂಬುದು ಶಿವಣ್ಣನ ವಿವರಣೆ. ಅಣ್ಣ ತಂಗಿಯರ ಅನುಬಂಧದ ಪರಮಾವಧಿಯನ್ನು ತೋರಿಸಲು ಹೀಗೆ ಮಾಡಬೇಕಾಯಿತು. ಆದರೆ ನಂತರ ತಮಗೆ ಈ ರೀತಿಯ ದೃಶ್ಯದ ಅವಶ್ಯಕತೆ ಇರಲಿಲ್ಲ ಎಂಬುದು ಮನದಟ್ಟಾಯಿತು ಎಂದು ಶಿವಣ್ಣ ಯಾವುದೇ ಹಿಂಜರಿಕೆಯಿಲ್ಲದೆ ತಮ್ಮ ತಪ್ಪನ್ನು ಅಂಗೀಕರಿಸಿದ್ದಾರೆ.

ಚಿತ್ರದಲ್ಲಿ ನಕಲಿ ಪೊಲೀಸ್ ಒಬ್ಬ ಮುಖದ ಮೇಲೆ ಮೂತ್ರ ಮಾಡುವ ದೃಶ್ಯದ ಬಗೆಗೂ ತಮಗೆ ಅಸಮಾಧಾನವಿತ್ತು. ಕಮಲ ಹಾಸನ್ ತಮಿಳಿನಲ್ಲಿ ನಟಿಸಿರುವ 'ಮಹಾನದಿ' ಚಿತ್ರದ ಸ್ಪೂರ್ತಿಯಿಂದ ಆ ದೃಶ್ಯವನ್ನು ಬಳಸಿಕೊಂಡಿದ್ದೇವೆ. ಆದರೆ ಆ ದೃಶ್ಯ ನನ್ನ ಚಿತ್ರಕ್ಕೆ ಅಷ್ಟಾಗಿ ಹೊಂದಾಣಿಕೆಯಾಗಿಲ್ಲ. ಚಿತ್ರದಲ್ಲಿ ಇದೊಂದು ಅಸಂಬದ್ಧ ದೃಶ್ಯವಾಗಿತ್ತು. ಆ ರೀತಿಯ ದೃಶ್ಯಗಳಲ್ಲಿ ನಟಿಸಿದ್ದಕ್ಕೆ ದಯವಿಟ್ಟು ನನ್ನನ್ನು ಕ್ಷಮಿಸಿ. ಮುಂದಿನ ನನ್ನ ಚಿತ್ರಗಳಲ್ಲಿ ವಿಭಿನ್ನ ಶಿವರಾಜ್ ಕುಮಾರ್ ಆಗಿ ಕಾಣಿಸುತ್ತೇನೆ ಎಂದು ಶಿವರಾಜ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಪ್ರಸ್ತುತ ನಟಿಸುತ್ತಿರುವ ಭಾಗ್ಯದ ಬಳೆಗಾರ ಸೇರಿದಂತೆ ಮುಂದಿನ ನನ್ನ ಚಿತ್ರಗಳು ವೈವಿಧ್ಯಮಯವಾಗಿರುತ್ತವೆ. ಚಿತ್ರಗಳ ಆಯ್ಕೆಯಲ್ಲೂ ವೈವಿಧ್ಯತೆ ಇರುತ್ತದೆ. ಅದಕ್ಕೆ ಪೂರಕವಾಗಿ 'ದೇವರು ಕೊಟ್ಟ ತಂಗಿ' ಚಿತ್ರ ಸೆಟ್ಟೇರಿದೆ ಎಂದರು. ಏತನ್ಮಧ್ಯೆ ಅಗ್ನಿ ಶ್ರೀಧರ್ ಅವರು ಶಿವರಾಜ್ ಕುಮಾರ್ ಅವರಿಗೆ ಚಿತ್ರಕತೆಯೊಂದರ ಎಳೆಯನ್ನು ಹೇಳಿದ್ದಾರೆ. ಕತೆ ತುಂಬ ಇಷ್ಟವಾಯಿತು.ಅಗ್ನಿ ಶ್ರೀಧರ್ ಅವರ ಚಿತ್ರದಲ್ಲಿ ನಟಿಸುವುದಾಗಿ ಶಿವಣ್ಣ ತಿಳಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಸೆನ್ಸಾರ್ ಮಂಡಳಿಗೆ ಚಳ್ಳೆಹಣ್ಣು ತಿನ್ನಿಸಿದ ಹೊಡಿಮಗ
ಚಿತ್ರವಿಮರ್ಶೆ : ರುಂಡಗಳ ಚೆಂಡಾಟದಲ್ಲಿ ಹ್ಯಾಟ್ರಿಕ್ ಹೊಡೆದ ಮಗ!
ಸೆನ್ಸಾರ್ ಮಂಡಳಿಯೊಂದಿಗೆ 'ಹೊಡಿಮಗ' ಗುದ್ದಾಟ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada