»   » ಜಯನಗರದಲ್ಲಿ 'ಟೋಟಲ್ ಕನ್ನಡ' ಹೊಸ ಮಳಿಗೆ

ಜಯನಗರದಲ್ಲಿ 'ಟೋಟಲ್ ಕನ್ನಡ' ಹೊಸ ಮಳಿಗೆ

Posted By:
Subscribe to Filmibeat Kannada
Master Hirannaiah
ಕನ್ನಡ ಸಿನಿಮಾ, ಸಂಗೀತ, ಪುಸ್ತಕ, ಶುಭಾಶಯ ಪತ್ರಗಳು, ಟೀ ಶರ್ಟ್ ಗಳು, ಪೋಸ್ಟರ್ ಗಳು, ಬಾವುಟಗಳು, ಫಲಕಗಳು, ಬ್ಯಾಡ್ಜ್ ಗಳು ಮತ್ತು ಹಲವು ಅಪೂರ್ವ ಮಾಣಿಕ್ಯಗಳು ಒಂದೇ ಕಡೆ ಲಭಿಸುವ ಏಕೈಕ ಮಳಿಗೆ ಟೋಟಲ್ ಕನ್ನಡ.

ಇದೀಗ ಟೋಟಲ್ ಕನ್ನಡ ವಿಸ್ತೃತ ಹೊಸ ಮಳಿಗೆಯನ್ನು ಆರಂಭಿಸುತ್ತಿದೆ. ಇದರ ಉದ್ಘಾಟನಾ ಸಮಾರಂಭ ಜ.16ರಂದು ನಡೆಯಲಿದೆ. ಮಳಿಗೆಯನ್ನು ಉದ್ಘಾಟಿಸುವವರು ನಾಟಕಕಾರ ಮತ್ತು ನಟ ಮಾಸ್ಟರ್ ಹಿರಣ್ಣಯ್ಯ. ಮುಖ್ಯ ಅತಿಥಿಗಳಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಸಿದ್ದಲಿಂಗಯ್ಯ ಭಾಗವಹಿಸಲಿದ್ದಾರೆ.

ಕನ್ನಡಪರ ಚಿಂತಕ ಕೆ ರಾಜಕುಮಾರ್ ನಿರೂಪಣೆ ವಿಶೇಷ ಅತಿಥಿಯಾಗಿ ಭಾಷಾ ತಜ್ಞ ಹಾಗೂ ಚಿತ್ರ ನಿರ್ದೇಶಕ ಅಬ್ದುಲ್ ರೆಹಮನ್ ಪಾಷಾ ಹಾಗೂ ನಟ ಮತ್ತು ನೃತ್ಯಗಾರ ಶ್ರೀಧರ್ ಸಹ ಉಪಸ್ಥಿತರಿರುತ್ತಾರೆ.

ಉದ್ಘಾಟನೆ ದಿನಾಂಕ: ಶನಿವಾರ, ಜನವರಿ 16, 2010
ಮಳಿಗೆ ವಿಳಾಸ: ಟೋಟಲ್ ಕನ್ನಡ, ನಂ.638, 31ನೇ ಅಡ್ಡರಸ್ತೆ, 10ನೇ 'ಬಿ' ಮುಖ್ಯರಸ್ತೆ (ಪವಿತ್ರ ಹೋಟೆಲ್ ಎದುರಿಗಿನ ರಸ್ತೆ), ಜಯನಗರ 4ನೇ ಬ್ಲಾಕ್, ಬೆಂಗಳೂರು-560011.

ದೂರವಾಣಿ: (080) 41460325, 99862 22402.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada