»   » ಹೋರಿಗೆ ಕರಿಘಟ್ಟದಲ್ಲಿ ಕ್ಲೈಮ್ಯಾಕ್ಸ್

ಹೋರಿಗೆ ಕರಿಘಟ್ಟದಲ್ಲಿ ಕ್ಲೈಮ್ಯಾಕ್ಸ್

Posted By:
Subscribe to Filmibeat Kannada

ಭಕ್ತಿ ಪ್ರಧಾನ, ಹಾಸ್ಯ ಹಾಗೂ ಸಾಮಾಜಿಕ ಚಿತ್ರಗಳನ್ನು ನಿರ್ದೇಶಿಸಿ ಗೆದ್ದಿದ್ದ ನಾಗೇಂದ್ರ ಮಾಗಡಿ ಈ ಬಾರಿ ಆಕ್ಷನ್ ಕಾಮಿಡಿ ಹಾಗೂ ಲವ್ ಸೇರಿ ಎಲ್ಲಾ ಮಸಾಲಾ ಅಂಶಗಳಿರುವ ಚಿತ್ರ ಮಾಡುತ್ತಿದ್ದಾರೆ. ವಿನೋದ್ ಪ್ರಭಾಕರ್ ನಾಯಕನಾಗಿರುವ 'ಹೋರಿ' ಹೆಸರಿನ ಈ ಚಿತ್ರದ ಬಹುತೇಕ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಕಳೆದವಾರ ಕರಿಘಟ್ಟದ ದೇವಸ್ಥಾನದಲ್ಲಿ ಚಿತ್ರದ ಕ್ಲೈಮ್ಯಾಕ್ಸ್ ಸೀನ್ ಶೂಟ್ ಮಾಡಲಾಯಿತು.

ಹೆಚ್ಚುಕಮ್ಮಿ ಚಿತ್ರದ ಎಲ್ಲಾ ಕಲಾವಿದರು ಭಾಗವಹಿಸಿದ್ದ ಮದುವೆ ಸಮಾರಂಭದ ಈ ದೃಶ್ಯದಲ್ಲಿ 300 ಕ್ಕೂ ಹೆಚ್ಚು ಸಹಕಲಾವಿದರು ಕೂಡ ಪಾಲ್ಗೊಂಡಿದ್ದರು. ಈಗ ಕಳಲೆ, ಗೋಸಾಯಿ ಘಾಟ್, ಮೊದಲಾದ ಕಡೆ ಶೂಟ್ ಮಾಡಲಾಗುತ್ತಿದ್ದು, ಏ.28 ರವರೆಗೆ ನಿರಂತರವಾಗಿ ಮಾತಿನ ಭಾಗದ ಚಿತ್ರಣವನ್ನು ನಡೆಸಿ ಅಂತಿಮಗೊಳಿಸಲಾಗುವುದು.

ಆರ್.ಬಿ.ಎಸ್. ಕಂಬೈನ್ಸ್ ಲಾಂಛನದಲ್ಲಿ ಲಿಂಗೇಗೌಡ್ರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ರೇಣುಕುಮಾರ್ ಸಂಗೀತ ಸಂಯೋಜನೆ, ಎಂ.ಆರ್. ಸೀನುರವರ ಛಾಯಾಗ್ರಹಣ, ರವಿವರ್ಮ ಸಾಹಸ, ರಾಂನಾರಾಯಣರ ಸಾಹಿತ್ಯ ರಚನೆ ಇದ್ದು, ವಿನೋದ ಪ್ರಭಾಕರ, ಗೌರಿಮಂಜಾಲೆ, ರಮನಿತೋ ಚೌಧರಿ, ಪ್ರಮುಖ ತಾರಾಗಣದಲ್ಲಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada