»   » ಟಾಪ್5 ಕನ್ನಡ ಚಿತ್ರಗಳು : ಇನ್ನಷ್ಟು ಗಟ್ಟಿಯಾದ 'ಮಿಲನ'

ಟಾಪ್5 ಕನ್ನಡ ಚಿತ್ರಗಳು : ಇನ್ನಷ್ಟು ಗಟ್ಟಿಯಾದ 'ಮಿಲನ'

Posted By: Super
Subscribe to Filmibeat Kannada

ಡಿಸೆಂಬರ್ ಮೊದಲ ಪಾಕ್ಷಿಕದ ಬಾಕ್ಸಾಫೀಸ್ ವರದಿ ಪ್ರಕಾರ, ಮಿಲನ ಮೊದಲ ಸ್ಥಾನವನ್ನು ಉಳಿಸಿಕೊಂಡಿದೆ. ಮುಗ್ಗರಿಸಿತು ಎನ್ನುವಾಗಲೇ ಚಂಡ ಎರಡನೇ ಸ್ಥಾನದಲ್ಲಿ ಬಂದು ಕೂತಿದ್ದಾನೆ. ಆ ದಿನಗಳು ಚಿತ್ರ ಟಾಪ್ 5ಸ್ಥಾನದಲ್ಲಿದೆ.

1. ಮಿಲನ : ಮನೋಮೂರ್ತಿ ಅವರ ಸುಮಧುರ ಸಂಗೀತ, ಜಯಂತ್ ಸಾಹಿತ್ಯ, ಬಿಗಿ ನಿರ್ದೇಶನ ಮತ್ತು ಚಿತ್ರಕತೆ ಜೊತೆಗೆ ಪುನೀತ್ ಅಭಿನಯ, ಇವೆಲ್ಲವೂ ಮಿಲನದ ಗೆಲುವಿನಲ್ಲಿ ಸಮಾನ ಪಾತ್ರವಹಿಸಿವೆ. ಸಂಜನಾ ಮತ್ತು ಪಾರ್ವತಿ ಮೆಲ್ಟನ್ ಚಿತ್ರದ ನಾಯಕಿಯರು. ಮಿಲನಕ್ಕೀಗ ಶತದಿನೋತ್ಸವದ ಸಂಭ್ರಮ.

2. ಚಂಡ :ಸ್ಪರ್ಧೆ ಮತ್ತು ಪೈಪೋಟಿಯ ಮಧ್ಯೆಯೇ ಚಂಡ ಮುನ್ನುಗಿದೆ. ವಿಜಯ್ ಬಾಕ್ಸಾಫೀಸಲ್ಲಿ ತನ್ನ ಸ್ಥಾನ ಉಳಿಸಿಕೊಂಡಿದ್ದಾರೆ. ಎಸ್.ನಾರಾಯಣ್ ನಿರ್ದೇಶನದ ಈ ಚಿತ್ರದ ಬಗ್ಗೆ ಸಿನಿ ಪಂಡಿತರು ಹೇಳುವುದು ಹೀಗೆ; ಚಿತ್ರಕ್ಕೆ ಒಳ್ಳೆಯ ಆರಂಭ ಸಿಕ್ಕಿದೆ. ಆದರೆ ಇದು ಹೀಗೆಯೇ ಮುಂದುವರೆಯುವಲ್ಲಿ ಅನುಮಾನವಿದೆ.

3. ಕೃಷ್ಣ :ಕಳೆದ ಹತ್ತಾರು ತಿಂಗಳಿಂದ ಟಾಪ್1ಸ್ಥಾನದಲ್ಲಿದ್ದ ಗಣೇಶ್ ಮೂರನೇ ಸ್ಥಾನಕ್ಕೆ ಬಂದಿದ್ದಾರೆ ಆದರೂ, ಮೊದಲ ಆರು ವಾರಗಳ ಗಳಿಕೆ ಚೆನ್ನಾಗಿದೆ. ವ್ಯಾಪಕ ಪ್ರಚಾರದೊಂದಿಗೆ ಚಿತ್ರ ತೆರೆಕಂಡಿದೆ.

4. ಒರಟ ಐ ಲವ್ ಯೂ : ಚಿತ್ರದ ತುಂಬ ಹೊಸಮುಖಗಳೇ ತುಂಬಿವೆ. ಚಿತ್ರದ ನಿರ್ದೇಶಕ ಸಹಾ ಹೊಸಬರೇ. ಆದರೂ ಚಿತ್ರ ನೋಡಬಲ್. ಚಿತ್ರದ ಹಾಡುಗಳು, ಚಿತ್ರಕತೆ ಹೊಸಬರ ಹೋಮ್ ವರ್ಕ್ ಇವೆಲ್ಲವೂ ಚಿತ್ರದ ಹೈಲೈಟ್ಸ್.

5. ಆ ದಿನಗಳು :ಬೆಂಗಳೂರು ಮತ್ತು ಮೈಸೂರಿನಲ್ಲಿ ಚಿತ್ರ 50ದಿನ ಪೂರೈಸಿದೆ. ಸತ್ಯಘಟನೆಗಳನ್ನು ಹೆಣೆದು ಅಗ್ನಿ ಶ್ರೀಧರ್ ಚಿತ್ರ ರೂಪಿಸಿದ್ದಾರೆ. ಚೈತನ್ಯ ಅವರ ನಿರ್ದೇಶನ ಚಿತ್ರಕ್ಕೆ ಜೀವತುಂಬಿದೆ. ಚಿತ್ರದ ನಾಯಕಿ ಅರ್ಚನಾ , ಸ್ಯಾಂಡಲ್ ವುಡ್ ನಲ್ಲಿ ಗಮನ ಸೆಳೆದಿದ್ದಾರೆ.(ದಟ್ಸ್ ಕನ್ನಡ ಸಿನಿವಾರ್ತೆ)

English summary
'Milana' continues to have a good run mainly for want of competition. It has been helped not only by good direction and decent performances but also by its melodious songs. Puneet Raj Kumar excels as usual.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada