Just In
Don't Miss!
- News
ಖಾತೆ ಹಂಚಿಕೆ ಅಸಮಾಧಾನ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಮಹತ್ವದ ಹೇಳಿಕೆ!
- Sports
ಅಜಿಂಕ್ಯ ರಹಾನೆ ಬಳಗಕ್ಕೆ ಕ್ವಾರಂಟೈನ್ ವಿನಾಯಿತಿ ನೀಡಿದ ಮಹಾರಾಷ್ಟ್ರ
- Finance
ಬಜೆಟ್ 2021: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಜನವರಿ 30ರಂದು ಸರ್ವ ಪಕ್ಷಗಳ ಸಭೆ
- Lifestyle
ಗಣರಾಜ್ಯೋತ್ಸವ 2021: ಇಲ್ಲಿದೆ ಶುಭಾಶಯಗಳು, ಕೋಟ್ಸ್, ವಾಟ್ಸಾಪ್ ಸ್ಟೇಟಸ್
- Automobiles
ಬಿಡುಗಡೆಗೆ ಸಜ್ಜಾದ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕುಗಳು
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಿಷ್ಣು ಅಭಿಮಾನಿಯಿಂದ 'ಸಿಂಹ ಗರ್ಜನೆ' ಪುಸ್ತಕ
ಬೆಂಗಳೂರಿನ ಭುವಲ್ಕ ಗ್ರೂಪ್ ಆಫ್ ಕಂಪನೀಸ್ ನ ಚೇರ್ಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಅವರ ಆಪ್ತ ಸಹಾಯಕರಾಗಿರುವ ಜನಾರ್ಧನ ರಾವ್ ಸಾಳಂಕೆಯವರು ವಿಷ್ಣು ಅವರ ಮೇಲಿನ ಅಭಿಮಾನವನ್ನು 'ಮರೆಯದ ಮಾಣಿಕ್ಯ - ಯಜಮಾನ ಡಾ.ವಿಷ್ಣುವರ್ಧನ್' ಎಂಬ ಪುಸ್ತಕ ತರುವ ಮುಖಾಂತರ ವ್ಯಕ್ತಪಡಿಸಿದ್ದರು. ಈ ಹೊತ್ತಗೆ ಕಳೆದ ವರ್ಷ ಸೆಪ್ಟೆಂಬರ್ 15ರಂದು ಬೆಂಗಳೂರಿನಲ್ಲಿ ಬಿಡುಗಡೆಯಾಗಿತ್ತು.
ಆ ಪುಸ್ತಕದ ಯಶಸ್ಸಿನಿಂದ ಉತ್ತೇಜಿತರಾಗಿರುವ ಸಾಳಂಕೆ 'ಸಿಂಹ ಗರ್ಜನೆ' ಎಂಬ ಇನ್ನೊಂದು ಪುಸ್ತಕವನ್ನು ಹೊರತಂದಿದ್ದಾರೆ. ಡಿಸೆಂಬರ್ 30ರ 2009ರಂದು ಸಾಹಸಸಿಂಹ ವಿಷ್ಣುವರ್ಧನ್ ಕಾಲವಾದ ನಂತರ 2011ರ ಡಿಸೆಂಬರ್ 30ರವರೆಗೆ ವಿಷ್ಣು ಕುರಿತಾಗಿ ಜರುಗಿದ ಎಲ್ಲ ಬೆಳವಣಿಗಳನ್ನು ಈ ಪುಸ್ತಕದಲ್ಲಿ ದಾಖಲಿಸಿರುವುದಾಗಿ ಒನ್ಇಂಡಿಯಾ ಕನ್ನಡ ಪೋರ್ಟಲ್‌ಗೆ ಸಾಳಂಕೆ ತಿಳಿಸಿದ್ದಾರೆ.
ಇದರಲ್ಲಿ ಇನ್ನೂ ಯಥಾಸ್ಥಿತಿ ಕಾಯ್ದುಕೊಂಡಿರುವ ವಿಷ್ಣು ಸ್ಮಾರಕ, ಉದ್ಯಾನವನ ಕುರಿತು ತಮ್ಮ ಅನಿಸಿಕೆಗಳನ್ನು ಸಾಳಂಕೆ ಹಂಚಿಕೊಂಡಿದ್ದಾರೆ. ಅಲ್ಲದೆ, ಚಿತ್ರರಂಗದ ಪ್ರಮುಖ ಕಲಾವಿದರ ಸಂದರ್ಶನಗಳನ್ನು ಪುಸ್ತಕ ಒಳಗೊಂಡಿರುತ್ತದೆ. ಒಟ್ಟಿನಲ್ಲಿ ವಿಷ್ಣು ಅವರ ಚಿತಾಭಸ್ಮವನ್ನು ಶೇಖರಿಸಿಟ್ಟುಕೊಂಡು ತಮ್ಮ ಅಭಿಮಾನವನ್ನು ಮೆರೆದಿರುವ ಸಾಳಂಕೆ ಅವರಿಂದ ವಿಷ್ಣುವರ್ಧನ್ ಅಭಿಮಾನಿಗಳಿಗೆ ಓದಲು ಮತ್ತೊಂದು ಸಮೃದ್ಧ ಹೊತ್ತಗೆ ಹೊರಬರಲಿದೆ.