»   »  ಸಾವು ಗೆದ್ದು ಬಂದ ಸುಖಧರೆ ಕೈಯಲ್ಲಿ ಮಳೆಬಿಲ್ಲು

ಸಾವು ಗೆದ್ದು ಬಂದ ಸುಖಧರೆ ಕೈಯಲ್ಲಿ ಮಳೆಬಿಲ್ಲು

Posted By:
Subscribe to Filmibeat Kannada
Mahesh Sukhadhare come back with Malebillu
ಅದೊಂದು ಹೋಟೆಲ್. ಅಪಘಾತದಿಂದ ಆಗತಾನೆ ಚೇತರಿಸಿಕೊಳ್ಳುತ್ತಿದ್ದ ಮಹೇಶ್ ಸುಖಧರೆಗೆ ಯುವಕನೊಬ್ಬ ಎದುರಾದ. ಅರೆ ನೀವು ಮಣಿಕಾಂತ್ ಕದ್ರಿ ಅಲ್ಲವೇ ಎಂಬ ಪ್ರಶ್ನೆ. ಆಮೇಲೆ ಉಭಯಕುಶಲೋಪರಿ. ಮಾತಿನ ಭರಾಟೆಯಲ್ಲೇ ಮಣಿಕಾಂತ್ ತಮಗೊಂದು ಸಣ್ಣ ಚಿತ್ರದಲ್ಲಿ ಅವಕಾಶ ಕೊಡಿಸಿ ಅಂತ ಸುಖಧರೆ ಅವರಲ್ಲಿ ಅಲವತ್ತುಕೊಂಡರು. ಆಗ ಏನೂ ಹೇಳದೆ ಸುಮ್ಮನೆ ನಡೆದ ಸುಖಧರೆ ಈಗ 'ಮಳೆಬಿಲ್ಲೇ' ಸಿನಿಮಾ ನಿರ್ದೇಶಿಸಿದ್ದಾರೆ. ಹಸನಾದ ಸಿನಿಮಾ ಅದಾಗಲಿ ಅನ್ನುವ ಕಾರಣಕ್ಕೆ ಚಿತ್ರೀಕರಣಕ್ಕೇ ಐವತ್ತು ದಿನ ವ್ಯಯಿಸಿದ್ದಾರೆ. ಸಂಗೀತ ನಿರ್ದೇಶನ ಮಣಿಕಾಂತ್ ಕದ್ರಿ ಅವರದ್ದು ಎಂಬುದು ವಿಶೇಷ.

ಯಾವುದೋ ಗಳಿಗೆಯಲ್ಲಿ ಕಷ್ಟ ಹೇಳಿಕೊಂಡಿದ್ದಕ್ಕೆ ಹೀಗೆ ಫಲ ಸಿಗುತ್ತದೆ ಅಂತ ಖುದ್ದು ಮಣಿಕಾಂತ್ ಅಂದುಕೊಂಡಿರಲಿಲ್ಲವಂತೆ. ಗಣೇಶ ಸಿನಿಮಾ ಸಂಗೀತಕ್ಕೆ ಕೆಟ್ಟ ಪ್ರತಿಕ್ರಿಯೆ ಸಿಕ್ಕ ನಂತರ ಹತಾಶರಾಗಿದ್ದ ಮಣಿಕಾಂತ್ ಈಗ ಕೊಡವಿಕೊಂಡು ಮೇಲೆದ್ದಿದ್ದಾರೆ. ಸವಾರಿ ಹಾಡುಗಳಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ತೆಲುಗಿನಲ್ಲಿ 'ಆವಕಾಯ ಬಿರಿಯಾನಿ' ಹೆಸರಿನ ಚಿತ್ರಕ್ಕೂ ಇವರದ್ದೇ ಸಂಗೀತ. ಈಗ ಮಳೆಬಿಲ್ಲೇ ಮೇಲೆ ಒಂದಿಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಎಂ.ಎಸ್.ಸತ್ಯು ನಿರ್ದೇಶನದ ಇಜ್ಜೋಡು ಚಿತ್ರಕ್ಕೆ ಸೊಗಡು ಉಳಿಸಿಕೊಂಡಂಥ ಸಂಗೀತ ನೀಡಿದ್ದಾರೆ.

ಒತ್ತಡದಲ್ಲಿದ್ದಾಗ ಸುಖಧರೆ ಸುಖ ಕೊಟ್ಟರು. ಈಗ ಅವಕಾಶಗಳು ಮುಖಮಾಡುವ ಸೂಚನೆಗಳಿವೆ ಅಂತ ನಗುವ ಮಣಿಕಾಂತ್ ಅವರ ತಂದೆ ಹೆಸರಾಂತ ಸ್ಯಾಕ್ಸಫೋನ್ ವಾದಕ ಕದ್ರಿ ಗೋಪಾಲನಾಥ್. ನಿಮ್ಮ ಸಂಗೀತದ ಮೊದಲ ಕೇಳುವ ಅವರೇನಾ ಅಂತ ಕೇಳಿದರೆ, ಯಾವಾಗಲೂ ಅಲ್ಲ. ಆದರೆ, ನಾನು ರಾಗ ಸಂಯೋಜಿಸಿದ ನಂತರ ಅವರಿಗೆ ಕೇಳಿಸುತ್ತೇನೆ. ಇಷ್ಟವಾಗದೇ ಇದ್ದರೆ ನಿಷ್ಠುರವಾಗಿ ಅದನ್ನು ಧಿಕ್ಕರಿಸುತ್ತಾರೆ. ಆದರೆ, ನನ್ನ ರಕ್ತದಲ್ಲಿ ಸಂಗೀತ ಇದೆ ಅಂದರೆ ಅದಕ್ಕೆ ಅವರೇ ಕಾರಣ ಎಂದು ಮಣಿಕಾಂತ್ ನಗುತ್ತಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಇದು ಸಂಪೂರ್ಣ ಗ್ರಾಮೀಣ ಹಿನ್ನೆಲೆ ಚಿತ್ರ: ಶಿವಣ್ಣ
ರು.3 ಕೋಟಿ ವೆಚ್ಚದಲ್ಲಿ ರಾಜ್ ಚಿತ್ರದ ಹಾಡುಗಳು!
ಕೇಬಲ್ ಪ್ರಶಸ್ತಿ:ಅತ್ಯುತ್ತಮ ಧಾರಾವಾಹಿ ಮುಕ್ತಮುಕ್ತ

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X