»   »  ತೆಲುಗಿನಲ್ಲಿ ಸಲ್ಲದ ನಿಖಿತಾಗೆ ಕನ್ನಡದಲ್ಲಿ ಅದೃಷ್ಟ

ತೆಲುಗಿನಲ್ಲಿ ಸಲ್ಲದ ನಿಖಿತಾಗೆ ಕನ್ನಡದಲ್ಲಿ ಅದೃಷ್ಟ

Posted By:
Subscribe to Filmibeat Kannada

ನಿಖಿತಾ ಎಂಬ 'ವಂಶಿ' ಸಿನಿಮಾದ ಸುಂದರಿ ತನ್ನ ಸಿನಿಮಾ ಯಾತ್ರೆಯನ್ನು ತೆಲುಗಿನಲ್ಲಿ ಆರಂಭಿಸಿ ಸುಮಾರು 5 ವರ್ಷಗಳೆ ಸಂದಿವೆ. ಮೊದಲ ಚಿತ್ರ ಆರ್ಯನ್ ರಾಜೇಶ್‌ರ ಹಾಯ್ ನಿಂದ ಮೊದಲುಗೊಂಡು ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ಆಕೆ ನಟಿಸಿದ ಒಂದೇ ಒಂದು ಚಿತ್ರ ಕೂಡ ಯಶಸ್ಸುನ್ನು ಕಾಣಿಲಿಲ್ಲ.

ಇದರ ನಡುವೆ ತಮಿಳು,ಮಾಲಯಾಳಂ ಚಿತ್ರರಂಗ ಕಡೆಗೂ ಮುಖ ಮಾಡಿ ನೋಡಿದ ನಿಖಿತಾಗೆ ದಕ್ಕಿದ್ದು ಮಾತ್ರ ನಿರಾಶೆ. ಎಲ್ಲೂ ಸಲ್ಲದವರು ಕನ್ನಡದಲ್ಲಿ ಸಲ್ಲುತ್ತಾರೆ ಎಂಬಂತೆ ಕನ್ನಡಕ್ಕೆ ಬಂದ ಈ ಪಂಜಾಬಿ ಮುದ್ದು ಗೊಂಬೆ ಪುನಿತ್ ಜತೆ 'ವಂಶಿ'ಯಲ್ಲಿ ನಟಿಸಿ ಸೈ ಎನ್ನಿಸಿಕೊಂಡಿದ್ದೆ ತಡ ಸಾಲು ಸಾಲು ಚಿತ್ರಗಳು ಈಕೆಯ ಕಡೆಗೆ ಹರಿದು ಬರುತ್ತಿವೆ. ಅದರಲ್ಲೂ ಉಪ್ಪಿ ಜತೆ 'ದುಬೈಬಾಬು' ವಿಷ್ಣುವರ್ಧನ್‌ರವರ 200ನೇ ಚಿತ್ರ 'ಆಪ್ತರಕ್ಷಕ' ಚಿತ್ರಕ್ಕೂ ನಾಯಕಿಯಾಗಿದ್ದಾಳೆ.

ರವಿಚಂದ್ರನ್ ರ 'ರಾಜ್‌ಕುಮಾರಿ' ಸೋತರು ಈ ರಾಜ್‌ಕುಮಾರಿಗೆ ಕನ್ನಡ ಚಿತ್ರರಂಗಲ್ಲಿ ಅವಕಾಶಗಳಿಗೇನು ಕೊರತೆ ಇಲ್ಲ. ಚಿತ್ರರಸಿಕರ ಮನಗೆದ್ದಿರುವ ನಿಖಿತಾಳಿಗೆ ಕನ್ನಡದಲ್ಲೇ ಡಬ್ ಮಾಡುವ ಆಸೆಯಂತೆ. ಕನ್ನಡದಲ್ಲಿ ಹೆಚ್ಚಿನ ಅವಕಾಶ ದೊರೆತರೆ, ಕನ್ನಡ ಕಲಿಕೆ ಮುಂದುವರೆಸುತ್ತೇನೆ ಎನ್ನುತ್ತಾರೆ ನೆರೆಮನೆಯ ಹುಡುಗಿ ನಿಖಿ.

(ದಟ್ಸ್ ಕನ್ನಡ ಚಿತ್ರವಾರ್ತೆ)

ರಾಜಕುಮಾರಿ : ವ್ಯರ್ಥವಾದ ಏಕಾಂಗಿ ಹೋರಾಟ
ಆಪ್ತರಕ್ಷಕ ವಿಷ್ಣುವರ್ಧನ್ ಗೆ ಜತೆಯಾದ ನಿಖಿತಾ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada