»   » ಕುವೆಂಪು ಮನೆಯಲ್ಲೇ ರಸಋಷಿ ಚಿತ್ರೀಕರಣ

ಕುವೆಂಪು ಮನೆಯಲ್ಲೇ ರಸಋಷಿ ಚಿತ್ರೀಕರಣ

Posted By:
Subscribe to Filmibeat Kannada

ರಂಗಭೂಮಿ ಕಲಾವಿದ ಋತ್ವಿಕ್ ಸಿಂಹ ಅವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರ 'ರಸಋಷಿ ಕುವೆಂಪು'. ಇದೊಂದು ವಿಭಿನ್ನ ಚಿತ್ರವಾಗಿದ್ದು ಚಿತ್ರೋದ್ಯಮದಲ್ಲಿ ಒಂದು ಅಪೂರ್ವ ಪ್ರಯತ್ನ ಎನ್ನುತ್ತಾರೆ ಋತ್ವಿಕ್. ರಸಋಷಿ ಕುವೆಂಪು ಪಾತ್ರವನ್ನು ಋತ್ವಿಕ್ ತಂದೆ ಸಿ ಆರ್ ಸಿಂಹ ಮಾಡುತ್ತಿದ್ದಾರೆ.

ಕುವೆಂಪು ಅವರ ಜೀವನ ಪ್ರಮುಖ ಘಟ್ಟಗಳನ್ನು ಚಿತ್ರ ಹೊಂದಿದೆ. ಚಿತ್ರದ ನಿರೂಪಣೆ ಸಮಕಾಲೀನವಾಗಿದ್ದ್ದು ಕಮರ್ಷಿಯಲ್ ಮತ್ತು ಕಲಾತ್ಮಕ ಚೌಕಟ್ಟಿನಲ್ಲಿ ಚಿತ್ರವನನ್ನು ತೆರೆಗೆ ತರಲಾಗುತ್ತಿದೆ. ತಮ್ಮ ಬಗ್ಗೆ ಚಿತ್ರ ನಿರ್ದೇಶಿಸುವ ಅವಕಾಶವನ್ನು ಕೊಟ್ಟ ಕುವೆಂಪು ಅವರಿಗೆ ನಾವು ಚಿರಋಣಿಯಾಗಿದ್ದೇವೆ ಎನ್ನುತ್ತಾರೆ ಸಿ ಆರ್ ಸಿಂಹ.

ಚಿತ್ರದ ನಿರ್ಮಾಪಕ ಅರವಿಂದ್ ಪ್ರಕಾಶ್ ಈ ಚಿತ್ರವನ್ನು ನಿರ್ದೇಶಿಸುವಂತೆ ಋತ್ವಿಕ್ ಕೈಗೊಪ್ಪಿಸಿದ್ದರು. 'ರಸಋಷಿ'ಯನ್ನು ಕನ್ನಡ ಚಿತ್ರೋದ್ಯಮದಲ್ಲಿ ಅದ್ಭುತ ದೃಶ್ಯಕಾವ್ಯವಾಗಿ ನಿರ್ದೆಶಿಸುವಲ್ಲಿ ಋತ್ವಿಕ್ ಶ್ರಮವಹಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಆಕ್ಶನ್, ಕಟ್ ಹೇಳುತ್ತಿರುವ ಋತ್ವಿಕ್ ತಮ್ಮ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.

ಈ ಚಿತ್ರವನ್ನು ಕುವೆಂಪು ಅವರ ಸ್ವಂತ ಮನೆಯಲ್ಲೇ ಚಿತ್ರೀಕರಿಸಲಾಗಿದೆ. ಅವರ ಮೇಜು ಹಾಗೂ ಲೇಖನಿಯನ್ನು ಚಿತ್ರದಲ್ಲಿ ಬಳಸಿಕೊಂಡಿದ್ದೇವೆ. ನಮ್ಮ ತಂದೆಯವರು ಕುವೆಂಪು ಅವರ ಬಟ್ಟೆಗಳನ್ನು ತೊಟ್ಟು ಅಭಿನಯಿಸುತ್ತಿದ್ದಾರೆ. ನಟಿ ಪದ್ಮಜಾ ಸಹ ಚಿತ್ರದಲ್ಲಿದ್ದು ಅವರು ಕುವೆಂಪು ಅವರ ಪತ್ನಿಯ ಸೀರೆಯುಟ್ಟು ನೈಜ ಅಭಿನಯ ನೀಡಿದ್ದಾರೆ ಎನ್ನುತ್ತ್ತಾರೆ ಋತ್ವಿಕ್.

ಇದಿಷ್ಟೇ ಅಲ್ಲದೆ ಕುವೆಂಪು ಅವರು ಬಳಸುತ್ತಿದ್ದ ಕಾರನ್ನು ಬಳಸಿಕೊಂಡಿದ್ದೇವೆ. ಚಿತ್ರವನ್ನು ನೈಜವಾಗಿ ತೆರೆಗೆ ತರಲು ಸಾಕಷ್ಟು ಶ್ರಮ, ಸಂಶೋಧನೆ ಮಾಡಿದ್ದೇವೆ. ವಿ ಮನೋಹರ್ ಸಂಗೀತ ಸಂಯೋಜಿಸಿದ್ದು ಚಿತ್ರದ ಹಾಡುಗಳು ಅತ್ಯುತ್ತಮವಾಗಿ ಮೂಡಿಬಂದಿವೆ. ಮಕ್ಕಳ ಬ್ಯಾಲೆ ಹಾಡನ್ನು ಉಪೇಂದ್ರ ಹಾಡಿದ್ದು ಮತ್ತೊಂದು ಹಾಡನ್ನು ಇದೇ ಮೊದಲ ಬಾರಿಗೆ ಸಿನಿಮಾದಲ್ಲಿ ಆರ್ ಕೆ ಪದ್ಮನಾಭನ್ ಹಾಡಿದ್ದಾರೆ. ಎರಡು ಹಾಡುಗಳನ್ನು ಜೈ ಹೋ ಖ್ಯಾತಿಯ ವಿಜಯ ಪ್ರಕಾಶ್ ಹಾಡಿರುವುದಾಗಿ ರುತ್ವಿಕ್ ತಿಳಿಸಿದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada