»   » ರೂಪಾ ಅಯ್ಯರ್ 'ಮುಖಪುಟ' ಅನಾವರಣ

ರೂಪಾ ಅಯ್ಯರ್ 'ಮುಖಪುಟ' ಅನಾವರಣ

Posted By:
Subscribe to Filmibeat Kannada

ರೂಪಾ ಅಯ್ಯರ್ ನಿರ್ದೇಶನದ ಚೊಚ್ಚಲ ಚಿತ್ರ 'ಮುಖ ಪುಟ' ಈ ಶುಕ್ರವಾರ (ಫೆ.19)ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಈಗಾಗಲೇ ಮುಖಪುಟಕ್ಕೆ ಅನೇಕ ಅಂತಾರಾಷ್ಟ್ರೀಯ ಪ್ರಶಸ್ತಿಗಳು ದೊರಕಿವೆ.

ಇದು ಹೆಚ್ ಐವಿ/ಏಡ್ಸ್ ಪೀಡಿತ ಮಗುವಿನ ಜೀವನದ ಸತ್ಯ ಕತೆಯಾಗಿದೆ. ಈ ಮಕ್ಕಳಿಗೆ ಅವರು ಬದುಕಿರುವ ತನಕ ಪ್ರೀತಿ ಮತ್ತು ಸ್ವಾತಂತ್ರ್ಯ ಕೊಟ್ಟು ಅವರು ಸಾಮಾನ್ಯ ಮಕ್ಕಳ ಜೊತೆಗೂಡಿ ಜೀವನ ನಡೆಸಲು ಅವಕಾಶ ಮಾಡಿಕೊಡಬೇಕೆಂಬುದು ಈ ಚಿತ್ರದ ಮೂಲ ಧ್ಯೇಯ.

ಈ ಚಿತ್ರವನ್ನು ಅಮೆರಿಕ ಮೂಲದ ಇಂಡಿಯಾ ಕ್ಲಾಸಿಕ್ ಆರ್ಟ್ಸ್ ನಿರ್ಮಿಸಿದೆ. ಐರ್ಲೆಂಡ್, ದಕ್ಷಿಣ ಆಫ್ರಿಕಾ, ವೇಲ್ಸ್, ಈಜಿಪ್ಟ್, ಥೈಲ್ಯಾಂಡ್ ಮೊದಲಾದ ಚಿತ್ರೋತ್ಸವಗಳಲ್ಲಿ ಮುಖಪುಟ ಪ್ರದರ್ಶನ ಕಂಡು ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಐರ್ಲೆಂಡ್, ದಕ್ಷಿಣ ಆಫ್ರಿಕಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರ ಹಾಗೂ ಕ್ಯಾಲಿಫೋರ್ನಿಯಾದಲ್ಲಿ ನಡೆದ ಚಿತ್ರೋತ್ಸವದಲ್ಲಿ ಸಿಲ್ವರ್ ಸಿಯೆರಾ ಪ್ರಶಸ್ತಿಯನ್ನು 'ಮುಖಪುಟ' ಚಿತ್ರಗಳಿಸಿದೆ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada