For Quick Alerts
  ALLOW NOTIFICATIONS  
  For Daily Alerts

  ಒನ್ ಟೂ ತ್ರಿ ವಿಷ್ಣುವರ್ಧನ... ಸೆಂಚುರಿ ಕಣಣ್ಣಾ

  By Rajendra
  |

  ಕಿಚ್ಚ ಸುದೀಪ್ ಅಭಿನಯದ ಮಾಸ್ ಮಸಾಲ ಚಿತ್ರ 'ವಿಷ್ಣುವರ್ಧನ' ಸೆಂಚುರಿ ಬಾರಿಸಿದೆ. ಮೆಜೆಸ್ಟಿಕ್ ಪ್ರದೇಶದ ಮೇನಕ ಚಿತ್ರಮಂದಿರದಲ್ಲಿ 'ವಿಷ್ಣುವರ್ಧನ' ನೂರು ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಸುದೀಪ್ ಜೊತೆ ಪ್ರಿಯಾಮಣಿ, ಭಾವನಾ, ಸೋನು ಸೂದ್ ಚಿತ್ರದ ತಾರಾ ಬಳಗದಲ್ಲಿದ್ದಾರೆ.

  ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ ಅವರಿಗೆ 'ವಿಷ್ಣುವರ್ಧನ' ಚಿತ್ರ ಯಶಸ್ಸು ಮತ್ತಷ್ಟು ಬಲ ನೀಡಿದೆ. ರಾಜ್ಯದ ಒಟ್ಟು ಎಂಟು ಕೇಂದ್ರಗಳಲ್ಲಿ 'ವಿಷ್ಣುವರ್ಧನ' ಚಿತ್ರ ಸೆಂಚುರಿ ಬಾರಿಸಿದೆ. ಬಿಡುಗಡೆಯಾದ ಎಲ್ಲಾ ಚಿತ್ರಮಂದಿರಗಳಲ್ಲಿ 'ವಿಷ್ಣುವರ್ಧನ' ಪೈಸಾ ವಸೂಲ್ ಮಾಡಿರುವುದು ಮತ್ತೊಂದು ವಿಶೇಷ.

  ಇನ್ನೊಂದು ವಿಶೇಷ ಎಂದರೆ 'ವಿಷ್ಣುವರ್ಧನ' ಚಿತ್ರ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಿಗೂ ರೀಮೇಕ್ ಆಗಲು ಹೊರಟಿದೆ. ಈ ಒಟ್ಟಾರೆ ಬೆಳವಣಿಗೆಯಿಂದ ಕನ್ನಡ ಚಿತ್ರರಂಗದ ಕಡೆಗೆ ನೆರೆಹೊರೆಯ ಚಿತ್ರೋದ್ಯಮಗಳು ಕಣ್ಣು ಬಾಯಿ ಬಿಟ್ಟುಕೊಂಡು ನೋಡುವಂತಾಗಿದೆ. (ಒನ್‌ಇಂಡಿಯಾ ಕನ್ನಡ)

  English summary
  Sudeep lead Kannada movie Vishnuvardhana completes 100 days and running successfully in all the theatres. Directed by P.Kumar and produced by Dwarakish, the movie also stars Bhavana, Priyamani and Sonu Sood.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X