»   » ಪೂಜಾ ಗಾಂಧಿ ಈಗ ಆಪ್ತಳಂತೆ

ಪೂಜಾ ಗಾಂಧಿ ಈಗ ಆಪ್ತಳಂತೆ

Posted By:
Subscribe to Filmibeat Kannada

ಅನು ಚಿತ್ರಕ್ಕೆ ಸಹ ನಿರ್ದೇಶಕನಾಗಿ ಕೆಲಸ ಮಾಡಿ, ಒಂದು ಪುಟ್ಟ ಪಾತ್ರ ಕೂಡ ನಿರ್ವಹಿಸಿದ್ದ ಸಂಜೀವ್ ಕುಮಾರ ಮೆಗೋಟಿ ಈಗಾಗಲೇ ತೆಲುಗಿನಲ್ಲಿ ಪೌರುಷಂ ಸೇರಿ ಮೂರು ಚಿತ್ರಗಳನ್ನು ನಿರ್ದೇಶಿಸಿ ಯಶಸ್ವಿಯಾಗಿದ್ದಾರೆ. ಇದೀಗ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯ ಚಿತ್ರವೊಂದರ ನಿರ್ದೇಶನಕ್ಕೆ ಕೈ ಹಾಕಿದ್ದಾರೆ.

ಯಶಸ್ವಿನಿ ಎಂಟರ್‌ಪ್ರೈಸಸ್ ಲಾಂಛನದಲ್ಲಿ ಸಂಜೀವ್ ಕುಮಾರ ಅವರೇ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ 'ಆಪ್ತ' ಚಿತ್ರದಲ್ಲಿ ನಟಿ ಪೂಜಾ ಗಾಂಧಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೇ.17ರಿಂದ ಚಿತ್ರೀಕರಣ ಪ್ರಾರಂಭಿಸಲಿರುವ ಈ ಚಿತ್ರಕ್ಕೆ ಅಂಜನ್‌ಮೆಗೋಟಿ ಕಥೆ ಬರೆದಿದ್ದಾರೆ.

ಬಹಳಷ್ಟು ಸಿರಿಯಲ್‌ಗಳಿಗೆ ಸ್ಕ್ರಿಪ್ಟ್ ಬರೆದಿರುವ ಜಿ.ವಿ.ರಾಜೇಂದ್ರ ಸಂಭಾಷಣೆ ಬರೆದಿದ್ದು, ಪಿ.ಎಸ್.ಬಾಬು ಛಾಯಾಗ್ರಹಣ ಎಸ್ಕರ್ ಮಾರಿಯೋ ಸಂಗೀತ ಸಂಯೋಜನೆ, ಆರ್.ಪಿ.ವೆಂಕಟ್ (ವೀರ ಕನ್ನಡಿಗ) ಸಂಕಲನ ಹಾಗೂ ಪೆಂಟಾ ಶ್ರೀನಿವಾಸ್‌ರಾವ್ ನಿರ್ಮಾಣ ಸಾರಥ್ಯ ವಹಿಸಲಿದ್ದಾರೆ. ಇದೊಂದು ನಾಯಕಿ ಪ್ರಧಾನ ಚಿತ್ರವಾಗಿದ್ದು, ಐದು ಜನ ಉಪ ನಾಯಕಿರರಿರುತ್ತಾರೆ. ಈ ಐವರೂ ವಿಭಿನ್ನ ವ್ಯಕ್ತಿತ್ವ ಹೊಂದಿರುತ್ತಾರೆ.

ಇವರೆಲ್ಲರ ನೆರಳು ನಾಯಕಿ ಪೂಜಾ ಮೇಲೆ ಹೇಗೆ ಪ್ರಭಾವ ಬೀರುತ್ತದೆ. ಆಗ ಆಕೆ ಸಮಾಜವನ್ನು ಯಾವ ರೀತಿ ಎದುರಿಸುತ್ತಾಳೆ ಎಂಬುದನ್ನು ಹೊಸ ರೀತಿಯಲ್ಲಿ ಹೇಳ ಹೊರಟಿದ್ದಾರೆ ನಿರ್ದೇಶಕ ಹಾಗೂ ನಿರ್ಮಾಪಕ ಸಂಜೀವ್ ಕುಮಾರ್. ಅನು ಚಿತ್ರದ ರೀತಿಯಲ್ಲಿಯೇ ಈ ಚಿತ್ರವು ಪ್ರೇಕ್ಷಕರಿಗೆ ಹೊಸ ರೀತಿಯ ಥ್ರಿಲ್ ಅನುಭವ ನೀಡಲಿದೆಯಂತೆ. ನಟ ಅಚ್ಯುತ್ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದು, ನಾಯಕನ ಆಯ್ಕೆ ನಡೆಯುತ್ತಿದೆ.

Please Wait while comments are loading...